ಮ. ಗಾಂಧಿಯವರು ತಮ್ಮ ಪ್ರಾಣ ಕೊಟ್ಟು ಪಾಕಿಸ್ತಾನವನ್ನು ವಿನಾಶದಿಂದ ರಕ್ಷಿಸಿದರು ! – ಪಾಕಿಸ್ತಾನಿ ಮೂಲದ ಸ್ವೀಡಿಶ್ ಪ್ರೊಫೆಸರ್ ಇಶ್ತಿಯಾಕ್ ಅಹ್ಮದ್

  • ಪಾಕಿಸ್ತಾನಿ ಮೂಲದ ಸ್ವೀಡಿಶ್ ಪ್ರೊಫೆಸರ್ ಇಶ್ತಿಯಾಕ್ ಅಹ್ಮದ್ ಹೇಳಿಕೆ !

  • ಮಹಮ್ಮದ್ ಅಲಿ ಜಿನ್ನಾ ಇವರು ಮ. ಗಾಂಧಿ ಮತ್ತು ನೆರೂರವರಿಗೆ ಕೃತಜ್ಞರಾಗಿರಬೇಕಿತ್ತು !

ಪಾಕಿಸ್ತಾನಿ ಮೂಲದ ಸ್ವೀಡಿಶ್ ಪ್ರೊಫೆಸರ್ ಇಶ್ತಿಯಾಕ್ ಅಹ್ಮದ್

ನವದೆಹಲಿ – ಪಾಕಿಸ್ತಾನದ ಸಂಸ್ಥಾಪಕರ ಮಹಮ್ಮದ್ ಅಲಿ ಜಿನ್ನಾ ಇವರು ಮ. ಗಾಂಧಿ ಮತ್ತು ಅಂದಿನ ಭಾರತ ಸರಕಾರಕ್ಕೆ ಕೃತಜ್ಞರಾಗಿರಬೇಕಿತ್ತು; ಏಕೆಂದರೆ ಅವರಿಂದಲೇ ಪಾಕಿಸ್ತಾನ ವಿನಾಶದಿಂದ ಪಾರಾಯಿತು. ಮ. ಗಾಂಧಿಯವರಂತೂ ತಮ್ಮ ಪ್ರಾಣ ಕೊಟ್ಟು ಪಾಕಿಸ್ತಾನವನ್ನು ಉಳಿಸಿದ್ದಾರೆ, ಎಂದು ಪಾಕಿಸ್ತಾನಿ ಮೂಲದ ಸ್ವೀಡನ್ನಿನಲ್ಲಿರುವ ಪ್ರಾಧ್ಯಾಪಕ ಇಶ್ತಿಯಾಕ್ ಅಹಮ್ಮದ್ ಇವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಇಶ್ತಿಯಾಕ್ ಅಹಮ್ಮದ ಅವರು ಮಾತನ್ನು ಮುಂದುವರಿಸಿ,

1. ವಿಭಜನೆಯ ಸಮಯದಲ್ಲಿ ಭಾರತದಲ್ಲಿದ್ದ ಎಲ್ಲಾ ಮುಸಲ್ಮಾನರು ಪಾಕಿಸ್ತಾನಕ್ಕೆ ಬಂದಿದ್ದರೆ, ಪಾಕಿಸ್ತಾನ ನಾಶವಾಗುತ್ತಿತ್ತು. ಆ ಸಮಯದಲ್ಲಿ ಮ. ಗಾಂಧಿ ಮತ್ತು ನೆಹರೂ ಪಾಕಿಸ್ತಾನದ ಜೊತೆ ನಿಂತು ಸಹಾಯ ಮಾಡಿದರು.

2. ಭಾರತದಿಂದ ಎಲ್ಲ ಮುಸಲ್ಮಾನರು ಪಾಕಿಸ್ತಾನಕ್ಕೆ ಬರುವುದು ಮಹಮ್ಮದ್ ಅಲಿ ಜಿನ್ನಾ ಇವರಿಗೆ ಇಷ್ಟವಿರಲಿಲ್ಲ. ವಿಭಜನೆಯ ಸಮಯದಲ್ಲಿ ಪಾಕಿಸ್ತಾನ ಯಾವ ರೀತಿ ಅಲ್ಲಿಯ ಹಿಂದೂಗಳು ಮತ್ತು ಸಿಖ್ಖರನ್ನು ಇರಲು ಬಿಡಲಿಲ್ಲವೋ ಹಾಗೆಯೇ ಭಾರತವೂ ಅಲ್ಲಿರುವ ಮೂರುವರೆ ಕೋಟಿ ಮುಸಲ್ಮಾನರನ್ನು ಅಲ್ಲಿ ಉಳಿಯಲು ಬಿಡದಿದ್ದರೆ, ಅವರು ಭಾರತದಿಂದ ಪಾಕಿಸ್ತಾನಕ್ಕೆ ಬಂದಿರುತ್ತಿದ್ದರು.

3. ಆ ಸಮಯದಲ್ಲಿ ಪೂರ್ವ ಪಾಕಿಸ್ತಾನವಂತೂ ಬಡವಾಗಿತ್ತು. ಪಶ್ಚಿಮ ಪಾಕಿಸ್ತಾನದ ಜನಸಂಖ್ಯೆ 53 ಕೋಟಿಯಿತ್ತು. ಒಂದು ವೇಳೆ ಭಾರತದಿಂದ ಎಲ್ಲ ಮುಸಲ್ಮಾನರೂ ಪಾಕಿಸ್ತಾನಕ್ಕೆ ಬಂದಿದ್ದರೆ, ಈ ಜನಸಂಖ್ಯೆ ಆರೂಮುಕ್ಕಾಲು ಕೋಟಿಗಿಂತ ಹೆಚ್ಚಿರುತ್ತಿತ್ತು. ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಬರವಣಿಗೆಯ ಕಾಗದವೂ ನಮ್ಮ ಬಳಿ ಇರಲಿಲ್ಲ. ಇಂತಹ ಸಮಯದಲ್ಲಿ ಈ ಮುಸಲ್ಮಾನರೆಲ್ಲ ಪಾಕಿಸ್ತಾನಕ್ಕೆ ಬಂದಿದ್ದರೆ ಪಾಕಿಸ್ತಾನ ಸರ್ವನಾಶವಾಗುತ್ತಿತ್ತು.

4. ಇದರಿಂದ ಮ. ಗಾಂಧಿ ಮತ್ತು ನೆಹರೂ ಇವರು ಪಾಕಿಸ್ತಾನವನ್ನು ಉಳಿಸಿದರು. ಅದಕ್ಕಾಗಿ ಜಿನ್ನಾ ಇವರಿಬ್ಬರಿಗೂ ಕೃತಜ್ಞರಾಗಿರಬೇಕಿತ್ತು. ಅವರು ಪಾಕಿಸ್ತಾನಕ್ಕಾಗಿ ಬಹಳ ಮಾಡಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮ. ಗಾಂಧಿಯವರು ಪಾಕಿಸ್ತಾನವನ್ನು ವಿನಾಶದಿಂದ ರಕ್ಷಿಸಿದರು. ಆದರೆ ಭಾರತವನ್ನು ವಿನಾಶದ ಪ್ರಪಾತಕ್ಕೆ ತಳ್ಳಿದ್ದಾರೆ ಎಂದು ದೇಶಭಕ್ತರಿಗೆ ಅನಿಸುತ್ತದೆ !