ಮಹಾಕುಂಭದ ಸಂಗಮದಲ್ಲಿ ಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮೂ !

ಉತ್ತರಾಖಂಡದ ಮುಖ್ಯಮಂತ್ರಿಗಳಿಂದ ಕೂಡ ಸ್ನಾನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರನ್ನು ಮಹಾಕುಂಭದಲ್ಲಿ ಸ್ವಾಗತಿಸಿದರು

ಪ್ರಯಾಗರಾಜ – ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ಮಹಾಕುಂಭದಲ್ಲಿನ ತ್ರಿವೇಣಿ ಸಂಗಮದಲ್ಲಿ ೩ ಸಲ ಮುಳುಗಿ ಸೂರ್ಯನಿಗೆ ಅರ್ಘ್ಯ ನೀಡಿದರು ಮತ್ತು ಸ್ನಾನದ ಮೊದಲು ಗಂಗಾ ಮಾತೆಗೆ ಹೂವು ಅರ್ಪಿಸಿದರು.

ರಾಷ್ಟ್ರಪತಿಯವರಿಂದ ಲೇಟೆ ಹುವೆ ಹನುಮಾನ್ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ

ಈ ಸಮಯದಲ್ಲಿ ಮಂತ್ರೋಚ್ಚಾರದ ವಾತಾವರಣದಲ್ಲಿ ಗಂಗಾ ಪೂಜೆ ಮತ್ತು ಆರತಿ ನಡೆಯಿತು. ಇದರ ನಂತರ ರಾಷ್ಟ್ರಪತಿ ಮುರ್ಮೂ ಲೇಟೆ ಹನುಮಾನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು ಆರತಿ ಮಾಡಿದರು.

ರಾಷ್ಟ್ರಪತಿಯವರು ಅಕ್ಷಯ ವಟ ದರ್ಶನ ಪಡೆದು ಪೂಜೆ ಮಾಡಿದರು.

ಅದರ ನಂತರ ಅಕ್ಷಯವಟ ಧಾಮ್‌ಗೆ ಹೋಗಿ ಪೂಜೆ ಮಾಡಿದರು. ಅವರೊಂದಿಗೆ ಉತ್ತರಪ್ರದೇಶದ ರಾಜ್ಯಪಾಲ ಆನಂದಿ ಬೇನ ಪಟೇಲ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಉಪಸ್ಥಿತರಿದ್ದರು.

ಸಂತರ ಹಸ್ತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರ ಸತ್ಕಾರ

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಸಕುಟುಂಬ ಸಂಗಮದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ಅರ್ಪಿಸಿದರು. ಮಹಾಕುಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರ ಗದ್ದಲ ಆಗುತ್ತಿರುವುದರಿಂದ ಅರೈಲ ಘಟದಿಂದ ಸಂಗಮದ ವರೆಗಿನ ಬೋಟ್ ಸೇವೆಗಳು ನಿಲ್ಲಿಸಲಾಗಿದೆ.

೧೯೫೪ ನಂತರ ಕುಂಭ ಕ್ಷೇತ್ರದಲ್ಲಿ ಸ್ನಾನ ಮಾಡುವ ದೇಶದ ಎರಡನೆಯ ರಾಷ್ಟ್ರಪತಿ !

ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ಮಹಾಕುಂಭದಲ್ಲಿ ಸ್ನಾನ ಮಾಡುವ ದೇಶದ ಎರಡನೆಯ ರಾಷ್ಟ್ರಪತಿ ಆಗಿದ್ದಾರೆ. ಈ ಹಿಂದೆ ೧೯೫೪ ರಲ್ಲಿ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ ಇವರು ಮಹಾಕುಂಭದಲ್ಲಿ ಸ್ನಾನ ಮಾಡಿದ್ದರು.