ಧರ್ಮನಿರಪೇಕ್ಷ (ನಿಧರ್ಮಿ) ಅಲ್ಲ, ಪ್ರಾಚೀನ ಧರ್ಮಾಧಿಷ್ಠಿತ ಭಾರತವೇ ಹೆಚ್ಚು ವಿಕಸಿತವಾಗಿತ್ತು !

ವಾಸ್ತವದಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸನಾತನ ಧರ್ಮವು ನೀಡಿರುವ ನೀತಿನಿಯಮಕ್ಕನುಸಾರ ರಾಜ್ಯವ್ಯವಸ್ಥೆ ನಡೆಯುತ್ತಿತ್ತು ಹಾಗೂ ಅದರಿಂದ ಸಮಾಜದ ಉತ್ಕರ್ಷತವನ್ನು ಸಹ ಸಾಧಿಸಲಾಗುತ್ತಿತ್ತು. ಸಾಮ್ಯವಾದಿಗಳು ಇದನ್ನು ಅಡಗಿಸಿಟ್ಟು ಪಠ್ಯಪುಸ್ತಕದಲ್ಲಿ ತುರುಕಿಸಿದ ಸುಳ್ಳು ಇತಿಹಾಸವು ಈಗ ಬೆಳಕಿಗೆ ಬರುತ್ತಿದೆ.

ಪರಕೀಯರ ಆಕ್ರಮಣಕ್ಕಿಂತ ಧರ್ಮದ್ವೇಷಿಗಳಾಗಿರುವ ಸ್ವತಂತ್ರ ಭಾರತದಲ್ಲಿಯ ಜಾತ್ಯತೀತ ಆಡಳಿತಗಾರರು

ಮುಸಲ್ಮಾನರು, ಬ್ರಿಟಿಷರು, ಶಕರು, ಹೂಣರಿ, ಕುಶಾನರು ಹೀಗೆ ಅನೇಕ ಆಕ್ರಮಣಗಳಾದವು ಆದರೆ ಅವರು ಯಾರು ದೇವಸ್ಥಾನವನ್ನು ಅಧೀನಪಡಿಸಿಕೊಳ್ಳುವ ಕಾನೂನನ್ನು ಮಾಡಲಿಲ್ಲ. ಬ್ರಿಟಿಷರು ೧೫೦ ವರ್ಷದ ಆಡಳಿತದಲ್ಲಿ ಯಾವುದೇ ದೇವಸ್ಥಾನದ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡಲಿಲ್ಲ. ಅತ್ಯಾಚಾರಿ ಮುಸಲ್ಮಾನರು ಮಾಡಲಿಲ್ಲ,