ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ !

ಬೈತುಲ್ (ಮಧ್ಯಪ್ರದೇಶ) – ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೆ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ರವೀಂದ್ರ ಗುಪ್ತಾ ಅಲಿಯಾಸ್ ಭೋಜಪಾಲಿ ಬಾಬಾ ಅವರನ್ನು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಅವರು ಭೋಪಾಲ್ ನಿವಾಸಿಯಾಗಿದ್ದಾರೆ. 1992 ರಲ್ಲಿ ಬಾಬರಿ ಧ್ವಂಸ ಮಾಡುವಾಗ ಭೋಜಪಾಲಿ ಬಾಬಾ ಅಯೋಧ್ಯೆಗೆ ಹೋಗಿದ್ದರು. ಅವರು 21ನೇ ವಯಸ್ಸಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟದ ಹೊರತು ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಕುಟುಂಬದವರು ಅವರನ್ನು ಮದುವೆಗೆ ಹಲವಾರು ಬಾರಿ ಒಪ್ಪಿಸಲು ಪ್ರಯತ್ನಿಸಿತು; ಆದರೆ ಅವರು ನಿರಾಕರಿಸಿದರು. ಇಂದು ಅವರ ವಯಸ್ಸು 52 ವರ್ಷ. ಕಳೆದ 31 ವರ್ಷಗಳಿಂದ ಸನಾತನ ಧರ್ಮದ ರಕ್ಷಣೆಗಾಗಿ ವಿವಿಧ ಹಿಂದೂ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಭೋಜಪಾಲಿ ಬಾಬಾ ಮದುವೆಯಾಗದೆ ತನ್ನ ಉಳಿದ ಜೀವನವನ್ನು ಸನಾತನ ಧರ್ಮಕ್ಕೆ ಮೀಸಲಿಡಲು ನಿರ್ಧರಿಸಿದ್ದಾರೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!