ನವದೆಹಲಿ – ಅಮೇರಿಕೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ರಾಷ್ಟ್ರವಾದಿಯಾಗಿದ್ದಾರೆ. “ಕಳೆದ 80 ವರ್ಷಗಳಿಂದ, ಅಮೇರಿಕಾ ಒಂದು ರೀತಿ ಸಂಪೂರ್ಣ ಜಗತ್ತಿನ ಜವಾಬ್ದಾರಿಯನ್ನು ವಹಿಸಿಕೊಂಡಿದೆ, ಅದು ನಿಷ್ಪ್ರಯೋಜಕವಾಗಿದೆ” ಎಂದು ಟ್ರಂಪ್ ಅವರಿಗೆ ಅನಿಸುತ್ತಿದೆ. “ಜಗತ್ತಿನಲ್ಲಿ ಅಮೇರಿಕೆಯಿಂದ ಎಷ್ಟು ಖರ್ಚು ಮಾಡಲಾಗುತ್ತದೆಯೋ, ಅದನ್ನು ಅಮೇರಿಕದಲ್ಲಿಯೇ ಖರ್ಚು ಮಾಡಬೇಕು” ಎಂಬುದು ಅವರ ಸಿದ್ಧಾಂತವಾಗಿದೆ. ನಮ್ಮ ಅಭಿಪ್ರಾಯದಲ್ಲಿ, ಭಾರತವು ಅಮೇರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಟ್ರಂಪ್ ಅವರ ಕೆಲವು ನೀತಿಗಳು ಭಾರತಕ್ಕೆ `ಔಟ್ ಆಫ್ ಸಿಲೆಬಸ್’ (ಚೌಕಟ್ಟಿನ ಹೊರಗೆ) ಇರುವ ಸಾಧ್ಯತೆಯಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಮಾಹಿತಿ ನೀಡಿದರು. ಅವರು ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಡಾ. ಜೈಶಂಕರ್ ಅವರನ್ನು ಅಮೇರಿಕದ ಸಂದರ್ಭದಲ್ಲಿ ಪ್ರಶ್ನೆ ಕೇಳಿದಾಗ, ಅವರು ಮೇಲಿನ ಮಾಹಿತಿಯನ್ನು ನೀಡಿದರು.
ಅಮೇರಿಕೆಯೊಂದಿಗೆ ಕೆಲವು ಅಂಶಗಳ ಬಗ್ಗೆ ಸಮ್ಮತಿಯಿದ್ದರೆ, ಕೆಲವು ಅಂಶಗಳ ಮೇಲೆ ಭಿನ್ನಾಭಿಪ್ರಾಯ
ಡಾ. ಜೈಶಂಕರ್ ಅವರು ಟ್ರಂಪ್ ಅವರ ಹಲವು ನೀತಿಗಳು ಜಾಗತಿಕ ವ್ಯವಹಾರಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡರು. ಅವರು ಅನೇಕ ವಿಷಯಗಳನ್ನು ಬದಲಾಯಿಸಬಹುದು. ಬಹುಶಃ ಕೆಲವು ವಿಷಯಗಳು ವ್ಯಾಪ್ತಿಯ ಹೊರಗೆ ಇರಬಹುದು; ಆದರೆ ದೇಶದ ಹಿತದೃಷ್ಟಿಯಿಂದ ನಾವು ವಿದೇಶಾಂಗ ನೀತಿಯ ಬಗ್ಗೆ ಮುಕ್ತವಾಗಿರಬೇಕು. ನಾವು ಒಪ್ಪದೇ ಇರುವ ಕೆಲವು ಸೂತ್ರಗಳು ಇರಬಹುದು; ಆದರೆ ನಮ್ಮ ವ್ಯಾಪ್ತಿಗೆ ಬರುವ ಹಲವು ವಿಷಯಗಳು ನಮ್ಮ ಕಾರ್ಯಕ್ಷೇತ್ರಗಳಲ್ಲಿರಬಹುದು.
ಭಾರತೀಯರಲ್ಲದವರು ಸಹ ಈಗ ತಮ್ಮನ್ನು ಭಾರತೀಯರೆಂದು ಕರೆದುಕೊಳ್ಳುತ್ತಿದ್ದಾರೆ !
ಡಾ. ಜೈಶಂಕರ್ ಅವರು ಭಾರತದ ಜಾಗತಿಕ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಮಾತನಾಡಿ, ಭಾರತೀಯರಲ್ಲದವರು ಸಹ ಈಗ ತಮ್ಮನ್ನು ಭಾರತೀಯರೆಂದು ಕರೆದುಕೊಳ್ಳುತ್ತಿದ್ದಾರೆ. “ವಿದೇಶಗಳಲ್ಲಿ ವಾಸಿಸುವ ಭಾರತೀಯರು ಈಗಲೂ ಅವರ ಸಹಾಯಕ್ಕಾಗಿ ಭಾರತವನ್ನು ಅವಲಂಬಿಸಿದ್ದಾರೆ.” ದೇಶದಿಂದ ಹೊರಗೆ ಹೋಗುವವರು ಮಾತ್ರ ನಮ್ಮ ಬಳಿಗೆ ಬರುತ್ತಾರೆ. “ನಾವು ಹೊರಗಿನವರ ರಕ್ಷಕರು ಆಗಿದ್ದೇವೆ’’ ಎಂದು ಸಹ ಡಾ. ಜೈಶಂಕರ್ ಹೇಳಿದರು.