ಮುಸಲ್ಮಾನ ಮತ್ತು ಮುಸಲ್ಮಾನೇತರ ಇವರಿಗಾಗಿ ಬೇರೆ ಬೇರೆ ರಜೆಗಳ ಪಟ್ಟಿ ! – ಶಿಕ್ಷಣ ವಿಭಾಗದ ಸ್ಪಷ್ಟೀಕರಣ

ಬಿಹಾರದಲ್ಲಿ ಹಿಂದೂ ಹಬ್ಬಗಳ ಶಾಲೆಗಳ ರಜೆ ರದ್ದು ಪಡಿಸಿದ ಪ್ರಕರಣ

ರಾಜ್ಯದಲ್ಲಿ ಮೊದಲ ಬಾರಿ ಈ ರೀತಿಯ ಬೇರೆ ಬೇರೆ ಪಟ್ಟಿ


ಪಾಟಲಿಪುತ್ರ (ಬಿಹಾರ) – ಬಿಹಾರದ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿನ ಶಾಲೆಯ ವಾರ್ಷಿಕ ರಜೆಗಳ ಪಟ್ಟಿ ಪ್ರಸಾರ ಮಾಡಿತ್ತು. ಇದರಲ್ಲಿ ಹಿಂದೂ ಹಬ್ಬಗಳ ಕೆಲವು ರಜೆಗಳನ್ನು ರದ್ದುಪಡಿಸಿ ಇಸ್ಲಾಮಿ ಹಬ್ಬಗಳ ರಜೆಗಳು ಹೆಚ್ಚಿಸಲಾಗಿತ್ತು. ಇದರಿಂದ ಸರಕಾರದ ಕುರಿತು ಟೀಕೆಗಳು ಆಗುತ್ತಿರುವುದರಿಂದ ಶಿಕ್ಷಣ ಇಲಾಖೆಯು ಸ್ಪಷ್ಟೀಕರಣ ನೀಡಿದೆ. ಇಲಾಖೆಯು, ಶಾಲೆಯಲ್ಲಿನ ರಜೆಯ ಸಂದರ್ಭದಲ್ಲಿ ಎರಡು ಪಟ್ಟಿ ಪ್ರಸಾರಗೊಳಿಸಲಾಗಿತ್ತು, ಒಂದು ಮುಸಲ್ಮಾನರಿಗಾಗಿ ಇನ್ನೊಂದು ಮುಸಲ್ಮಾನೇತರರಿಗಾಗಿ. ಪ್ರಸಾರ ಮಾಧ್ಯಮಗಳಲ್ಲಿ ಮುಸಲ್ಮಾನರಿಗಾಗಿ ಇರುವ ಪಟ್ಟಿಯ ಸಮಾಚಾರ ಪ್ರಕಾಶಗೊಂಡಿದೆ. ಈ ಪಟ್ಟಿಯಲ್ಲಿ ಅವರಿಗಾಗಿ ಮುಸಲ್ಮಾನನೇತರರ ಹಬ್ಬಗಳ ರಜೆಗಳು ಕಡಿತಗೊಳಿಸಲಾಗಿದೆ. ಮುಸಲ್ಮಾನೇತರ ಪಟ್ಟಿಯಲ್ಲಿ ಹಾಗೆ ಮಾಡಲಾಗಿಲ್ಲ. ಅಲ್ಲಿ ಮುಸಲ್ಮಾನರ ರಜೆಗಳು ಕಡಿಮೆ ಇದೆ. ಸಂಕ್ಷಿಪ್ತದಲ್ಲಿ ಉರ್ದು ಶಾಲೆಗಾಗಿ ರಜೆಯ ಪಟ್ಟಿ ಬೇರೆ ಮತ್ತು ಸರಕಾರಿ ಶಾಲೆಗಳ ರಜೆಗಳ ಪಟ್ಟಿ ಬೇರೆ ತಯಾರಿಸಿರುವುದರ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟೀಕರಿಸಿದೆ.

೧. ವಿಶೇಷ ಎಂದರೆ ಶಿಕ್ಷಣ ಇಲಾಖೆಯಿಂದ ಇದೇ ಮೊದಲ ಬಾರಿ ಈ ರೀತಿಯ ರಜೆಯ ಎರಡು ಪಟ್ಟಿ ಪ್ರಸಾರ ಮಾಡಿದೆ. ಈ ಹಿಂದೆ ಒಂದೇ ಪಟ್ಟಿ ಪ್ರಸಾರ ಮಾಡಲಾಗುತ್ತಿತ್ತು.

೨. ಈ ಪಟ್ಟಿಯ ಪ್ರಕಾರ ಮುಸಲ್ಮಾನೇತರರಿಗೆ ಗುರು ಗೋವಿಂದ ಸಿಂಹ ಜಯಂತಿ, ಗಣರಾಜ್ಯೋತ್ಸವ, ವಸಂತ ಪಂಚಮಿ, ಸಂತ ರವಿದಾಸ ಜಯಂತಿ, ಶಬ ಎ ಬರಾತ್, ಮಹಾಶಿವರಾತ್ರಿ, ಬಿಹಾರ ದಿನ, ಹೋಲಿ, ಗುಡ್ ಫ್ರೈಡೆ, ಈದ್ ಉಲ್ ಫಿತರ್, ಅಂಬೇಡ್ಕರ್ ಜಯಂತಿ, ೧ ತಿಂಗಳ ದೀಪಾವಳಿಯ ರಜೆ, ಜಾನಕಿ ನವಮಿ, ಬೌದ್ಧ ಪೂರ್ಣಿಮೆ, ಈದ್ ಉಲ್ ಜೋಹಾ, ಕಬೀರ ಜಯಂತಿ, ಮೊಹರಂ, ಆಗಸ್ಟ್ ೧೫, ಶ್ರೀಕೃಷ್ಣ ಜನ್ಮಾಷ್ಟಮಿ, ನವರಾತ್ರಿ ಉತ್ಸವ, ದೀಪಾವಳಿ, ಛಟ ಪೂಜೆ, ಕ್ರಿಸ್ಮಸ್ ಮುಂತಾದರ ಸಮಾವೇಶ ಇದೆ.

೩. ಮುಸಲ್ಮಾನರ ಶಾಲೆಗಾಗಿ ಮಹಾಶಿವರಾತ್ರಿ, ಶ್ರೀಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಹರಿತಾಲಿಕ ಮತ್ತು ಜಾನಕಿ ನವಮಿ ಇವುಗಳಿಗೆ ರಜೆ ನೀಡಲಾಗಿಲ್ಲ.

ಸಂಪಾದಕೀಯ ನಿಲುವು

ಬಿಹಾರ ಸರಕಾರದ ಮೇಲೆ ಹಿಂದೂ ದ್ರೋಹದ ಬಗ್ಗೆ ಟೀಕೆಗಳು ಆಗುತ್ತಿರುವುದರಿಂದ ಸರಕಾರದಿಂದ ಈ ರೀತಿ ಕೈ ಚೆಲ್ಲುವ ಪ್ರಯತ್ನ ಮಾಡಲಾಗುತ್ತಿದೆ ಇದು ಸ್ಪಷ್ಟವಾಗಿದೆ !

ಸರಕಾರವು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಕೂಡ ರಾಜ್ಯದಲ್ಲಿನ ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳ ಮೈತ್ರಿ ಸರಕಾರ ಹಿಂದೂದ್ರೋಹಿ ಮತ್ತು ಮುಸಲ್ಮಾನ ಪ್ರೇಮಿ ಆಗಿದೆ, ಇದು ಬಹಿರಂಗವಾಗಿದೆ. ಇಂತಹ ಸರಕಾರಕ್ಕೆ ರಾಜ್ಯದಲ್ಲಿನ ಜನರೇ ಮತದಾನದ ಮೂಲಕ ಪಾಠ ಕಲಿಸುವುದು ಆವಶ್ಯಕವಾಗಿದೆ !

ಜಾತ್ಯಾತೀತ ದೇಶದಲ್ಲಿ ಧರ್ಮದ ಪ್ರಕಾರ ಬೇರೆ ಬೇರೆ ರಜೆಗಳು ಏತಕ್ಕಾಗಿ ? ಇಂತಹ ಪ್ರಮಾದಗಳನ್ನು ತಪ್ಪಿಸುವುದಕ್ಕಾಗಿ ದೇಶದಲ್ಲಿ ಆದಷ್ಟು ಬೇಗನೆ ಏಕರೂಪ ನಾಗರೀಕ ಕಾನೂನು ಜಾರಗೊಳಿಸಲಾಗುವುದು ಆವಶ್ಯಕವಾಗಿದೆ !