ನಟ ಅನ್ನು ಕಪೂರ್ ಇವರಿಂದ ಮಾಹಿತಿ
ಮುಂಬಯಿ – 2007 ರಲ್ಲಿ ‘ಚಕ ದೇ ಇಂಡಿಯಾ !’ ಹೆಸರಿನ ಹಿಂದಿ ಚಲನಚಿತ್ರ ಪ್ರದರ್ಶನಗೊಂಡಿತ್ತು, ಅದರಲ್ಲಿ ಹಾಕಿ ಪ್ರಶಿಕ್ಷಕನ ಕಥೆ ತೋರಿಸಲಾಗಿತ್ತು. ಈ ಚಲನಚಿತ್ರದಲ್ಲಿ ಶಾಹರೂಖ ಖಾನ್ ಪ್ರಶಿಕ್ಷಕನಾಗಿದ್ದನು. ಮತ್ತು ಅವನ ಹೆಸರು ಕಬೀರ ಖಾನ್ ಎಂದು ಇತ್ತು; ಆದರೆ ಪ್ರತ್ಯಕ್ಷದಲ್ಲಿ ಈ ಚಲನಚಿತ್ರದ ಕಥೆ ಒಂದು ಹಿಂದೂ ಪ್ರಶಿಕ್ಷಕನ ಆಧಾರಿತವಾಗಿತ್ತು, ಅವನ ಹೆಸರು ಮಿರ ರಂಜನ ನೇಗಿ ಆಗಿದೆ. ಚಲನಚಿತ್ರ ನಿರ್ಮಾಪಕರು ಬೇಕಂತಲೇ ಈ ಪಾತ್ರದಲ್ಲಿ ಹಿಂದೂ ಬದಲು ಮುಸಲ್ಮಾನನನ್ನು ತೋರಿಸಿದ್ದರು, ಎಂದು ನಟ ಅನ್ನು ಕಪೂರ್ ಇವರು ‘ಎ.ಎನ್.ಐ’ (ಏಶಿಯನ್ ನ್ಯೂಸ್ ಇಂಟರ್ನ್ಯಾಷನಲ್) ಈ ವಾರ್ತಾ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿ ನೀಡಿದರು. ಮೀರ ರಂಜನ ನೇಗಿ ಇವರು ಪ್ರಸಿದ್ಧ ಹಾಕಿ ಆಟಗಾರರಾಗಿದ್ದರು. ಅವರು ಭಾರತೀಯ ಮಹಿಳಾ ಹಾಕಿ ಸಂಘಕ್ಕೆ ಪ್ರಶಿಕ್ಷಣ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಈ ಸಂಘದಿಂದ ಕಾಮನ್ವೆಲ್ತ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗೆದ್ದಿತ್ತು.
“Chak De India changed the coach’s religion from Hindu to Mu$l!m,” – Annu Kapoor in Podcast
Mohandas Gandhi’s journey of portraying Hindus as inferior and showing Mu$l!ms in positive light has not stopped.
There is no alternative to the #HinduRashtra to stop this narrative and… pic.twitter.com/qcorOMtWnC
— Sanatan Prabhat (@SanatanPrabhat) October 26, 2024
ಭಾರತದಲ್ಲಿ ಹಿಂದೂ ಪೂಜಾರಿಗಳನ್ನು ಯಾವಾಗಲೂ ಗೇಲಿ ಮಾಡುವ ಪ್ರಯತ್ನ ನಡೆಯುತ್ತದೆ !
ಅನ್ನು ಕಪೂರ್ ಮಾತು ಮುಂದುವರೆಸಿ, ಭಾರತದಲ್ಲಿ ಯಾವಾಗಲೂ ಮುಸಲ್ಮಾನರ ಪಾತ್ರ ಒಳ್ಳೆಯದಾಗಿ ಹಾಗೂ ಹಿಂದೂ ಪೂಜಾರಿಗಳನ್ನು ಗೇಲಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದರ ನಂತರ ಮತ್ತೆ ‘ಗಂಗಾ – ಜಮುನಿ ತಹಜೀಬ್’ ದ(ಗಂಗಾ ಮತ್ತು ಯಮುನಾ ಈ ನದಿಗಳ ದಡದಲ್ಲಿ ವಾಸಿಸುವ ಹಿಂದೂ ಮತ್ತು ಮುಸಲ್ಮಾನ ಇವರಲ್ಲಿ ಕಥಿತ ಐಕ್ಯತೆ ತೋರಿಸುವ ಸಂಸ್ಕೃತಿ) ವಿಚಾರಗಳ ವಿಷಯ ಹೇಳಿದ್ದಾರೆ. (ಇದೆ ಹಿಂದಿ ಚಲನಚಿತ್ರರಂಗದ ನಿಜವಾದ ಮುಖವಾಡ ! ಈಗ ಹಿಂದುಗಳು ಇಂತಹ ಚಲನಚಿತ್ರಗಳನ್ನು ಬಹಿಷ್ಕಾರ ಮಾಡುವುದು ಆರಂಭಿಸಿದರೆ ಆಶ್ಚರ್ಯ ಅನಿಸಬಾರದು ! – ಸಂಪಾದಕರು)
ಸಂಪಾದಕೀಯ ನಿಲುವು
|