Madrasa Shut Down: ಹಿಂದೂ ಕುಟುಂಬದ ಮನೆಯ ಎದುರು ನಡೆಯುತ್ತಿರುವ ಮದರಸಾ ತರಗತಿಯನ್ನು ತಕ್ಷಣ ಮುಚ್ಚುವಂತೆ ಪೊಲೀಸರಿಂದ ಆದೇಶ !

  • ಹಡಪಸರ(ಪುಣೆ)ನಲ್ಲಿ ಮತಾಂಧರು ಹಿಂದೂ ಕುಟುಂಬಕ್ಕೆ ಮಾನಸಿಕವಾಗಿ ಪೀಡಿಸಿರುವ ಪ್ರಕರಣ!

  • ‘ಸುದರ್ಶನ ನ್ಯೂಸ್’ ಈ ವಾರ್ತಾವಾಹಿನಿಯ ಪ್ರಖರ ವಾರ್ತಾ ಪ್ರಸಾರದ ಪರಿಣಾಮ !

ಹಡಪಸರ (ಪುಣೆ ಜಿಲ್ಲೆ)- 2 ದಿನಗಳ ಹಿಂದೆ ಸಸಾಣೆನಗರದಲ್ಲಿರುವ ಹಿಂದೂ ಕುಟುಂಬಕ್ಕೆ ಕೆಲವು ಮತಾಂಧರಿಂದ ತೊಂದರೆಯಾಗುತ್ತಿರುವ ವಾರ್ತೆಯನ್ನು `ಸುದರ್ಶನ ಮರಾಠಿ’ ಈ ವಾರ್ತಾವಾಹಿನಿಯು ಬಿತ್ತರಿಸಿತ್ತು. ಈ ವಾರ್ತೆಯನ್ನು ಗಮನಿಸಿದ ಪೊಲೀಸರು ಸಂಬಂಧಿತರಿಗೆ ಮೇಲೆ ಕಾಣಿಸಿದ ಹಿಂದೂ ಕುಟುಂಬದ ಮನೆಯ ಎದುರು ನಡೆಯುತ್ತಿದ್ದ ಮದರಸಾ ತರಗತಿಯನ್ನು ತಕ್ಷಣ ನಿಲ್ಲಿಸುವಂತೆ ಆದೇಶಿಸಿದೆ. ಈ ಹಿಂದೂ ಕುಟುಂಬಕ್ಕೆ ಸ್ಥಗಿತಗೊಳಿಸಲಾಗಿದ್ದ ನೀರನ್ನು ಸೊಸಾಯಟಿಯ ಅಧ್ಯಕ್ಷರಿಗೆ ಹೇಳಿ ತಕ್ಷಣವೇ ಪ್ರಾರಂಭಿಸಲಾಗಿದೆ. ಈ ರೀತಿಯಲ್ಲಿ ಹಿಂದೂ ಕುಟುಂಬಕ್ಕೆ ನ್ಯಾಯವನ್ನು ಒದಗಿಸಲಾಯಿತು. ಆದುದರಿಂದ ಈ ಹಿಂದೂ ಕುಟುಂಬವು `ಸುದರ್ಶನ ನ್ಯೂಸ’ ಮತ್ತು ಎಲ್ಲ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿತು (ವಾರ್ತಾವಾಹಿನಿಯೊಂದು ಧ್ವನಿ ಎತ್ತಿದ್ದರಿಂದ ಪೊಲೀಸರು ಕ್ರಮ ಕೈಗೊಂಡರು, ಇಲ್ಲದಿದ್ದರೆ ಅವರು ನಿಷ್ಕ್ರಿಯರಾಗಿಯೇ ಇರುತ್ತಿದ್ದರು ! – ಸಂಪಾದಕರು)

ಏನು ಈ ಪ್ರಕರಣ ?

ಹಡಪಸರ (ಪುಣೆ) ನಲ್ಲಿ 2017 ರಿಂದ ವಾಸಿಸುತ್ತಿರುವ ಹಿಂದೂ ಕುಟುಂಬಕ್ಕೆ ತಾಂಬೋಳಿ ಎಂಬ ಹೆಸರಿನ ಮುಸಲ್ಮಾನ ವ್ಯಕ್ತಿಯು ದೊಡ್ಡ ಪ್ರಮಾಣದಲ್ಲಿ ಕಿರುಕುಳ ನೀಡುತ್ತಿದ್ದನು. ತಾಂಬೋಳಿಯು ಕಟ್ಟಡದ 7 ಮನೆಗಳನ್ನು ಖರೀಸಿದಿ ಅವುಗಳನ್ನು ಮುಸಲ್ಮಾನ ಕುಟುಂಬಗಳಿಗೆ ಬಾಡಿಗೆಗೆ ನೀಡಿದ್ದಾನೆ. ಕೆಲವು ಮುಸಲ್ಮಾನರು ಈ ಕಟ್ಟಡದಲ್ಲಿ ದೊಡ್ಡದಾಗಿ ನಮಾಜುಪಠಣ ಮಾಡಿ ಅಥವಾ ಏಕಾದಶಿಯಂದು ಮೇಲೆ ಕಾಣಿಸಿದ ಹಿಂದೂ ಕುಟುಂಬದ ಮನೆಯ ಎದುರಿನಲ್ಲಿ ಮಾಂಸಾಹಾರವನ್ನಿಟ್ಟು ಆ ಹಿಂದೂ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುತ್ತಿದ್ದರು.