ಕಲ್ಪವಾಸಿಗಳ ವ್ರತಕ್ಕಾಗಿ ಕುಂಭ ಕ್ಷೇತ್ರ ಸಿದ್ಧ: ಸರಕಾರದಿಂದ ವಿಶೇಷ ಸೌಕರ್ಯ!

ಮಾಘ ಪೂರ್ಣಿಮಾ ಅಂದರೆ ಜನವರಿ 13ರಿಂದ ಕಲ್ಪವಾಸ ಪ್ರಾರಂಭ!

ಕುಂಭಕ್ಷೇತ್ರವನ್ನು ಪ್ರವೇಶಿಸುವಾಗ ಕಲ್ಪವಾಸಿ

ಕಲ್ಪವಾಸ ಎಂದರೇನು?

ಕಲ್ಪವಾಸಿ ಎಂದರೆ ಮಾಘ ಪೂರ್ಣಿಮೆಯಿಂದ ಪೌಷ (ಪುಷ್ಯ) ಪೂರ್ಣಿಮೆವರೆಗಿನ 1 ತಿಂಗಳ ಅವಧಿಯಲ್ಲಿ ಕುಂಭಮೇಳ ಪ್ರದೇಶದಲ್ಲಿ ವಾಸಿಸಿ ತೀರ್ಥಸ್ಥಾನ ಮಾಡುವ, ನಾಮಜಪ ಪಠಣ, ಇತ್ಯಾದಿಗಳನ್ನು ಮಾಡುವ ಭಕ್ತರು. ಕೆಲ ಕಲ್ಪವಾಸಿಗಳು ಕೆಲವು ದಿನಗಳ ಕಾಲ ಹಾಗೂ, ಇನ್ನು ಕೆಲವರು 12 ವರ್ಷಗಳವರೆಗೂ ಸಹ ಕಲ್ಪವಾಸ ಮಾಡುತ್ತಾರೆ.

ಪ್ರಯಾಗರಾಜ್, ಜನವರಿ 11 (ಸುದ್ದಿ) – ಗಂಗಾ, ಯಮುನಾ ಮತ್ತು ಸರಸ್ವತಿ ಮೂರು ನದಿಗಳ ಪವಿತ್ರ ಸಂಗಮದಲ್ಲಿ ಕಲ್ಪವಾಸ ವ್ರತವನ್ನು ಆಚರಿಸುವ ಭಕ್ತರಿಗಾಗಿ ಕುಂಭ ಕ್ಷೇತ್ರ ಸಿದ್ಧವಾಗಿದೆ. ಕುಂಭ ಕ್ಷೇತ್ರಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸಿದ್ದಾರೆ. ಈ ವರ್ಷದ ಮಹಾಕುಂಭ ಪರ್ವಕ್ಕೆ 20 ರಿಂದ 25 ಲಕ್ಷ ಕಲ್ಪವಾಸಿಗಳು ಆಗಮಿಸಲಿದ್ದಾರೆ ಎಂದು ಸರ್ಕಾರವು ಅಂದಾಜಿಸಿದೆ. ಮಾಘ ಪೂರ್ಣಿಮೆ ಅರ್ಥಾತ್ ಜನವರಿ 12 ರಿಂದ ಪೌಷ ಪೂರ್ಣಿಮೆ ಅಂದರೆ ಫೆಬ್ರವರಿ 13 ರವರೆಗೆ ಒಂದು ತಿಂಗಳ ಕಾಲಾವಧಿಗಳ ಕಾಲ ಈ ವ್ರತ ಆಚರಿಸಲಾಗುತ್ತದೆ. ಅನೇಕ ಭಕ್ತರು ತಮ್ಮ ಕುಟುಂಬದೊಂದಿಗೆ ಕಲ್ಪವಾಸ ಮಾಡುತ್ತಾರೆ. ಬರುವ ಎಲ್ಲಾ ಕಲ್ಪವಾಸಿಗಳು ಒಂದು ತಿಂಗಳಿಗೆ ಬೇಕಾಗುವಷ್ಟು ಜೀವಾನಾವಶ್ಯಕ ವಸ್ತುಗಳನ್ನು ತಂದಿದ್ದಾರೆ. ಸ್ಥಳೀಯ ಸರ್ಕಾರವು ಈಗಾಗಲೇ ಕಲ್ಪವಾಸಿಗಳಿಗೆ ಆಹಾರ- ಧಾನ್ಯ, ವಸತಿ, ಆಸ್ಪತ್ರೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದೆ.