ನಮಾಜ್ ಮಾಡಲು ಮಸೀದಿಗೆ ಹೋಗಿ ! – ಗೋಹಾಟಿ ಉಚ್ಚ ನ್ಯಾಯಾಲಯ

ನಮಾಜಗಾಗಿ ವಿಮಾನ ನಿಲ್ದಾಣದಲ್ಲಿ ಒಂದು ಸ್ವತಂತ್ರ ಕೋಣೆ ನೀಡುಲು ಆಗ್ರಹಿಸಿರುವ ಅರ್ಜಿ ಗೋಹಾಟಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ !

ಗೋಹಾಟಿ (ಅಸ್ಸಾಂ) – ಇಲ್ಲಿಯ ವಿಮಾನ ನಿಲ್ದಾಣದಲ್ಲಿ ನಮಾಜಗಾಗಿ ಪ್ರತ್ಯೇಕ ಕೋಣೆ ನೀಡಲು ಆಗ್ರಹಿಸಿರುವ ಅರ್ಜಿ ಗೋಹಾಟಿ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಲಯವು ಅರ್ಜಿದಾರ ಮುಸಲ್ಮಾನನಿಗೆ ತಪರಾಕಿ ನೀಡುತ್ತಾ, ‘ಭಾರತ ಇದು ಜಾತ್ಯತೀತ ದೇಶವಾಗಿದೆ, ಯಾವುದಾದರೂ ಜನಾಂಗದ ಬೇಡಿಕೆಯಿಂದ ಈ ರೀತಿಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ನಮಾಜಗಾಗಿ ಮಸೀದಿಗಳಿವೆ. ಯಾರಿಗೆ ನಮಾಜ ಮಾಡುವುದಿದೆ ಅವರು ಅಲ್ಲಿಗೆ ಹೋಗಲಿ.’ ಎಂದು ಹೇಳಿದೆ.

ಸಂವಿಧಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆಗಾಗಿ ಕೋಣೆಗಳ ವ್ಯವಸ್ಥೆಯ ಉಲ್ಲೇಖವಿದೆಯೇ ?

ರಾಣ ಸುಧೈರ್ ಜಮಾನ್ ಈ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಮಯದಲ್ಲಿ ನ್ಯಾಯಾಲಯವು ಜಮಾನ್ ಇವರಿಗೆ, ಸಂವಿಧಾನದಲ್ಲಿ ‘ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆಗಾಗಿ ಕೋಣೆ ಇರಬೇಕು’, ಈ ರೀತಿಯ ಅಧಿಕಾರದ ಎಲ್ಲಿ ಉಲ್ಲೇಖವಿದೆ ? ಸರಕಾರವು ಕೆಲವು ವಿಮಾನ ನಿಲ್ದಾಣದಲ್ಲಿ ಪ್ರಾರ್ಥನೆಗಾಗಿ ಕೋಣೆಗಳನ್ನು ನಿರ್ಮಿಸಿದರೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆಗಾಗಿ ಕೋಣೆಗಳು ಇರಬೇಕು ಹೀಗೆ ಅರ್ಥ ಆಗುವುದಿಲ್ಲಾ. ಹಾಗಾದರೆ ಕೇವಲ ವಿಮಾನ ನಿಲ್ದಾಣವೇ ಏಕೆ ? ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲಿ ಏಕೆ ಬೇಡ ? ಈ ರೀತಿಯ ಬೇಡಿಕೆ ಸಲ್ಲಿಸುವುದು, ಇದು ಮೂಲಭೂತ ಅಧಿಕಾರ ಇದೆಯೆ ?

ನಮಾಜದಿಂದ ಯಾವುದೇ ಆದಾಯವಿಲ್ಲ !

ರಾಣ ಜಮಾನ್ ಇವರು ನ್ಯಾಯಾಲಯದಲ್ಲಿ, ವಿಮಾನ ನಿಲ್ದಾಣದಲ್ಲಿ ಧೂಮ್ರಪಾನ, ಸ್ಪಾ ಮತ್ತು ಉಪಹಾರ ಗೃಹಗಳ ನಿರ್ಮಾಣದ ನಿಯಮವಿದೆ; ಅದೇ ರೀತಿ ನಮಾಜ್ ಗಾಗಿ ಕೂಡ ಒಂದು ಕೋಣೆ ಇರಬೇಕು. ಇದರ ಬಗ್ಗೆ ನ್ಯಾಯಾಲಯ, ಧೂಮ್ರಪಾನದಕ್ಕಾಗಿ ಬೇರೆ ಕೋಣೆ ಮಾಡಿರುವುದರ ಉದ್ದೇಶ ಧೂಮ್ರಪಾನದ ತೊಂದರೆ ಬೇರೆಯವರಿಗೆ ಆಗಬಾರದು ಆಗಿದೆ. ಉಪಹಾರ ಗೃಹದಿಂದ ಆದಾಯ ದೊರೆಯುತ್ತದೆ; ಆದರೆ ಜನ ನಮಾಜಗಾಗಿ ಹೋದರೆ ಅದರಿಂದ ಯಾವುದೇ ಆದಾಯ ದೊರೆಯುವುದಿಲ್ಲ ಎಂದು ಹೇಳಿದೆ.

ಅರ್ಜಿಯಲ್ಲಿ ಹೀಗೂ ಕೂಡ ಹೇಳಲಾಗಿದೆ, ‘ವಿಮಾನಗಳ ಸಮಯ ಬಹಳಷ್ಟು ಬಾರಿ ನಮಾಜ್ ದ ಸಮಯದಲ್ಲಿಯೇ ಇರುತ್ತದೆ. ಆದ್ದರಿಂದ ಪ್ರತ್ಯೇಕ ಕೋಣೆ ಇರಬೇಕು,’ ಇದರ ಬಗ್ಗೆ ನ್ಯಾಯಾಲಯವು, ಪ್ರತಿಯೊಬ್ಬ ಪ್ರಯಾಣಿಕನಿಗೆ ವಿಮಾನದ ಸಮಯ ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ. ಆದ್ದರಿಂದ ಅವರು ಯಾವ ಸಮಯದಲ್ಲಿ ವಿಮಾನ ಹೊರಡುವುದು ಅದೇ ಸಮಯ ಅವರು ಆಯ್ಕೆ ಮಾಡಬಹುದು ಎಂದು ಹೇಳಿತು.

ಸಂಪಾದಕೀಯ ನಿಲುವು

ರಸ್ತೆಯಲ್ಲಿ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ನಮಾಜ ಮಾಡಿ ನಾಗರಿಕರಿಗೆ ಅಡಚಣೆ ತರುವ ಕುರಿತು ನ್ಯಾಯಾಲಯವು ಆದೇಶ ನೀಡಬೇಕು, ಎಂದು ಜನರಿಗೆ ಅನಿಸುತ್ತದೆ.