ಭದ್ರತಾ ಪಡೆಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ 7 ನಕ್ಸಲೀಯರ ಹತ್ಯೆ !

10 ರಿಂದ 12 ನಕ್ಸಲೀಯರಿಗೆ ಗಾಯ !

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಸಮೀಪದ ದಂತೇವಾಡದಲ್ಲಿ ಮತ್ತೊಮ್ಮೆ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 7 ನಕ್ಸಲೀಯರ ಹತ್ಯೆ ಮಾಡಲಾಗಿದ್ದು, 10 ರಿಂದ 12 ನಕ್ಸಲೀಯರು ಗಾಯಗೊಂಡಿದ್ದಾರೆ. ಈ ಚಕಮಕಿಯಲ್ಲಿ ಹತರಾದ ನಕ್ಸಲೀಯರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಸ್ತುತ ಛತ್ತೀಸ್‌ಗಢದಲ್ಲಿ ವಿಶೇಷ ಕಾರ್ಯಾಚರಣೆ ಪಡೆ, ಜಿಲ್ಲಾ ಮೀಸಲು ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ ಮತ್ತು ‘ಕೋಬ್ರಾ ಕಮಾಂಡೋ’ ಸಹಿತ ಅಂದಾಜು 1 ಸಾವಿರ ಸೈನಿಕರ ತಂಡವು ನಕ್ಸಲೀಯರ ವಿರುದ್ಧ ಜಂಟೀ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ಕಾಂಕೆರ, ಬಸ್ತರ್ ಮತ್ತು ವಿಜಾಪುರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲೀಯರು ಹತ್ಯೆಯಾದರು. ಈ ಕಾರ್ಯಾಚರಣೆಯಲ್ಲಿ ಕೆಲವು ಸೈನಿಕರು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಈಗ, ನಕ್ಸಲೀಯರ ಪಿಡುಗನ್ನು ಬೇರುಸಹಿತ ನಿರ್ಮೂಲನೆ ಮಾಡಲು ಸರ್ಕಾರ ಪ್ರಯತ್ನಿಸಬೇಕು, ಎಂದು ಅಪೇಕ್ಷೆ !