ನಾವು ಬಾಬರಿ ವಿಷಯದಲ್ಲಿ ಸಂಯಮ ಹೊಂದಿದೆವು, ಆದರೆ ಜ್ಞಾನವಾಪಿ ವಿಷಯಕ್ಕೆ ಸಂಬಂಧಿಸಿದಂತೆ ರಸ್ತೆಗಿಳಿದು ಹೋರಾಡೋಣ! – ಮೌಲಾನಾ ತೌಕೀರ್ ರಜಾ ಅವರ ಪ್ರಚೋದನಕಾರಿ ಹೇಳಿಕೆ 

(ಮೌಲಾನಾ ಎಂದರೆ ಇಸ್ಲಾಮಿಕ್ ಅಭ್ಯಾಸಕ) 

ದೆಹಲಿ – ‘ ಬಾಬರಿ ಮಸೀದಿಗೆ ಸಂಬಂಧಿಸಿದಂತೆ ನಾವು ಸಂಯಮದಿಂದ ಇದ್ದೆವು; ಆದರೆ ಜ್ಞಾನವಾಪಿಯ ವಿಷಯದಲ್ಲಿ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಬೀದಿಗಿಳಿದು ನಾವು ಹೋರಾಟ ಮಾಡೋಣ’, ಎಂದು ಪ್ರಚೋದನಕಾರಿ ಹೇಳಿಕೆಯನ್ನು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ತೌಕೀರ್ ರಝಾ ನೀಡಿದ್ದಾರೆ. ಅವರು ದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ‘ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ, ನಮಗೆ ನಮ್ಮ ಪಾಲು(ಹಕ್ಕು) ಬೇಕಾಗಿದೆ’, ಎಂದೂ ಮೌಲಾನಾ ರಜಾ ಹೇಳಿದರು.

ಮೌಲಾನಾ ರಜಾ ಮಾತನಾಡಿ, ಆಂಗ್ಲರು ‘ಒಡೆದು ಆಳುವ’ ನೀತಿಯನ್ನು ಅನುಸರಿಸಿ ದೇಶವನ್ನು ನಡೆಸಿದರು. ಇಂದು ‘ಕಪ್ಪು ಆಂಗ್ಲರು ’ ದೇಶವನ್ನು ಆಳುತ್ತಿದ್ದಾರೆ. ಸಧ್ಯಕ್ಕೆ ದೇಶದಲ್ಲಿ ಕಾನೂನು ಮುಗಿಸುವ ಪ್ರಯತ್ನಗಳು ನಡೆಯುತ್ತಿವೆ. (ನ್ಯಾಯಾಲಯದ ತೀರ್ಪಿಗೆ ಬಗ್ಗದೇ ಬೀದಿಗಿಳಿದು ಹೋರಾಡುವ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ದೇಶದ ಕಾನೂನು ಸುವ್ಯವಸ್ಥೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೀರಿ. ಇದು ಸಾರ್ವಜನಿಕರಿಗೆ ಕಂಡು ಬರುತ್ತಿದೆ! – ಸಂಪಾದಕ)

ಸಂಪಾದಕೀಯ ನಿಲುವು

ಹಿಂದೂತ್ವನಿಷ್ಟರ ವಿರುದ್ಧ ತಥಾಕಥಿತ ದ್ವೇಷಪೂರಿತ ಭಾಷಣ(ಹೇಟ ಸ್ಪೀಚ) ಮಾಡಿದ ಪ್ರಕರಣದಲ್ಲಿ ಸುಮ್ಮ ಸುಮ್ಮನೆ ದೂರು ದಾಖಲಿಸುವ ಪೊಲೀಸರಿಗೆ ಈಗ ಮೌಲಾನಾ ತೌಕೀರ್ ರಜಾ ಅವರ ಈ ಹೇಳಿಕೆ ದ್ವೇಷಪೂರಿತವಾಗಿದೆಯೆಂದು ಅನಿಸುತ್ತಿಲ್ಲವೇ?