ಮುಂಬಯಿ , ಜೂನ್ ೧೦ (ವಾರ್ತೆ) – ೨೦೦೭ ರಲ್ಲಿ ಮಹಾರಾಷ್ಟ್ರದ ತತ್ಕಾಲಿನ ಕಾಂಗ್ರೆಸ್ ಸರಕಾರವು ವಕ್ಫ್ ಮಂಡಳಿಗಾಗಿ ಕೇಂದ್ರ ಸರಕಾರದಿಂದ ಅನುದಾನ ಪಡೆಯುವಂತೆ ಆಶ್ವಾಸನೆ ನೀಡಿತ್ತು. ಈ ಆಶ್ವಾಸನೆ ಪೂರ್ಣಗೊಳಿಸಿ ವಕ್ಫ್ ಮಂಡಳಿ ಸಶಕ್ತ ಗೊಳಿಸುವುದಕ್ಕಾಗಿ ಈಗಿನ ಮೈತ್ರಿ ಸರಕಾರ ೨೦೨೪ – ೨೫ ಗಾಗಿ ೧೦ ಕೋಟಿ ರೂಪಾಯಿಯ ವ್ಯವಸ್ಥೆ ಮಾಡಿದೆ. ಇದರಲ್ಲಿ ೨ ಕೋಟಿ ರೂಪಾಯಿಯನ್ನು ಮೈತ್ರಿ ಸರಕಾರವು ಜೂನ್ ೧೦ ರಂದು ಮಂಜೂರು ಮಾಡಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ೨೦೦೭ ರಲ್ಲಿ ಈ ಸಮಿತಿಯ ಸದಸ್ಯರು ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯ ಕಾರ್ಯ, ಹಾಗೂ ವಕ್ಫ್ ಮಂಡಳಿಯ ಸಂಪತ್ತನ್ನು ನೋಡಿಕೊಳ್ಳುವದಕ್ಕಾಗಿ ಮಹಾರಾಷ್ಟ್ರಕ್ಕೆ ಬಂದಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಸರಕಾರವು ವಕ್ಫ್ ಮಂಡಳಿಗೆ ಅನುದಾನ ನೀಡುವ ಆಶ್ವಾಸನೆ ನೀಡಿತ್ತು. ಪ್ರತ್ಯಕ್ಷವಾಗಿಯೂ ಕೂಡ ಕಾಂಗ್ರೆಸ್ ಈ ಅನುದಾನವನ್ನು ನೀಡಿತ್ತು. ಆದರೂ ಕೂಡ ಈಗ ಮೈತ್ರಿ ಸರಕಾರದಿಂದ ಈ ಅನುದಾನ ನೀಡಲಾಗುತ್ತಿದೆ.
ಸಂಪಾದಕೀಯ ನಿಲುವುಹಿಂದುಗಳ ಭೂಮಿಯನ್ನು ಕಬಳಿಸುವ ವಕ್ಫ್ ಮಂಡಳಿಯನ್ನು ಸಶಕ್ತಗೊಳಿಸುವ ಕಾರ್ಯವನ್ನು ಹಿಂದುತ್ವನಿಷ್ಠ ಪಕ್ಷದವರು ಮಾಡುವುದು ಹಿಂದುಗಳಿಗೆ ಅಪೇಕ್ಷಿತವಿಲ್ಲ ! |