ಆಗಸ್ಟ್ ೨೮ ರಂದು ನೂಹದಲ್ಲಿ ಪುನಃ ಭ್ರಜಮಂಡಲ ಜಲಾಭಿಷೇಕ ಯಾತ್ರೆ !

ಹಿಂದೂ ಮಹಾಪಂಚಾಯತಿಯಲ್ಲಿ ಕಥಿತ ಪ್ರಚೋದನಕಾರಿ ಭಾಷಣ ನೀಡಿದೆ ಎಂದು ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು !

ಪಲವಲ್ (ಹರಿಯಾಣ) – ಹರಿಯಾಣದ ನೂಹದಲ್ಲಿ ಜುಲೈ ೩೧, ೨೦೨೩ ರಂದು ವಿಶ್ವ ಹಿಂದೂ ಪರಿಷತ್ತಿನಿಂದ ಆಯೋಜಿಸಲಾದ ಬ್ರಜಮಂಡಲ ಜಲ ಅಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ಪೂರ್ವನಿಯೋಜಿತ ದಾಳಿ ಮಾಡಿದ್ದರು. ಈ ಪ್ರಕರಣದಲ್ಲಿ ‘ಎಲ್ಲಾ ಹಿಂದೂ ಸಮಾಜ’ದಿಂದ ಆಗಸ್ಟ್ ೧೩ ರಂದು ಪಲವಲದಲ್ಲಿ ಮಹಾಪಂಚಾಯತಿಯ ಆಯೋಜನೆ ಮಾಡಿತ್ತು. ಇದರಲ್ಲಿ ಆಗಸ್ಟ್ ೨೮ ರಂದು ಮತ್ತೊಮ್ಮೆ ಬ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸಲು ನಿರ್ಧರಿಸಲಾಯಿತು. ಈ ಮಹಾಪಂಚಾಯತಿಯಲ್ಲಿ ತಥಾಕಥಿತ ಪ್ರಚೋದನಕಾರಿ ಭಾಷಣ ನೀಡಿದೆ ಎಂದು ಪೊಲೀಸರು ಸ್ವಯಂ ಪ್ರೇರಿತವಾಗಿ ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಮಹಾಪಂಚಾಯತಿಯ ಚಿತ್ರೀಕರಣ ಮಾಡಿ ನಂತರ ದೂರು ದಾಖಲಿಸಿದ್ದಾರೆ. ಪೊಲೀಸರು ಭಾಷಣ ಮಾಡುವವರ ಗುರುತು ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಹಾಪಂಚಾಯತಿಯಲ್ಲಿ ಭಾಜಪದ ಕೆಲವು ನಾಯಕರು ಮತ್ತು ಕೆಲವು ಗ್ರಾಮದ ಸರಪಂಚರು ಉಪಸ್ಥಿತರಿದ್ದರು.

ಈ ಮಹಾಪಂಚಾಯತಿಯಲ್ಲಿ ನೂಹ ಇಲ್ಲಿ ನಡೆದಿರುವ ಹಿಂಸಾಚಾರವನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಯಬೇಕು, ನೂಹದಲ್ಲಿ ವಾಸುಸುತ್ತಿರುವ ರೋಹಿಂಗ್ಯಾ ಮುಸಲ್ಮಾನ ನುಸುಳುಕೋರರನ್ನು ಹೊರ ಹಾಕುವುದು, ಕಾಂಗ್ರೆಸ್ಸಿನ ಶಾಸಕ ಮಾಮನ ಖಾನ್ ಇವನನ್ನು ಬಂಧಿಸುವುದು, ಹಿಂಸಾಚಾರದಲ್ಲಿ ಹತರಾಗಿರುವ ಹಿಂದುಗಳ ಸಂಬಂಧಿಕರಿಗೆ ತಲಾ ೧ ಕೋಟಿ ರೂಪಾಯಿ ಹಾಗೂ ಗಾಯಗೊಂಡಿರುವವ ತಲಾ ೫೦ ಲಕ್ಷ ರೂಪಾಯಿ ನಷ್ಟ ಪರಿಹಾರ ನೀಡಬೇಕು, ಹಿಂದುಗಳ ವಿರುದ್ಧ ದಾಖಲಿಸಿರುವ ದೂರಗಳನ್ನು ಹಿಂಪಡೆಯುವುದು, ಹಿಂಸಾಚಾರ ನಡೆಸಿದವರ ವಿರುದ್ಧದ ಮೊಕದ್ದಮೆಗಳು ಬೇರೆ ಕಡೆ ನಡೆಸುವುದು ಹಾಗೂ ನೂಹದಲ್ಲಿ ತ್ವರಿತ ಕಾರ್ಯಾಚರಣೆಯ ದಳದ ನೇಮಕ ಮಾಡುವುದು ಮುಂತಾದ ಬೇಡಿಕೆಗಳು ಸಲ್ಲಿಸಿದ್ದಾರೆ.

ಸಂಪಾದಕೀಯ ನಿಲುವು

ಯಾವಾಗಲು ಸಾಮಾನ್ಯ ಜನರಿಗೆ ‘ದೂರು ಬಂದ ನಂತರ ಅಪರಾಧ ದಾಖಲಿಸುವೆವು’ ಎಂದು ಹೇಳುವ ಪೊಲೀಸರು ಹಿಂದುಗಳ ವಿರೋಧದಲ್ಲಿ ಮಾತ್ರ ಸ್ವಯಂ ಪ್ರೇರಿತವಾಗಿ ತಕ್ಷಣ ದೂರು ದಾಖಲಿಸುತ್ತಾರೆ, ಇದನ್ನು ಅರಿಯರಿ ! ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಹಿಂದುಗಳಿಗೆ ಇದು ಅಪೇಕ್ಷಿತವಿಲ್ಲ !