ಮಹಾಕುಂಭ ಮೇಳ 2025
ಪ್ರಯಾಗರಾಜ್, ಜನವರಿ 12 (ಸುದ್ದಿ) – ಕುಂಭಮೇಳದ ವೇಳೆ ಪಾರ್ಕಿಂಗ್ ಸಮಸ್ಯೆ ಬರಬಾರದು ಎಂದು ಒಟ್ಟು 101 ಭವ್ಯವಾದ ‘ಸ್ಮಾರ್ಟ್ ಪಾರ್ಕಿಂಗ್’ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ರತಿನಿತ್ಯ 5 ಲಕ್ಷ ವಾಹನಗಳನ್ನು ನಿಲ್ಲಿ ಸಬಹುದಾಗಿದೆ. ಅರೈಲ್, ಪ್ರಯಾಗ್ರಾಜ್ ನಗರ, ಜೂನ್ಸಿ, ಫಾಫಮೌ ಪದೇಶಗಳು ಸೇರಿ 1 ಸಾವಿರದ 867.4 ಹೆಕ್ಟೇರ್ ಭೂಮಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಂಭಮೇಳಕ್ಕಾಗಿ ಅನೇಕ ಭಕ್ತರು ಬಸ್ಸು, ಕಾರುಗಳನ್ನು ತಂದಿದ್ದಾರೆ. ಈ ವಾಹನಗಳ ನಿಲುಗಡೆಗೆ ಭಕ್ತರಿಗೆ ಯಾವುದೇ ತೊಂದರೆ ಆಗಬಾರದೆಂದು ಈ ವ್ಯವಸ್ಥೆ ಮಾಡಲಾಗಿದೆ.