ಅಶ್ಲೀಲ ವೆಬ್ ಸೈಟ್ ಗಳಲ್ಲಿ ವೀಡಿಯೊ ಪ್ರಸಾರ ಮಾಡಿ ಹಣ ಸಂಪಾದನೆ !
ಗೌಹಾಟಿ – ನಾಗಾಂವ್‌ನಲ್ಲಿ ಓರ್ವ ಮಹಿಳೆಯು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ವೀಡಿಯೋ ಮಾಡಿದ ಪ್ರಕರಣದಲ್ಲಿ ನಸೀಬುದ್ದೀನ್ ಮತ್ತು ಮುರ್ತಜಾ ಹಸನ್ ಹೆಸರಿನ ಇಬ್ಬರು ಮತಾಂಧ ಯುವಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಾಗಾಂವ್‌ನ ಖುಟಿಕೋಟಿಯಾ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ಒಂದು ವರದಿಯ ಪ್ರಕಾರ, ಜುಲೈ 14 ರಂದು ಸ್ನಾನ ಮಾಡುತ್ತಿರುವಾಗ ಯಾರೋ ವಿಡಿಯೋ ಮಾಡುತ್ತಿರುವುದು ಆ ಮಹಿಳೆಯ ಗಮನಕ್ಕೆ ಬಂದಿದೆ. ಆರೋಪಿಯು ‘ವೆಂಟಿಲೇಷನ್’ ಸ್ಥಳದಿಂದ ಮೊಬೈಲ್ ನ ಕ್ಯಾಮೆರಾ ಮೂಲಕ ವಿಡಿಯೋ ಮಾಡುತ್ತಿದ್ದುದನ್ನು ಕಂಡು ಆಕೆ ಕಿರುಚಿದಳು.
ಆನಂತರ ಆಕೆಯ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಈ ವಿಡಿಯೋಗಳನ್ನು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಪ್ರಸಾರ ಮಾಡಿ ಹಣ ಸಂಪಾದಿಸುತ್ತಿದ್ದರು.