Uniform Civil Code In Uttarakhand : ಉತ್ತರಾಖಂಡದಲ್ಲಿ ಅತಿ ಶೀಘ್ರದಲ್ಲೇ ಸಮಾನ ನಾಗರಿಕ ಕಾನೂನು ಜಾರಿಗೆ ಬರಲಿದೆ !

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಾಖಂಡ ಸರಕಾರವು ಮುಂಬರುವ ದಿನಗಳಲ್ಲಿ ಸಮಾನ ನಾಗರಿಕ ಕಾಯಿದೆಯನ್ನು ಜಾರಿಗೆ ತರಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಕಾರದ ವಿಧಿವಿಧಾನಗಳು ಪೂರ್ಣಗೊಂಡಿವೆ. ರಾಜ್ಯ ಸಚಿವ ಸಂಪುಟವೂ ಇದಕ್ಕೆ ಒಪ್ಪಿಗೆ ನೀಡಿದೆ. ಉತ್ತರಾಖಂಡ ಸರಕಾರವು ಒಪ್ಪಿಗೆ ನೀಡಿದ ನಂತರ ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸುವ ದೇಶದ ಮೊದಲ ರಾಜ್ಯವಾಗಲಿದೆ. ಪ್ರಸ್ತುತ ಗೋವಾದಲ್ಲಿ ಈ ಕಾನೂನು ಜಾರಿಯಲ್ಲಿದ್ದರೂ ಪೋರ್ಚುಗೀಸರ ಕಾಲದಿಂದಲೂ ಅಲ್ಲಿ ಜಾರಿಯಲ್ಲಿದೆ.

ಮೂಲಗಳು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈ ಕಾನೂನು ಎಲ್ಲಾ ನಿವಾಸಿಗಳಿಗೂ ಅನ್ವಯಿಸುತ್ತದೆ. ಸಂವಿಧಾನದ ಕಲಂ 342 ಮತ್ತು 366 (25) ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಸಂರಕ್ಷಿತ ವ್ಯಕ್ತಿಗಳು ಹಾಗೂ ಸಮುದಾಯಗಳನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪುರುಷರ ವಯಸ್ಸು 21 ಮತ್ತು ಮಹಿಳೆಯ ವಯಸ್ಸು 18 ವರ್ಷವಾಗಿದ್ದರೆ, ಅವರು ಮದುವೆಯಾಗಬಹುದು. ಯಾವುದೇ ಧಾರ್ಮಿಕ ಸಂಪ್ರದಾಯ ಅಥವಾ ಕಾನೂನಿನ ವಿಧಾನದ ಪ್ರಕಾರ ಮದುವೆಯನ್ನು ನಡೆಸಬಹುದು; ಆದರೆ ಅದು ಆದ ನಂತರದಿಂದ 60 ದಿನಗಳ ಒಳಗೆ ನೋಂದಾಯಿಸುವುದು ಕಡ್ಡಾಯವಾಗಿದೆ.

ಸಂಪಾದಕೀಯ ನಿಲುವು

ಪ್ರತಿಯೊಂದು ರಾಜ್ಯದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿ ಮಾಡುವ ಬದಲು, ಇಡೀ ದೇಶಕ್ಕಾಗಿ ಕೇಂದ್ರ ಸರಕಾರವೇ ಮಾಡುವುದು ಅವಶ್ಯಕವಾಗಿದೆ !