ಮಣಿಪುರದಲ್ಲಿ ಕ್ರೈಸ್ತ ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ತೆಗೆಯಲು ಸಮಿತಿಯ ರಚನೆ !

ಹಿಂದೂ ಮೈತೆಯಿ ಜನಾಂಗಕ್ಕೆ ಈ ಪಟ್ಟಿಯಲ್ಲಿ ಸೇರಿಸಿದ್ದರಿಂದ ಕುಕಿ ಜನಾಂಗದಿಂದ ವಿರೋಧ !

ಇಂಫಾಲ (ಮಣಿಪುರ) – ಮಣಿಪುರದಲ್ಲಿನ ಹಿಂದೂ ಮೈತೆಯಿ ಜನಾಂಗವನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸುವ ನ್ಯಾಯಾಲಯದ ನಿರ್ಣಯಕ್ಕೆ ಇಲ್ಲಿಯ ಕ್ರೈಸ್ತ ಕುಕಿ ಜನಾಂಗದಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಕಳೆದ ಅನೇಕ ತಿಂಗಳಿಂದ ಹಿಂಸಾಚಾರ ನಡೆಯುತ್ತಿದೆ. ಇದರಲ್ಲಿ ೧೮೦ ಕ್ಕಿಂತಲೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಈಗ ರಾಜ್ಯದಲ್ಲಿ ಭಾಜಪ ಸರಕಾರ ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ಇಡುವ ಯೋಚನೆ ಮಾಡುತ್ತಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರ ಇಡಲು ಯೋಚಿಸುವುದಕ್ಕಾಗಿ ಹೇಳಿದ ನಂತರ ರಾಜ್ಯ ಸರಕಾರವು ಇದರ ಸಂದರ್ಭದಲ್ಲಿ ಸಮಿತಿ ಸ್ಥಾಪನೆ ಮಾಡಿದೆ. ಈ ವಿಷಯದ ಕುರಿತು ರಾಜ್ಯದ ಮುಖ್ಯಮಂತ್ರಿ ಎನ್. ಬೀರೇನ ಸಿಂಹ ಇವರು, ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಿಂದ ಕುಕಿ ಜನಾಂಗವನ್ನು ಹೊರ ಇಡುವ ಪ್ರಸ್ತಾವದ ಕುರಿತು ಈ ಸಮಿತಿ ನಿರ್ಣಯ ತೆಗೆದುಕೊಳ್ಳುವುದು ಎಂದು ಹೇಳಿದ್ದಾರೆ.

೧. ಸಂವಿಧಾನದ ಪ್ರಕಾರ ಹಿಂದೂಗಳಿಗೆ ಜಾತಿಯ ಆಧಾರಿತ ಮೀಸಲಾತಿ ನೀಡಲಾಗುತ್ತದೆ. ಹೀಗೆ ಇರುವಾಗ ಕ್ರೈಸ್ತ ಕುಕೀಗಳಿಗೆ ಮೀಸಲಾತಿ ಹೇಗೆ ನೀಡಲಾಗಿದೆ, ಇದರ ವಿಚಾರಣೆ ಈ ಸಮಿತಿಯಿಂದ ಮಾಡಲಾಗುವುದು, ಎಂದು ಹೇಳಲಾಗುತ್ತಿದೆ.

೨. ಈ ಸಮಿತಿಯಿಂದ ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಹೊರ ಇಡುವ ಶಿಫಾರಸು ಮಾಡಿದರೆ, ಕೇಂದ್ರ ಸರಕಾರಕ್ಕೆ ಇದರ ಬಗ್ಗೆ ಯೋಚನೆ ಮಾಡಬೇಕಾಗುವುದು. ಕೇಂದ್ರ ಸರಕಾರವು ಇದಕ್ಕೆ ಒಪ್ಪಿಗೆ ನೀಡಿದ ನಂತರ ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಹೊರ ತೆಗೆಯಲಾಗುವುದು. ಸಮಿತಿಯು ಕುಕಿ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಇಡಲು ಹೇಳಿದರೆ, ಆಗ ಕೇಂದ್ರ ಸರಕಾರ ಇದರ ಮೇಲೆ ಕೂಡ ನಿರ್ಣಯ ತೆಗೆದುಕೊಳ್ಳುವುದು.

೩. ಮಣಿಪುರದ ಜನಸಂಖ್ಯೆಯಲ್ಲಿ ಶೇಕಡ ೫೩ ಹಿಂದೂ ಮೈತೆಯಿ ಜನಾಂಗ ಮತ್ತು ಶೇಕಡಾ ೪೦ ನಾಗ ಮತ್ತು ಕುಕಿ ಜನಾಂಗ ಇದೆ.