ಇಲ್ಲಿಯವರೆಗೆ ೨ ಸಾವಿರಕ್ಕಿಂತ ಹೆಚ್ಚು ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳ ಆಯೋಜನೆಯನ್ನು ಶಾಂತವಾಗಿ ಮಾಡಿದ ಹಿಂದೂ ಜನಜಾಗೃತಿ ಸಮಿತಿಯ ಸಾಧಕರ ಮೇಲೆ ಒಂದು ರಾಜ್ಯದ ಕಾಂಗ್ರೆಸ್ ಸರಕಾರದ ಪೊಲೀಸರ ದಬ್ಬಾಳಿಕೆ !
ಹಿಂದೂ ಜನಜಾಗೃತಿ ಸಮಿತಿಯು ಕಳೆದ ೨೨ ವರ್ಷಗಳಿಂದ ಹಿಂದೂ ಜಾಗೃತಿ, ಧರ್ಮರಕ್ಷಣೆ ಮತ್ತು ರಾಷ್ಟ್ರರಕ್ಷಣೆ ಈ ಉದ್ದೇಶದಿಂದ ದೇಶದಾದ್ಯಂತ ನಿರಂತರವಾಗಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಗಳನ್ನು ಆಯೋಜಿಸುತ್ತಿದೆ. ಇಲ್ಲಿಯ ವರೆಗೆ ೨ ಸಾವಿರದ ೨೫ ಕ್ಕಿಂತ ಹೆಚ್ಚು ಸಭೆಗಳು ಶಾಂತ ರೀತಿಯಲ್ಲಿ ಮತ್ತು ಭವ್ಯ ಸ್ವರೂಪದಲ್ಲಿ ನೆರವೇರಿವೆ. ಈ ಸಭೆಗಳಿಂದ ಯಾವುದೇ ಹಾನಿಯಾಗಿಲ್ಲ, ತದ್ವಿರುದ್ಧ ೨೦ ಲಕ್ಷಗಳಿಗಿಂತ ಹೆಚ್ಚು ಹಿಂದೂ ಬಾಂಧವರು ಧರ್ಮರಕ್ಷಣೆಗಾಗಿ ಜಾಗೃತರಾಗಿ ಧರ್ಮಪಾಲನೆ ಯನ್ನು ಮಾಡತೊಡಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒಂದು ರಾಜ್ಯದ ಕಾಂಗ್ರೆಸ್ ಸರಕಾರದ ಪೊಲೀಸರು ನಗರದ ಒಂದು ದೇವಸ್ಥಾನದಲ್ಲಿನ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ತಡೆಗಟ್ಟಲು ಬಹಳ ಪ್ರಯತ್ನಿಸಿದರು.
೧. ಸಭೆಯ ಮೊದಲು ಪ್ರಸಾರ ಮಾಡಲು ಸ್ಥಳೀಯ ಪೊಲೀಸರಿಂದಾದ ವಿರೋಧ
ಸಭೆಯ ಎರಡು ದಿನ ಮೊದಲು ನಗರದ ಪೊಲೀಸ್ ಆಯುಕ್ತರಿಂದ ಪೂರ್ವಪ್ರಚಾರಕ್ಕಾಗಿ ರಿಕ್ಷಾದಲ್ಲಿ ಧ್ವನಿವರ್ಧಕದ ಮೂಲಕ ಸಭೆಯ ಪ್ರಸಾರಕ್ಕೆ ಅನುಮತಿ ಪಡೆದು ಪ್ರಸಾರ ಆರಂಭಿಸಲಾಯಿತು; ಆದರೆ ಅದೇ ರಾತ್ರಿ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಆಯೋಜಕರಿಗೆ ಸಂಚಾರವಾಣಿ ಕರೆ ಮಾಡಿ ’ನಾಳೆ ಧ್ವನಿವರ್ಧಕದಲ್ಲಿ ಪ್ರಸಾರ ಮಾಡಬೇಡಿ. ನಿಮ್ಮ ಉದ್ಘೋಷಣೆ ಉದ್ರೇಕಕಾರಿಯಾಗಿರುತ್ತದೆ. ನೀವು ಪೊಲೀಸ್ ಠಾಣೆಗೆ ಬಂದು ಚರ್ಚೆ ಮಾಡಿ’, ಎಂದರು. ಮರುದಿನ ಆಯೋಜಕರು ಪೊಲೀಸ್ ಠಾಣೆಗೆ ಹೋದಾಗ ಪೊಲೀಸ್ ಅಧಿಕಾರಿಗಳು ’ಇಂದು ನೀವು ರಿಕ್ಷಾದಲ್ಲಿ ಉದ್ಘೋಷಣೆ ಮಾಡಬೇಡಿ’, ಎಂದು ಎಚ್ಚರಿಕೆ ನೀಡಿ ಆ ರೀತಿ ಬರೆಸಿಕೊಂಡರು. ಅನಂತರ ಅವರು, ”ನಮ್ಮ ದೇಶದಲ್ಲಿ ಜಾತ್ಯತೀತವಿರುವಾಗ ನೀವು ಹಿಂದೂ ರಾಷ್ಟ್ರ ಎನ್ನುವುದು ಸಂವಿಧಾನಬಾಹಿರವಲ್ಲವೇ ? ನಾಳೆ ಇತರ ಧರ್ಮದವರು, ’ನಾವೂ ಇಸ್ಲಾಮಿಕ್ ರಾಷ್ಟ್ರ ಕ್ಕಾಗಿ ಸಭೆ ತೆಗೆದುಕೊಳ್ಳುವುದಿದೆ’, ಹಾಗಾದರೆ ಅವರಿಗೂ ಅನುಮತಿ ನೀಡಬೇಕಾಗುವುದು. ಇದರಿಂದ ಸಮಾಜದ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ?”, ಎಂದು ಕೇಳಿದರು. ಇದಕ್ಕೆ ಸಮಿತಿಯ ಕಾರ್ಯಕರ್ತರು, ”ನಾವು ಸಂವಿಧಾನದ ಚೌಕಟ್ಟಿನಲ್ಲಿದ್ದು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿದ್ದೇವೆ”, ಎಂದು ಹೇಳಿದರು. ಸಮಿತಿಯ ೫ ಸಾಧಕರನ್ನು ಸುಮಾರು ಅರ್ಧ ದಿನ ಪೊಲೀಸ್ ಠಾಣೆಯಲ್ಲಿ ಇರಿಸಿ ಪೊಲೀಸರು ಸಮಿತಿಯ ಸಮನ್ವಯಕರ ಸಂಪೂರ್ಣ ವಿಳಾಸ, ಹಾಗೆಯೇ ಸಮಿತಿಯ ಪದಾಧಿಕಾರಿಗಳ ಮಾಹಿತಿಯನ್ನು ಪದೇಪದೇ ಕೇಳಿದರು.
೨. ಸಭೆ ನಡೆಸಲು ಪೊಲೀಸರಿಂದ ಷರತ್ತು !
ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮತ್ತೆ ಆಯೋಜಕರಿಗೆ, ”ನಿಮಗೆ ಸಂವಿಧಾನದತ್ತ ಹಕ್ಕುಗಳಿಗನುಸಾರ ಸಭೆ ತೆಗೆದು ಕೊಳ್ಳುವ ಅಧಿಕಾರವಿದೆ; ಆದರೆ ಮುಂದಿನ ಷರತ್ತು ಅನ್ವಯವಾಗುತ್ತದೆ. ಇದರಲ್ಲಿ ’ಭಾಷಣದಲ್ಲಿ ಇತರ ಪಂಥದವರ ವಿರುದ್ಧ ಮಾತನಾಡಬಾರದು, ಉದ್ರೇಕಕಾರಿ ವಿಷಯವನ್ನು ಮಂಡಿಸ ಬಾರದು, ಸಂಪೂರ್ಣ ಕಾರ್ಯಕ್ರಮದ ಚಿತ್ರೀಕರಣ ಮಾಡಲು ಪೊಲೀಸರಿಗೆ ಅನುಮತಿ ನೀಡಬೇಕು’, ಮುಂತಾದ ಷರತ್ತುಗಳಿದ್ದವು. ಈ ಷರತ್ತುಗಳ ಬಗ್ಗೆ ಆಯೋಜಕರು, ”ಮಸೀದಿಗಳಲ್ಲಾಗುವ ಕಾರ್ಯಕ್ರಮಗಳದ್ದೂ ನೀವು ಇದೇ ರೀತಿ ಚಿತ್ರೀಫ್ರಿಸುತ್ತೀರಾ ?”, ಎಂದು ಕೇಳಿದಾಗ ಪೊಲೀಸರು, ’ಧಾರ್ಮಿದ ಕಾರ್ಯಕ್ರಮಗಳ ಚಿತ್ರೀಕರಣ ಮಾಡುವುದಿಲ್ಲ; ಆದರೆ ಜಾಗೃತಿಯ ಕಾರ್ಯಕ್ರಮಗಳ ಚಿತ್ರೀಕರಿಸುತ್ತೇವೆ, ಎಂದು ಹೇಳಿದರು.
೩. ಪೊಲೀಸರಿಂದ ಸಭೆಯ ಚಿತ್ರೀಕರಣ
ಸಭೆಯ ದಿನ ಪೊಲೀಸ್ ಅಧಿಕಾರಿಗಳು ಸಭೆಯ ಸ್ಥಳಕ್ಕೆ ಬಂದು ’ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶಕ್ಕನುಸಾರ ನಾವೇ ಚಿತ್ರೀಕರಣ ಮಾಡಲಿದ್ದೇವೆ’, ಎಂದು ಹೇಳಿ ಸಂಪೂರ್ಣ ಸಭೆಯ ಚಿತ್ರೀಕರಣ ಮಾಡಿದರು.
೪. ಸಭೆಯ ನಂತರ ಪೊಲೀಸರು ಮಾಡಿದ ವಿರೋಧ ಮತ್ತು ಅವರಿಗೆ ಓರ್ವ ಹಿಂದುತ್ವನಿಷ್ಠರು ನೀಡಿದ ಪ್ರತ್ಯುತ್ತರ !
ಸಭೆ ಸಮಯದಲ್ಲಿ ಮುಕ್ತಾಯಗೊಂಡಿತು. ಅನಂತರ ಅಲ್ಲಿ ಅಲ್ಲಿನ ಕೆಲವು ಹಿಂದುತ್ವನಿಷ್ಠರೊಂದಿಗೆ ಸಮಿತಿಯ ಸಾಧಕರ ಚರ್ಚೆ ನಡೆದಿತ್ತು. ಅಷ್ಟರಲ್ಲಿ ಪೊಲೀಸರು ’ಕಾರ್ಯ ಕ್ರಮದ ಸಮಯ ಮುಗಿದಿದೆ, ನೀವು ಈ ಚರ್ಚೆಯನ್ನು ತಕ್ಷಣ ನಿಲ್ಲಿಸಿ’, ಎಂದು ಸೂಚಿಸಿದರು. ಆ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಓರ್ವ ಹಿಂದುತ್ವನಿಷ್ಠರು ಪೊಲೀಸರಿಗೆ, ”ನಾವು ಭಾರತದಲ್ಲಿ ಇರುವೆವೋ ಅಥವಾ ಪಾಕಿಸ್ತಾನದಲ್ಲಿ ? ನಾವು ನಮ್ಮ ದೇವಸ್ಥಾನದಲ್ಲಿ ಸಭೆ ನಡೆಸುತ್ತಿದ್ದೇವೆ, ಅದನ್ನು ನಿಲ್ಲಿಸುವವರು ನೀವ್ಯಾರು ?”, ಎಂದು ಪ್ರಶ್ನಿಸಿದರು. ಆ ಸಮಯದಲ್ಲಿ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರು. ಅನಂತರ ಈ ಹಿರಿಯ ಅಧಿಕಾರಿಗಳು ಆ ಹಿಂದುತ್ವನಿಷ್ಠರೊಂದಿಗೆ ಚರ್ಚೆ ಮಾಡಿದರು. ಇದರ ಪರಿಣಾಮವೆಂದು ಪೊಲೀಸರು ಶಾಂತರಾಗಬೇಕಾಯಿತು. – ಹಿಂದೂ ಜನಜಾಗೃತಿ ಸಮಿತಿಯ ಓರ್ವ ಕಾರ್ಯಕರ್ತ