ತಿರುಪತಿಯ ಲಡ್ಡು ಪ್ರಸಾದದಲ್ಲಿನ ಕಲಬೆರಕೆ ಪ್ರಕರಣ; ನಾಲ್ವರ ಬಂಧನ

ತುಪ್ಪ ಪೂರೈಕೆ ಟೆಂಡರ್‌ಗಾಗಿ ಡೈರಿ ಮಾಲೀಕರು ನಕಲಿ ದಾಖಲೆಗಳನ್ನು ಸಿದ್ಧಪಡಿಸಿರುವುದು ಬಹಿರಂಗ

ನವ ದೆಹಲಿ – ತಿರುಪತಿಯ ಲಡ್ಡು ಪ್ರಸಾದದ ಪ್ರಕರಣದಲ್ಲಿ ತುಪ್ಪ ಪೂರೈಕೆ ಟೆಂಡರ್‌ಗಾಗಿ ಡೈರಿ ಮಾಲೀಕರು ನಕಲಿ ದಾಖಲೆಗಳನ್ನು ಸಿದ್ಧಪಡಿಸಿರುವುದು ಬಹಿರಂಗವಾಗಿದೆ. ಇವರ ಹೆಸರುಗಳು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ ಜೈನ್ ಮತ್ತು ಪೋಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ ಚಾವಡಾ ಮತ್ತು ಎಆರ್ ಡೈರಿಯ ರಾಜು ರಾಜಶೇಖರನ್ ಎಂದು ತಿಳಿದುಬಂದಿದೆ. ತಿರುಪತಿ ಪ್ರಸಾದದ ಲಡ್ಡು ತಯಾರಿಸಲು ತುಪ್ಪ ಪೂರೈಕೆಯಲ್ಲಿ ಅಕ್ರಮಗಳು ಕಂಡುಬಂದ ನಂತರ ನಾಲ್ವರನ್ನು ಬಂಧಿಸಲಾಗಿದೆ. ಸಿಬಿಐಯ ತನಿಖೆಯಲ್ಲಿ, ವೈಷ್ಣವಿ ಡೈರಿಯ ಪ್ರತಿನಿಧಿಗಳು ಎಆರ್ ಡೈರಿಯ ಹೆಸರಿನಲ್ಲಿ ಟೆಂಡರ್‌ಗಳನ್ನು ಪಡೆದಿದ್ದರು. ವೈಷ್ಣವಿ ಡೈರಿಯು ಟೆಂಡರ್ ಪ್ರಕ್ರಿಯೆಯಲ್ಲಿ ತಿರುಚುವ ಸಲುವಾಗಿ ಎಆರ್ ಡೈರಿಯ ಹೆಸರನ್ನು ಬಳಸಿಕೊಂಡು ನಕಲಿ ದಾಖಲೆಗಳನ್ನು ಸಿದ್ಧಪಡಿಸಿತ್ತು. ವೈಷ್ಣವಿ ಡೈರಿ ನಿರ್ಮಿಸಿದ್ದ ನಕಲಿ ದಾಖಲೆಗಳಲ್ಲಿ ಅವರು ರೂರ್ಕಿಯ ಭೋಲೆ ಬಾಬಾ ಡೈರಿಯಿಂದ ತುಪ್ಪ ಖರೀದಿಸಿರುವುದಾಗಿ ಹೇಳಿಕೊಂಡಿದೆ; ಆದರೆ ಅವರಿಗೆ ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡುವ ಸಾಮರ್ಥ್ಯವಿರಲಿಲ್ಲ.