ಶೇ. 95 ರಷ್ಟು ಹಿಂದೂಗಳಿರುವ ಗೋವಿಂದಪುರ (ಬಿಹಾರ) ಗ್ರಾಮವನ್ನು ಖಾಲಿ ಮಾಡುವಂತೆ ವಕ್ಫ್ ಬೋರ್ಡ್ ನ ಆದೇಶ !

30 ದಿನಗಳಲ್ಲಿ ಗ್ರಾಮ ಖಾಲಿ ಮಾಡಬೇಕಂತೆ !

ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರು ‘ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆ’ಯನ್ನು ತೀವ್ರವಾಗಿ ವಿರೋಧಿಸಿದ ನಂತರ ಬಿಹಾರದಲ್ಲಿ ವಕ್ಫ್ ಬೋರ್ಡ್ ಸಕ್ರಿಯವಾಗಿದೆ. ‘ಬಿಹಾರ ರಾಜ್ಯ ಸುನ್ನಿ ವಕ್ಫ್ ಬೋರ್ಡ್’ ಪಾಟಲಿಪುತ್ರ ಜಿಲ್ಲೆಯ ಫತುಹಾದಲ್ಲಿರುವ ಗೋವಿಂದಪುರ ಗ್ರಾಮದ ಮೇಲೆ ತನ್ನ ಹಕ್ಕು ಸಾಧಿಸಿದೆ. 30 ದಿನದಲ್ಲಿ ಗ್ರಾಮ ಖಾಲಿ ಮಾಡುವಂತೆ ಬೋರ್ಡ್ ಆದೇಶ ಹೊರಡಿಸಿದೆ. ಈ ಗ್ರಾಮದಲ್ಲಿ ಶೇ.95 ರಷ್ಟು ಜನರು ಹಿಂದೂಗಳಾಗಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಹಿಂದೂಗಳು ಈ ಭೂಮಿ ನಮಗೆ ಸೇರಿದ್ದು, ವಕ್ಫ್ ಬೋರ್ಡ್‌ನ ದಾವೆ ಸಂಪೂರ್ಣ ತಪ್ಪು ಮತ್ತು ನಿರಾಧಾರ ಎಂದು ಹೇಳುತ್ತಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ತನಿಖೆಯಲ್ಲಿ, ಗ್ರಾಮಸ್ಥರು ಭೂಮಿಯ ಮೇಲೆ ಪೂರ್ವಜರ ಹಕ್ಕು ಹೊಂದಿದ್ದಾರೆ ಮತ್ತು ವಕ್ಫ್ ಬೋರ್ಡ್‌ನ ದಾವೆ ಸುಳ್ಳು ಎಂದು ಕಂಡುಬಂದಿದೆ.

ಹಿಂದೂ ಗ್ರಾಮಸ್ಥರ ನಿಲುವು !

ಈ ಜಾಗವನ್ನು ಗೋವಿಂದಪುರ ಗ್ರಾಮದ ವಕ್ಫ್ ಬೋರ್ಡ್ ನವರು ಏಕಾಏಕಿ ತಮ್ಮದೆಂದು ಹೇಳಿಕೊಂಡಿದ್ದಾರೆ. 1959 ರಿಂದ ಈ ಭೂಮಿ ತನ್ನ ವಶದಲ್ಲಿದೆ ಎಂದು ಬೋರ್ಡ್‌ ದಾವೆ ಮಾಡಿದೆ, ಆದರೆ ಇಲ್ಲಿ ವಾಸಿಸುವ ಹಿಂದೂ ಗ್ರಾಮಸ್ಥರು ವಕ್ಫ್ ಬೋರ್ಡ್‌ನ ದಾವೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದರು ಮತ್ತು ‘ನಾವು 1909 ರಿಂದ ಇಲ್ಲಿ ವಾಸಿಸುತ್ತಿದ್ದೇವೆ ಮತ್ತು ನಮ್ಮ ಹೆಸರುಗಳು ಈ ಭೂಮಿಯ ದಾಖಲೆಗಳಲ್ಲಿ ಸಹ ಇಲ್ಲಿವೆ ಎಂದು ಹೇಳಿವೆ. ಗ್ರಾಮಸ್ಥರ ಪ್ರಕಾರ, ಈ ವರ್ಷವೂ ಜಮೀನು ವಿವಾದದಲ್ಲಿ ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ. ಅದಾದ ನಂತರವೂ ವಕ್ಫ್ ಬೋರ್ಡ್ ತನ್ನ ಸ್ವಂತ ಭೂಮಿ ಎಂದು ಹೇಳಿಕೊಳ್ಳುತ್ತಿದೆ. ವಕ್ಫ್ ಬೋರ್ಡ್‌ನ ಈ ಭೂಮಿ ಮೇಲಿನ ದಾವೆಯ ಕುರಿತು ಯಾವುದೇ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ.

 

ವಕ್ಫ್ ಕಾನೂನಿನ ಭೀಕರತೆ !

ಅಸೀಮಿತ ಅಧಿಕಾರದ ದುರುಪಯೋಗ ಪಡಿಸುತ್ತಾ ವಕ್ಫ್ ಬೋರ್ಡ್‌ ಕೇವಲ 13 ವರ್ಷಗಳಲ್ಲಿ ತನ್ನ ವ್ಯಾಪ್ತಿಯ ಭೂಪ್ರದೇಶವನ್ನು ದ್ವಿಗುಣಗೊಳಿಸಿದೆ. ವಕ್ಫ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಫ್ ಇಂಡಿಯಾದ ಪ್ರಕಾರ, ದೇಶದ ಎಲ್ಲಾ ವಕ್ಫ್ ಬೋರ್ಡ್‌ಗಳು ಒಟ್ಟು 8 ಲಕ್ಷದ 54 ಸಾವಿರದ 509 ಆಸ್ತಿಗಳನ್ನು ಹೊಂದಿವೆ. ಈ ಆಸ್ತಿಗಳು 8 ಲಕ್ಷ ಎಕರೆಗೂ ಹೆಚ್ಚು ಭೂಮಿಯಲ್ಲಿ ಹರಡಿಕೊಂಡಿವೆ.

ಸಂಪಾದಕೀಯ ನಿಲುವು

  • ಸೇನೆ ಮತ್ತು ರೈಲ್ವೇ ನಂತರ ವಕ್ಫ್ ಬೋರ್ಡ್‌ ದೇಶದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿದೆ. ವಕ್ಫ್ ಕಾಯಿದೆಯ ನೆಪದಲ್ಲಿ ಇಂತಹ ದಾವೆಗಳನ್ನು ಹೊರಡಿಸುವ ವಕ್ಫ್ ಬೋರ್ಡ್ ಅನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಘೋಷಿಸಲು ಭಾರತದಾದ್ಯಂತ ಇರುವ ಹಿಂದೂಗಳು ಟೊಂಕಕಟ್ಟಿ ನಿಲ್ಲಬೇಕು !
  • ಭಾರತವು ಇಸ್ಲಾಂ ಧರ್ಮದ ಉದಯಕ್ಕೂ ಮುನ್ನ ಅಸ್ತಿತ್ವದಲ್ಲಿತ್ತು. ಆದ್ದರಿಂದ ವಕ್ಫ್ ಮಂಡಳಿಯ ಎಲ್ಲ ದಾವೆಗಳನ್ನು ತಿರಸ್ಕರಿಸಿ ಭೂಮಿಯನ್ನು ಸಂಬಂಧಪಟ್ಟವರಿಗೆ ವಾಪಸ್ ನೀಡಬೇಕು. ಇದನ್ನು ಸಾಧ್ಯವಾಗಿಸಲು ಹಿಂದೂ ರಾಷ್ಟ್ರ ಬೇಕು !