ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ೨ ಆಟಗಾರರು ಕರೋನಾ ಸೋಂಕು ತಗಲಿದ್ದರಿಂದ ಸ್ಪರ್ದೆ ರದ್ದು !

ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ‘ಕೋಲ್ಕತಾ ನೈಟ್ ರೈಡರ್ಸ್’ ಸಂಘದ ಸ್ಪಿನ್ನರ್‌ಗಳಾದ ವರುಣ ಚಕ್ರವರ್ತಿ ಮತ್ತು ಸಂದೀಪ ವಾರಿಯರ್ ಅವರು ಕರೋನಾ ರೋಗಕ್ಕೆ ತುತ್ತಾಗಿದ್ದಾರೆ. ಜೊತೆಗೆ ಕೆಲವು ಆಟಗಾರರ ಆರೋಗ್ಯವು ಹದಗೆಟ್ಟಿದೆ ಎಂದು ಸಹ ಹೇಳಲಾಗುತ್ತಿದೆ.

ಕರೀಮ್‌ಗಂಜ್(ಅಸ್ಸಾಂ) ನಲ್ಲಿ ದೇವಾಲಯವನ್ನು ದೋಚುವ ೧೨ ಮತಾಂಧರ ತಂಡಗಳ ಬಂಧನ !

ಬಾಂಗ್ಲಾದೇಶ ಗಡಿಯ ಬಳಿಯ ಕರೀಮ್‌ಗಂಜ್ ಜಿಲ್ಲೆಯ ಬಾಲಿಯಾದಲ್ಲಿರುವ ೩೦೦ ವರ್ಷಗಳ ಹಳೆಯ ಪ್ರಸಿದ್ಧ ಶ್ರೀ ನುರಸಿಂಹ ದೇವಸ್ಥಾನದಲ್ಲಿ ಸಶಸ್ತ್ರ ಮತಾಂಧರು ದಾಳಿ ಮಾಡಿ ಚಿನ್ನದ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿದ್ದರಿಂದ ೧೬ ಕೊರೋನಾ ರೋಗಿಗಳ ಸಾವು

ರಾಜ್ಯದ ಅನಂತಪುರ ಮತ್ತು ಕುರ್ನೂಲ್‍ನಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದರಿಂದ ಒಟ್ಟು ೧೬ ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಹನ್ನೊಂದು ಮಂದಿ ಅನಂತಪುರದ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಐದು ಮಂದಿ ಕುರ್ನೂಲ್‍ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ದೇಶದಲ್ಲಿ ಕೂಡಲೇ ಸಂಚಾರ ನಿಷೇಧ ಜಾರಿಗೆ ತನ್ನಿ !

ಕೊರೋನಾ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುತ್ತದೆ. ಇಂತಹ ಸಮಯದಲ್ಲಿ ನಿಷೇಧವನ್ನು ಹೇರುವ ಮೂಲಕ ಸೋಂಕಿನ ಸರಪಳಿಯನ್ನು ಮುರಿಯುವುದು ಅತ್ಯಂತ ಯೋಗ್ಯವಾದ ಮಾರ್ಗವಾಗಿದೆ ಎಂದು ಹೇಳಿದರು.

ಶೀಘ್ರದಲ್ಲೇ ಭಾರತಕ್ಕೆ ಮರಳುವೆ ! – ‘ಸೀರಂ’ ನ ಅದಾರ್ ಪೂನಾವಾಲಾ ಅವರ ಆಶ್ವಾಸನೆ

ಕುಟುಂಬ ಸಹಿತ ಲಂಡನ್‍ಗೆ ಹೋಗಿರುವ ಪುಣೆ ಮೂಲದ ‘ಸೀರಮ್’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ ಪೂನವಾಲಾ ಅವರು ಶೀಘ್ರದಲ್ಲೇ ಭಾರತಕ್ಕೆ ಮರಳುವ ಭರವಸೆಯನ್ನು ನೀಡಿದ್ದಾರೆ. ಒಂದು ದಿನದ ಹಿಂದೆ, ಕೆಲವು ಭಾರತೀಯ ನಾಯಕರಿಂದ ಕೊರೋನಾ ಲಸಿಕೆಯ ವಿಷಯದಲ್ಲಿ ಕೊಲ್ಲುವ ಬೆದರಿಕೆಗಳನ್ನು ಬರುತ್ತಿವೆ ಎಂದು ಅವರು ಆರೋಪಿಸಿದ್ದರು.

ಪ್ರತಿದಿನ ಗೋಮೂತ್ರವನ್ನು ಸೇವಿಸಿದರೆ ಕೊರೋನಾ ಬರುವುದಿಲ್ಲ ! – ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ

ಪ್ರತಿದಿನ ೨೫ ಮಿಲಿ. ಗೋಮೂತ್ರವನ್ನು ಸೇವಿಸುವುದರಿಂದ ಕೊರೋನಾ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳು ಬರುವುದಿಲ್ಲ ಎಂದು ಇಲ್ಲಿಯ ಬಿಜೆಪಿ ಶಾಸಕ ದೇವೇಂದ್ರ ಸಿಂಹ ಲೋಧಿ ಹೇಳಿದ್ದಾರೆ. ಗೋಮೂತ್ರವನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ, ಜೊತೆಗೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ರಕ್ಷಿಸುತ್ತದೆ ಎಂದು ಸಹ ಹೇಳಿದರು.

ಆಮ್ಲಜನಕದ ಸಿಲಿಂಡರ್ ಗಳು ಸಿಗದೇ ಇದ್ದರಿಂದ ೪-೫ ಜನರು ಕಳೆದ ಕೆಲವು ದಿನಗಳಿಂದ ಅಶ್ವಥ ಮರದ ಕೆಳಗೆ ಮಲಗಿ ಆಮ್ಲಜನಕವನ್ನು ತೆಗೆದುಕೊಳ್ಳುತ್ತಿದ್ದಾರೆ !

ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ರೋಗಿಗಳ ಸಂಖ್ಯೆಯಿಂದ ಆರೋಗ್ಯ ವ್ಯವಸ್ಥೆಯು ಹದಗೆಡುತ್ತಿದೆ. ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಶಹಜಹಾನ್‍ಪುರದ ತಿಲ್‍ಹಾರ್‍ನಲ್ಲಿ ಆಮ್ಲಜನಕ ಸಿಲಿಂಡರ್‍ಗಳು ಲಭ್ಯವಿಲ್ಲದ ಕಾರಣ ಬಳಲುತ್ತಿದ್ದ ೪-೫ ಜನರು ಅಶ್ವಥ ಮರದ ಕೆಳಗೆ ಹೋಗಿ ಮಲಗಿದರು.

ಆಮ್ಲಜನಕದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಉಚ್ಚನ್ಯಾಯಾಲಯ !

ಈಗ ನೀರು ತಲೆಯ ಮೇಲಿಂದ ಹೋಗಿದೆ. ಈಗ ನಮಗೆ ಕಾರ್ಯಾಚರಣೆ ಬೇಕಾಗಿದೆ. ನೀವು ಈಗ ಎಲ್ಲ ವ್ಯವಸ್ಥೆಯನ್ನು ಮಾಡಲಿದ್ದೀರಿ. ಹೇಗಾದರೂ ಮಾಡಿ ದೆಹಲಿಗೆ ಇಂದು ೪೯೦ ಮೆಟ್ರಿಕ್ ಟನ್ ಆಮ್ಲಜನಕವನ್ನು ಒದಗಿಸುವಂತೆ ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ಆದೇಶ ನೀಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ

ಭಾರತದ ಗಡಿಯಲ್ಲಿ ಮತ್ತೆ ನುಸುಳುತ್ತಿರುವ ಚೀನಾ !

ಚೀನಾವು ವಿಶ್ವಾಸದ್ರೋಹಿಯಾಗಿದೆ, ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಆದ್ದರಿಂದ, ಇಂತಹ ಚೀನಾಕ್ಕೆ ತಕ್ಕ ಪಾಠವನ್ನು ಕಲಿಸಲು ಅವರಿಂದ ಆಕ್ರಮಣವಾಗಲಿ ಎಂದು ಕಾಯದೆ ಭಾರತವು ಕ್ರಮ ತೆಗೆದುಕೊಳ್ಳಬೇಕು !

ಕೊರೋನಾ ಲಸಿಕೆ ಬಗ್ಗೆ ಗಾಳಿಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ತಮಿಳು ನಟ ಮನ್ಸೂರ್ ಅಲಿ ಖಾನ್‍ಗೆ ೨ ಲಕ್ಷ ರೂಪಾಯಿಗಳ ದಂಡ !

ಕೊರೋನಾ ಲಸಿಕೆ ಬಗ್ಗೆ ಗಾಳಿಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ೨ ಲಕ್ಷ ರೂಪಾಯಿಯ ದಂಡವನ್ನು ವಿಧಿಸಿದೆ.