
ಮುಂಬಯಿ – ನನ್ನನ್ನು ಇಸ್ಲಾಂ ಸ್ವೀಕರಿಸಲು ಬ್ರೈನ್ ವಾಶ್ ಮಾಡಲಾಗಿತ್ತು. ಈಗ ಸನಾತನ ಧರ್ಮಕ್ಕೆ ಹಿಂತಿರುಗಿ ಬಂದಿರುವುದರಿಂದ ನನಗೆ ಆನಂದವಾಗಿದೆ. ‘ಹಿಂದೂ ಧರ್ಮದಲ್ಲಿ ಪ್ರತಿಯೊಂದು ಅಂಶ ತಪ್ಪಾಗಿದೆ’, ಎಂದು ನನಗೆ ಹೇಳಲಾಗಿತ್ತು, ಎಂದು ನಟಿ ಚಾಹತ ಖನ್ನಾ ಇವರು ಒಂದು ಸಂದರ್ಶನದಲ್ಲಿ ಮಾಹಿತಿ ನೀಡಿದರು. ‘ಟೆಲಿ ಟಾಕ್ ಇಂಡಿಯಾ’ ಈ ವಾಹಿನಿಗೆ ನೀಡಿರುವ ೪೩ ನಿಮಿಷದ ಸಂದರ್ಶನದಲ್ಲಿ ಚಾಹತ ಖನ್ನಾ ಮಾತನಾಡುತ್ತಿದ್ದರು. ಇದರಲ್ಲಿ ಚಾಹತ ಖನ್ನಾ ಇವರು ಫರಹಾನ್ ಮಿರ್ಝಾ ಇವರ ಜೊತೆಗೆ ವಿವಾಹ ಮಾಡಿಕೊಂಡ ನಂತರ ಇಸ್ಲಾಂ ಸ್ವೀಕರಿಸುವುದು ಮತ್ತು ಅದರ ನಂತರ ಮತ್ತೆ ಸನಾತನಕ್ಕೆ ಬರುವುದು, ಇದರ ಸಂಪೂರ್ಣ ಮಾಹಿತಿ ನೀಡಿದರು.
ಚಾಹತ ಖನ್ನಾ ಇವರು ೨೦೦೬ ರಲ್ಲಿ ಉದ್ಯಮಿ ಭರತ ನರಸಿಂಹಾನಿ ಇವರ ಜೊತೆಗೆ ವಿವಾಹ ಮಾಡಿಕೊಂಡರು; ಆದರೆ ನಂತರ ವಿಚ್ಛೇದನವಾಯಿತು. ಬಳಿಕ ಚಾಹತ್ ಇವರು ಫರಹಾನ ಮಿರ್ಝಾ ಜೊತೆಗೆ ವಿವಾಹ ಮಾಡಿಕೊಂಡರು. ಚಾಹತ ಇಸ್ಲಾಂ ಧರ್ಮ ಸ್ವೀಕರಿಸಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಪಡೆದಿದ್ದರು. ೨೦೧೮ ರಲ್ಲಿ ಚಾಹತ ಇವರು ಫರಹಾನನಿಂದ ವಿಚ್ಛೇದನ ಪಡೆದರು.
ಚಾಹತ ಖನ್ನಾ ಹೇಳಿರುವುದು,
೧. ನಾನು ಶ್ರೀ ಕಾಳಿ ದೇವಿಯ ಮತ್ತು ಶ್ರೀಕೃಷ್ಣನ ಭಕ್ತಳಾಗಿದ್ದೇನೆ. ವಿಚ್ಛೇದನ ನಂತರ ನನ್ನ ಮೂಲ ಧರ್ಮಕ್ಕೆ ಹಿಂತಿರುಗಲು ನನಗೆ ಸುಮಾರು ೪-೫ ವರ್ಷಗಳೇ ಬೇಕಾಯಿತು; ಕಾರಣ ನನಗೆ ಇಸ್ಲಾಂನ ಮೇಲೆ ವಿಶ್ವಾಸವಿದೆ. ನನಗೆ ಇಂದಿಗೂ ಕೂಡ ಇಸ್ಲಾಂನಲ್ಲಿನ ಕೆಲವು ವಿಷಯಗಳು ಹಿಡಿಸುತ್ತವೆ; (ಬ್ರೈನ್ ವಾಶ್ ನ ಪರಿಣಾಮ ಇನ್ನು ಚಾಹತ ಖನ್ನಾ ಇವರ ಮೇಲೆ ಇರುವುದು ಕಂಡು ಬರುತ್ತದೆ, ಹೀಗೆ ಯಾರಾದರೂ ಹೇಳಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ ! – ಸಂಪಾದಕರು) ಆದರೂ ಕೂಡ ನಾನು ನನ್ನ ಮೂಲಕ್ಕೆ ಹಿಂತಿರುಗಿ ಬಂದಿದ್ದೇನೆ. ನಾನು ನನ್ನನ್ನು ಭಾಗ್ಯಶಾಲಿ ತಿಳಿದಿದ್ದೇನೆ.
೨. ನಾನು ದಾರಿ ತಪ್ಪಿದ್ದೆ, ಯಾವಾಗ ಮಕ್ಕಳು ಚಿಕ್ಕವರಾಗಿರುತ್ತಾರೆ, ‘ಆಗ ಏನು ಮಾಡುತ್ತಿದ್ದೇವೆ ಅದು ತಪ್ಪಾಗಿದೆ’ ಹೀಗೆ ಯಾರಾದರೂ ಹೇಳಿರುವುದರಿಂದ ನಮ್ಮ ಮೇಲೆ ಅದರ ಪ್ರಭಾವ ಬೀರುತ್ತದೆ. ಅದರ ನಂತರ ನಾವು ತಪ್ಪಾದ ಮಾರ್ಗದಲ್ಲಿ ಹೋಗಬಹುದು. ನನ್ನ ಸಂದರ್ಭದಲ್ಲಿ ಕೂಡ ಹೀಗೆಯೇ ನಡೆದಿದೆ; ಆದರೆ ನಾನು ಸನಾತನಕ್ಕೆ ಹಿಂತಿರುಗಿ ಬಂದಿದ್ದೇನೆ.
Chahatt Khanna who was brainwashed into marrying Farhan Mirza, the son of Bollywood writer Shahrukh Mirza and converting to I$|@m does Ghar Wapsi
चाहत खन्ना #GharWapsi #GharVapsi #SanatanDharma pic.twitter.com/3jAhRL7pqw
— Sanatan Prabhat (@SanatanPrabhat) October 23, 2024
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ