ಉತ್ತರಾಖಂಡದ ಸಚಿವರ ಮೇಲೆ ‘ಯಾ ಖುದಾ’ ಎನ್ನುತ್ತಾ ಮುಸಲ್ಮಾನ ಯುವಕನಿಂದ ದಾಳಿಗೆ ಯತ್ನ !

  • ಅಂಗರಕ್ಷಕರು ಯುವಕನನ್ನು ತಡೆದರು !

  • ಯುವಕನ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಕುಟುಂಬದವರ ದಾವೆ !

ಸೈನಿಕ ಕಲ್ಯಾಣ ಮತ್ತು ಕೃಷಿ ಸಚಿವ ಗಣೇಶ ಜೋಶಿ

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿಯ ಡಾಕರ ಮಾರುಕಟ್ಟೆಯಲ್ಲಿ ಇಮ್ರಾನ ಎಂಬ ಯುವಕನು ‘ಯಾ ಖೂದಾ’ ಎಂದು ಹೇಳುತ್ತಾ ಉತ್ತರಾಖಂಡದ ಭಾಜಪ ಸರಕಾರದ ಸೈನಿಕ ಕಲ್ಯಾಣ ಮತ್ತು ಕೃಷಿ ಸಚಿವ ಗಣೇಶ ಜೋಶಿ ಇವರ ಮೇಲೆ ದಾಳಿ ನಡೆಸಿದನು. ಅವನು ಅಲ್ಲಿಯ ಅಂಗಡಿಯಾತನಿಗೂ ಕೂಡ ಥಳಿಸಿದನು. ಆದ್ದರಿಂದ ಸ್ಥಳೀಯರು ಅವನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದರು. ನಂತರ ಪೊಲೀಸರು ಅವನನ್ನು ವಶಕ್ಕೆ ಪಡೆದರು. ಆತ ಉತ್ತರಪ್ರದೇಶದ ಬಿಜನೌರನ ನಿವಾಸಿಯಾಗಿದ್ದಾನೆ. ಇಮ್ರಾನ್ ಇವನ ಕುಟುಂಬದವರು ಅವನ ಮನೋರೋಗಿ ಎಂದು ದಾವೆ ಮಾಡಿದ್ದಾರೆ.

ಗಣೇಶ ಜೋಶಿ ಇವರು ಮಾರುಕಟ್ಟೆಯಲ್ಲಿ ಜನ ಸಂಪರ್ಕ ಮಾಡುತ್ತಿರುವಾಗ ಇಮ್ರಾನ್ ಅವರ ಬಳಿ ಬಂದನು ಮತ್ತು ಅವನು ತನ್ನ ಬಳಿ ಇರುವ ಮರದ ತುಂಡಿನಿಂದ ದಾಳಿ ನಡೆಸುವ ಪ್ರಯತ್ನ ಮಾಡಿದನು. ಆಗ ಜೋಶಿಯವರ ಅಂಗರಕ್ಷಕರು ಅವನನ್ನು ಹಿಡಿದರು ಮತ್ತು ಅವನ ಕೈಯಿಂದ ಮರದ ತುಂಡನ್ನು ಕಸಿದುಕೊಂಡರು.

ಸಂಪಾದಕರ ನಿಲುವು

ಯಾವಾಗ ಮತಾಂಧ ಮುಸಲ್ಮಾನರು ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ಮಾಡುತ್ತಾರೆ, ಆಗ ಅವನು ಮನೋರೋಗಿ ಎಂದು ಪೊಲೀಸರು ಯಾವಾಗಲೂ ದಾವೆ ಮಾಡುತ್ತಾರೆ. ಈಗ ಯುವಕನ ಪರಿವಾರದವರು ಇಂತಹ ದಾವೆ ಮಾಡುತ್ತಿದ್ದಾರೆ. ಇದು ಒಂದು ರೀತಿಯ ಕಣ್ಣಿಗೆಮಣ್ಣಯರಚುವ ಕೆಲಸ ಆಗಿದೆ ಇದು ಇದರಿಂದ ಸ್ಪಷ್ಟವಾಗುತ್ತದೆ !