ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ 77 ಸ್ಥಳಗಳಲ್ಲಿ ಭಕ್ತಿಮಯ ವಾತಾವರಣದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ಆಚರಣೆ !

ಮುಂಬಯಿ, ಜುಲೈ 21 (ಸುದ್ದಿ.) – ಹಿಂದೂ ಧರ್ಮದ ಅತ್ಯುತ್ತಮ ಮತ್ತು ಶ್ರೇಷ್ಠ ಪರಂಪರೆ ಎಂದರೆ ‘ಗುರು-ಶಿಷ್ಯ ಪರಂಪರೆ’ ! ಗುರುಪೂರ್ಣಿಮೆಯ ದಿನದಂದು ಗುರುವಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಗುರುತತ್ತ್ವವು ಗುರುಪೂರ್ಣಿಮೆಯಂದು ಗುರುತತ್ವದ ಲಾಭವು ಸಾಮಾನ್ಯಕಿಂತ 1 ಸಾವಿರ ಪಟ್ಟು ಹೆಚ್ಚು ಸಮಾಜಕ್ಕೆ ಆಗಬೇಕು, ಅದಕ್ಕಾಗಿ ಜುಲೈ 21, 2024 ರಂದು ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ 77 ಸ್ಥಳಗಳಲ್ಲಿ ‘ಗುರು ಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಆಯೋಜಿಸಲಾಯಿತು. ಇದರಲ್ಲಿ ಮರಾಠಿ ಭಾಷೆಯಲ್ಲಿ 64, ಹಿಂದಿ ಭಾಷೆಯಲ್ಲಿ 8, ತಮಿಳು ಭಾಷೆಯಲ್ಲಿ 2 ಮತ್ತು ಗುಜರಾತಿ ಮತ್ತು ಮಲಯಾಳಂ ಭಾಷೆಯಲ್ಲಿ ತಲಾ ಒಂದು ಸ್ಥಳದಲ್ಲಿ ‘ಗುರುಪೌಣಿಮಾ ಮಹೋತ್ಸವ’ದ ಆಯೋಜನೆ ಮಾಡಲಾಗಿತ್ತು. ಆರಂಭದಲ್ಲಿ ಶ್ರೀ ವ್ಯಾಸ ಪೂಜೆ ಮತ್ತು ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಭಾವಚಿತ್ರವನ್ನು ಪೂಜಿಸಲಾಯಿತು.

ಕೆಲವೆಡೆ ಸನಾತನ ಸಂಸ್ಥೆಯ ಮಾರ್ಗದರ್ಶನದಂತೆ ಸಾಧನೆ ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಮಾಡಲಾಯಿತು. ಈ ಸಮಯದಲ್ಲಿ ಸನ್ಮಾನ್ಯ ವಕ್ತಾರರು ‘ಆನಂದಪ್ರಾಪ್ತಿಗಾಗಿ ಹಾಗೂ ರಾಮರಾಜ್ಯ ಸ್ಥಾಪನೆಗಾಗಿ ಸಾಧನೆ’ ಈ ವಿಷಯದ ಕುರಿತು ಮಾರ್ಗದರ್ಶನ ಮಾಡುತ್ತಾ, ‘ರಾಮರಾಜ್ಯ ರೂಪದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ’ ಇದು ಶತಸಿದ್ಧವಾಗಿದೆ. ನಾವು ಕೇವಲ ರಾಮರಾಜ್ಯದ ಸಾಕ್ಷಿಯಾಗುವುದು ಅಷ್ಟೇ ಅಲ್ಲ, ಬದಲಾಗಿ ಜತೆಗಾರ ಆಗಬೇಕಿದೆ. ರಾಮರಾಜ್ಯದಲ್ಲಿ ಇರಲು ನಾವೂ ಸಾಧನೆ ಮಾಡಬೇಕು ಮತ್ತು ಧರ್ಮಾಚರಣಿ ಆಗಬೇಕು. ಅತ್ಯುನ್ನತವಾದ ನಿರಂತರವಾಗಿ ಉಳಿಯುವ ಆನಂದ ಸಾಧನೆಯ ಮೂಲಕ ಮಾತ್ರ ಸಿಗುತ್ತದೆ. ನಮಗೆ ಈಶ್ವರಪ್ರಾಪ್ತಿಯಾಗಲು ಒಲವು ಇದ್ದರೂ ಅಥವಾ ಇಲ್ಲದಿದ್ದರೂ, ಉತ್ತಮ ಸಂತೃಪ್ತ ಜೀವನವನ್ನು ನಡೆಸಲು ಸಾಧನೆ ಮಾಡುವುದು ಮುಖ್ಯವಾಗಿದೆ. ಆದುದರಿಂದಲೇ ಗುರುಪೂರ್ಣಿಮೆಯ ಸಂದರ್ಭದಲ್ಲಿ ಸಾಧನೆಯನ್ನು ಮಾಡಿ ಅದನ್ನು ಹೆಚ್ಚಿಸುವ ಸಂಕಲ್ಪ ಮಾಡಬೇಕು.’ ಎಂದು ಹೇಳಿದರು. ಗುರುಪೂರ್ಣಿಮೆ ಮಹೋತ್ಸವದಲ್ಲಿ ‘ಸ್ವಸಂರಕ್ಷಣ ಪ್ರಾತ್ಯಕ್ಷಿಕೆ’ ಕೂಡ ತೋರಿಸಲಾಯಿತು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ 71 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಭ್ರಮದಿಂದ ಆಚರಣೆ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶದಾದ್ಯಂತ ಕನ್ನಡ, ಮರಾಠಿ, ಬಂಗಾಳಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 71 ಕಡೆಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ಸಂಭ್ರಮದಿಂದ ನೆರವೇರಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಮತ್ತು ಜಿಜ್ಞಾಸುಗಳು ಆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಚರಣೆ !

‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯ’ದ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಕರ್ನಾಟಕದ ಬೆಂಗಳೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮತ್ತು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮರಾಠಿ ಭಾಷೆಯಲ್ಲಿ ಬಹಳ ಉತ್ಸಾಹದಿಂದ ಆಚರಿಸಲಾಯಿತು. ಈ ವೇಳೆ ಶ್ರೀ ವ್ಯಾಸ ಪೂಜೆ ಮಾಡಲಾಯಿತು. ಬಳಿಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯ, ಅಭ್ಯಾಸಕ್ರಮ ಮತ್ತು ಸಂಶೋಧನೆ ಕಾರ್ಯಗಳ ಕಿರು ಪರಿಚಯವನ್ನು ಮಾಡಲಾಯಿತು. ‘ಗುರು-ಶಿಷ್ಯ ಪರಂಪರೆಯ ಮತ್ತು ಸನಾತನ ಧರ್ಮದ ವೈಜ್ಞಾನಿಕತೆ’ ಈ ವಿಷಯದ ಕುರಿತು ಮಾರ್ಗದರ್ಶನ ಮಾಡಲಾಯಿತು. ಬಳಿಕ ‘ಟೆಂಪಲ್ ರೀಸರ್ಚ್’ ಕುರಿತ ವೀಡಿಯೋ ಪ್ರಸಾರ ಮಾಡಲಾಯಿತು.