Trump Buying Gaza Strip : ಗಾಜಾಪಟ್ಟಿಯನ್ನು ಖರೀದಿಸಿ ‘ಹಮಾಸ ಮತ್ತೆಂದೂ ಅಲ್ಲಿಗೆ ಹಿಂತಿರುಗದಂತೆ’, ಪ್ರಯತ್ನಿಸೋಣ ! – ಅಧ್ಯಕ್ಷ ಟ್ರಂಪ್

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಜಾ ಪಟ್ಟಿಯನ್ನು ಖರೀದಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರು ವಾಯುಪಡೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಟ್ರಂಪ್ ಮಾತನಾಡಿ, ನಾವು ಗಾಜಾ ಪಟ್ಟಿಯನ್ನು ಖರೀದಿಸುವ ಬಗ್ಗೆ ವಿಚಾರ ಮಾಡುತ್ತಿದ್ದು, ಹಮಾಸ ಅಲ್ಲಿಗೆ ಮತ್ತೆಂದಿಗೂ ಮರಳದಂತೆ ನಾವು ಪ್ರಯತ್ನಿಸೋಣ’, ಎಂದು ಹೇಳಿದರು. ಗಾಜಾ ಪಟ್ಟಿ ಸಂಪೂರ್ಣವಾಗಿ ನಾಶವಾದ ಒಂದು ಪಟ್ಟಿಯಾಗಿದೆ. ನಮಗೆ ಯಾವುದೇ ಆತುರವಿಲ್ಲ. ನಾವು ಅದನ್ನು ನಿಧಾನವಾಗಿ ಅಭಿವೃದ್ಧಿಪಡಿಸುತ್ತೇವೆ. ನಾವು ಮಧ್ಯಪ್ರಾಚ್ಯದ ಈ ಪ್ರದೇಶದಲ್ಲಿ ಸ್ಥಿರತೆಯನ್ನು ತರಲು ಬಯಸುತ್ತೇವೆ’, ಎಂದು ಹೇಳಿದರು.

ಕೆಲವು ದಿನಗಳ ಹಿಂದೆ, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿಯಾಗಿದ್ದರು. ಆ ಸಮಯದಲ್ಲಿ “ಟ್ರಂಪ್ ಅವರು ಗಾಜಾ ಪಟ್ಟಿಗೆ ಸಂಬಂಧಿಸಿದಂತೆ ವಿಭಿನ್ನ ನಿಲುವನ್ನು ಹೊಂದಿದ್ದಾರೆ” ಎಂದು ನೆತನ್ಯಾಹು ಹೇಳಿದ್ದರು.