ವಿಎಚ್‌ಪಿ ಮತ್ತು ಆರ್‌ಎಸ್. ಸಂಘದಿಂದ ಆಯೋಜನೆ !
ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಜನವರಿ 1 ರಿಂದ ಜನವರಿ 15 ರವರೆಗೆ ದೇಶಾದ್ಯಂತ ಪ್ರವಾಸ ಮಾಡಿ ಅದರ ಅಡಿಯಲ್ಲಿ 12 ಕೋಟಿ ಕುಟುಂಬಗಳ 60 ಕೋಟಿ ಜನರಿಗೆ ಶ್ರೀರಾಮನ ಚಿತ್ರ ಮತ್ತು ಶ್ರೀ ರಾಮಜನ್ಮ ಭೂಮಿಯಲ್ಲಿ ಪೂಜಿಸಲಾದ ಅಕ್ಷತೆಯನ್ನು ವಿತರಿಸಲಿದೆ.
ಜನವರಿ 22 ರಂದು 5 ಲಕ್ಷ ಹಳ್ಳಿಗಳಲ್ಲಿ ವಿಎಚ್‌ಪಿ ಕಾರ್ಯಕ್ರಮ ಆಯೋಜಿಸಿದೆ !
ವಿಹಿಂಪನ ಕೇಂದ್ರ ಸಚಿವ ಅಂಬರಿಶ ಇವರು, ಜನವರಿ 22 ರಂದು ದೇಶದ 5 ಲಕ್ಷ ಹಳ್ಳಿಗಳಲ್ಲಿನ ದೇವಸ್ಥಾನ, ಧಾರ್ಮಿಕ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ವಿಎಚ್‌ಪಿ ಯೋಜಿಸಿದೆ ಎಂದು ಹೇಳಿದ್ದಾರೆ. ಇದರಲ್ಲಿ ಶ್ರೀರಾಮ ಮಂದಿರದಲ್ಲಿ ಅಭಿಷೇಕದ ನೇರ ಪ್ರಸಾರವನ್ನು ತೋರಿಸಲಾಗುವುದು. ಇದರಲ್ಲಿ ಹಳ್ಳಿಯ ಎಲ್ಲ ನಿವಾಸಿಗಳನ್ನು ಆಹ್ವಾನಿಸಲಾಗುತ್ತದೆ, ಇದರಿಂದ ದೇಶದ ಮೂಲೆ ಮೂಲೆಗಳು ‘ರಮಮಯ’ ಆಗಲಿದೆ ಎಂದು ಹೇಳಿದರು.
ಶ್ರೀರಾಮನ ವಿಗ್ರಹದ ಬಿಲ್ಲು ಮತ್ತು ಬಾಣಗಳಿಗೆ ಚಿನ್ನ ಮತ್ತು ವಜ್ರಗಳನ್ನು ಹಾಕಲಾಗುವುದು !
ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಒಟ್ಟು 3 ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಅವರಲ್ಲಿ ಒಂದು ಮೂರ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಈ 3 ವಿಗ್ರಹಗಳ ಪೈಕಿ 2 ವಿಗ್ರಹಗಳನ್ನು ಸಿದ್ಧಪಡಿಸಲಾಗಿದೆ. ಈ ವಿಗ್ರಹಗಳನ್ನು ಮೈಸೂರಿನ ಅರುಣ್ ಯೋಗಿರಾಜ್ ತಯಾರಿಸಿದ್ದಾರೆ. ಈ ವಿಗ್ರಹದ ಬಿಲ್ಲು ಬಾಣಗಳ ಮೇಲೆ ಚಿನ್ನ ಮತ್ತು ವಜ್ರಗಳನ್ನು ಇಡಲಾಗುವುದು ಎಂದು ಯೋಗಿರಾಜ್ ಮಾಹಿತಿ ನೀಡಿದರು.