Money not deducted for Cancelled Waiting Ticket : ವೇಟಿಂಗ್ ಟಿಕೆಟ್ ರದ್ದುಪಡಿಸಿದರೆ ಹಣದ ಕಡಿತ ಆಗುವುದಿಲ್ಲ !

ಭಾರತೀಯ ರೈಲಿನ ಹೊಸ ನಿಯಮ !


(ವೇಟಿಂಗ್ ಟಿಕೆಟ್ ಎಂದರೆ ಟಿಕೆಟ್ ಖಚಿತ ಆಗದೆ ಕಾಯ್ದಿಸಿರುವ ಪಟ್ಟಿಯಲ್ಲಿ ಇರುವಾಗ ತೆಗೆದಿರುವ ಟಿಕೆಟ್)

ನವ ದೆಹಲಿ – ಭಾರತೀಯ ರೈಲಿನ ಹೊಸ ನಿಯಮದ ಪ್ರಕಾರ ಇನ್ನು ವೇಟಿಂಗ್ ಮತ್ತು ಆರ್.ಎ.ಸಿ (ರಿಸರ್ವೇಶನ್ ಅಗೆನ್ಸ್ಟ್ ಕ್ಯಾನ್ಸಲೇಷನ್. ಇದರಲ್ಲಿ ಒಂದು ಬರ್ತ್ ೨ ಪ್ರಯಾಣಿಕರಿಗೆ ಅನುಮತಿ ನೀಡುತ್ತಾರೆ. ಇದರಲ್ಲಿ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.) ಟಿಕೆಟ್ ರದ್ದುಪಡಿಸುವುದಕ್ಕಾಗಿ ರೈಲು ಸ್ವತಂತ್ರ ಶುಲ್ಕ ವಿಧಿಸುವುದಿಲ್ಲ. ಇತರ ಟಿಕೆಟ್ ಗಾಗಿ ಮಾತ್ರ ರದ್ದುಪಡಿಸಿದ ನಂತರ ಶುಲ್ಕ ತುಂಬ ಬೇಕಾಗುತ್ತದೆ.

ಜಾರ್ಖಂಡದಲ್ಲಿನ ಸಾಮಾಜಿಕ ಕಾರ್ಯಕರ್ತ ಸುನಿಲ್ ಕುಮಾರ್ ಖಂಡೇಲವಾಲ್ ಇವರು ರೈಲು ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಶುಲ್ಕ ಸ್ವರೂಪದಲ್ಲಿ ಎಷ್ಟು ಹಣ ವಸೂಲಿ ಆಗುತ್ತದೆ ಮತ್ತು ಎಷ್ಟು ಹಣ ಜಮಾ ಆಗುತ್ತದೆ ? ಇದರ ಬಗ್ಗೆ ಮಾಹಿತಿ ಕೇಳಿದ್ದರು. ಮಾಹಿತಿ ದೊರೆತ ನಂತರ ರೈಲ್ವೆ ಕೇವಲ ಟಿಕೆಟ್ ರದ್ದು ಪಡಿಸಿದ ನಂತರವೇ ಶುಲ್ಕದಿಂದ ಬಹಳಷ್ಟು ಹಣ ದೊರೆಯುತ್ತಿದೆ ಮತ್ತು ಪ್ರಯಾಣಿಕರಿಗೆ ಬಹಳಷ್ಟು ನಷ್ಟ ಆಗುತ್ತದೆ. ಇದರ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಓರ್ವ ಪ್ರಯಾಣಿಕನು ೧೯೦ ರೂಪಾಯಿ ಟಿಕೆಟ್ ಪಡೆದನು. ಕನ್ಫರ್ಮ್ ಸೀಟ್ ದೊರೆತಿರಲಿಲ್ಲ. ಅವನು ಟಿಕೆಟ್ ರದ್ದುಪಡಿಸಿದ ನಂತರ ಅವನಿಗೆ ಕೇವಲ ೯೫ ರೂಪಾಯಿ ನೀಡಲಾಗಿತ್ತು.

ವಂದೇ ಭಾರತ ರೈಲಿನಲ್ಲಿ ಈಗ ಒಂದು ಲೀಟರ್ ಬದಲು ಅರ್ಧ ಲೀಟರ್ ನೀರಿನ ಬಾಟಲಿ ದೊರೆಯುವುದು !

ವಂದೇ ಭಾರತ ರೈಲಿನಲ್ಲಿ ಇಲ್ಲಿಯವರೆಗೆ ಪ್ರಯಾಣಿಕರಿಗೆ ಒಂದು ಲೀಟರ್ ನೀರಿನ ಬಾಟಲಿ ನೀಡಲಾಗುತ್ತಿತ್ತು. ಈಗ ಪ್ರತಿಯೊಂದು ಪ್ರಯಾಣಿಕರಿಗೆ ಅರ್ಧ ಲೀಟರ ನೀರಿನ ಬಾಟಲಿ ನೀಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಆದ್ದರಿಂದ ನೀರು ವ್ಯರ್ಥವಾಗುವುದು ನಿಲ್ಲುವುದು. ಅವಶ್ಯಕತೆ ಇದ್ದರೆ ಪ್ರಯಾಣಿಕರು ಹೆಚ್ಚುವರಿ ನೀರು ಕೇಳಬಹುದು. ಅವರಿಗೆ ರೈಲು ಅರ್ಧ ಲೀಟರ್ ನೀರಿನ ಬಾಟಲಿ ನೀಡುವುದು. ಅದಕ್ಕಾಗಿ ಹೆಚ್ಚುವರಿ ಹಣ ನೀಡಬೇಕಿಲ್ಲ.