ಈಜಿಪ್ಟ್‌ನಲ್ಲಿ ಚರ್ಚ್‌ ನಿರ್ಮಿಸುವುದಾಗಿ ಹೇಳಿ ಕ್ರೈಸ್ತರ ಮನೆಗಳನ್ನು ಸುಟ್ಟ ಮತಾಂಧರು

ಕೈರೋ (ಈಜಿಪ್ಟ) – ಇಲ್ಲಿಯ ಮಿನಿಯಾ ಪ್ರಾಂತ್ಯದಲ್ಲಿ ಮುಸಲ್ಮಾನರ ಗುಂಪು ಅನೇಕ ಕ್ರೈಸ್ತರ ಮನೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವೀಡಿಯೋಗಳು ಪ್ರಸಾರವಾಗಿದ್ದು, ಇದರಲ್ಲಿ ಸಿಟ್ಟಿಗೆದ್ದ ಮುಸ್ಲಿಮರ ಗುಂಪೊಂದು ಕ್ರೈಸ್ತರ ಮನೆಗಳಿಗೆ ತೆರಳುತ್ತಿರುವಾಗ ಮತ್ತು ಗಲಭೆ ಹಾಕುತ್ತಾ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ‘ನ್ಯೂ ಅರಬ’ ವರದಿಯ ಪ್ರಕಾರ, ಕ್ರೈಸ್ತರ ‘ಈಸ್ಟರ’ ಹಬ್ಬದ ನಂತರ, ಮುಸ್ಲಿಂ ಗುಂಪು ಮೊದಲೇ ಆಕ್ರೋಶಗೊಂಡಿತ್ತು; ಆದರೆ ಅಲ್ಲಿಯ ಅಲ್ ಫವಖೀರ ಗ್ರಾಮದಲ್ಲಿ ಹೊಸ ಚರ್ಚೆ ನಿರ್ಮಿಸುವ ಬಗ್ಗೆ ಚರ್ಚೆ ಪ್ರಾರಂಭವಾದಾಗ, ಮುಸಲ್ಮಾನರು ಶುಕ್ರವಾರದ ನಮಾಜ್ ನಂತರ ಬೀದಿಗಿಳಿದರು. ಅವರು ಹಿಂಸಾಚಾರ ಮಾಡುತ್ತಾ ಕ್ರೈಸ್ತರ ಮನೆಗಳನ್ನು ಸುಡಲು ಆರಂಭಿಸಿದರು.

1. ಗುಂಪು ಹಿಂಸಾಚಾರದಲ್ಲಿ ತೊಡಗಿದಾಗ ಅಲ್ಲಿದ್ದ ಪೊಲೀಸರು ಮೂಕ ವೀಕ್ಷಕರಾಗಿದ್ದರು ಎಂದು ಸಾಮಾಜಿಕ ಮಾಧ್ಯಮದಲ್ಲಿ, ಆರೋಪಗಳು ಕೇಳಿ ಬರುತ್ತಿವೆ.

2. ಈ ಘಟನೆಯಿಂದ ಮಿನಿಯಾದ ಆರ್ಚಬಿಶಪ ಮಕಾರಿಯೋಸ ಅವರು, ಈ ಘಟನೆಯ ಬಳಿಕ ನಿಯಂತ್ರಣದ ಮೀರಿದ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದ್ದು, ಶಂಕಿತರನ್ನು ಬಂಧಿಸಲಾಗಿದೆ.

3. ಈಜಿಪ್ಟ್‌ನಲ್ಲಿ, ಮುಸಲ್ಮಾನರಿಂದ ಕ್ರೈಸ್ತರು ಬಹಳಷ್ಟು ಸಲ ಅವರ ಹಕ್ಕುಗಳ ಮೇಲೆ ಎಳ್ಳು ನೀರು ಬಿಡಬೇಕಾಗುತ್ತಿದೆ. ಕ್ರೈಸ್ತರ ಮೇಲಿನ ದೌರ್ಜನ್ಯದ ಅನೇಕ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. 10 ವರ್ಷಗಳ ಹಿಂದೆ ಆರ್ಚ್ ಬಿಷಪ್ ಮಕಾರಿಯೋಸ ಇವರ ಹತ್ಯೆಗೆ ಯತ್ನ ನಡೆದಿತ್ತು ಎಂದು ಹೇಳಲಾಗುತ್ತಿದೆ.

4. ಮುಸ್ಲಿಂ ಬಹುಸಂಖ್ಯಾತ ಈಜಿಪ್ಟ್‌ನ ಒಟ್ಟು ಜನಸಂಖ್ಯೆಯು 1 ಕೋಟಿ 9 ಲಕ್ಷ ಇದ್ದು, ಅದರಲ್ಲಿ ಶೇ. 10-15 ರಷ್ಟು ಕ್ರೈಸ್ತರಿದ್ದಾರೆ. ಕ್ರೈಸ್ತರ ಮದುವೆ ಮತ್ತು ವಿಚ್ಛೇದನವನ್ನು ಹೊರತುಪಡಿಸಿ ಹೆಚ್ಚಿನ ಪ್ರಕರಣಗಳಲ್ಲಿ ಶರೀಯತ ಕಾನೂನನ್ನೇ ಕಾನೂನುಬದ್ಧವಾಗಿ ಅನುಸರಿಸಲು ಒತ್ತಾಯಿಸಲಾಗುತ್ತಿದೆ. (ಭಾರತದಲ್ಲಿ ಕ್ರೈಸ್ತರು ಎಷ್ಟೋ ಪಟ್ಟುಗಳಿಂದ ಒಳ್ಳೆಯ ಜೀವನವನ್ನು ಜೀವಿಸುತ್ತಿದ್ದಾರೆ. ಆದರೂ ಭಾರತವನ್ನು ಮಣಿಪುರ ಅಥವಾ ಇತರೆಡೆ ನಡೆಯುತ್ತಿರುವ ಘಟನೆಗಳಿಂದ ‘ಕ್ರೈಸ್ತ ವಿರೋಧಿ’ ಎಂದು ಅಣಕಿಸಲಾಗುತ್ತದೆ. ಈ ರೀತಿ ಮೇಲಿಂದ ಮೇಲೆ ಆಗುವ ಭಾರತ ವಿರೋಧಿ ಅಪಪ್ರಚಾರವನ್ನು ನೋಡಿ, ‘ಕ್ರೈಸ್ತರು ಭಾರತವನ್ನು ತೊರೆದು ಯಾವುದೇ ಕ್ರೈಸ್ತ ಅಥವಾ ಮುಸಲ್ಮಾನ ದೇಶಕ್ಕೆ ಹೋಗಬೇಕು’, ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನಿದೆ ? – ಸಂಪಾದಕರು)

ಸಂಪಾದಕೀಯ ನಿಲುವು

ಮತಾಂತರ ಮಾಡುವ ಹೆಸರಿನಲ್ಲಿ ಕುತಂತ್ರ ಕ್ರೈಸ್ತರು ಜಗತ್ತಿನಾದ್ಯಂತ ಚರ್ಚ್ ನಿರ್ಮಿಸಿ, ಸ್ಥಳೀಯರಿಗೆ ವಿವಿಧ ಆಮಿಷಗಳನ್ನೊಡ್ಡಿ ತಮ್ಮೆಡೆಗೆ ಸೆಳೆಯುತ್ತಾರೆ. ಆದರೆ ಮತಾಂಧ ಮುಸ್ಲಿಮರು `ಕಾಫಿರ’ ಎಂದು ಹೇಳುತ್ತಾ ಮುಸಲ್ಮಾನೇತರರ ಮೇಲೆ ದಾಳಿ ನಡೆಸುತ್ತಾರೆ. ಇಡೀ ಜಗತ್ತನ್ನು ಇಸ್ಲಾಂಮಯ ಅಥವಾ ಕ್ರೈಸ್ತಮಯಗೊಳಿಸುವ ಸಂಕುಚಿತ ಮತ್ತು ಭಯಾನಕ ಮಹತ್ವಾಕಾಂಕ್ಷೆಯಿಂದಾಗಿ 1 ಸಾವಿರ 400 ವರ್ಷಗಳಿಂದ ಈ ಹಿಂಸಾಚಾರ ಮುಂದುವರಿಯುತ್ತಿದೆ. ಇದಕ್ಕೆ ಯಾರು ಏನು ಮಾಡುವರು ?