ಮುಂಬಯಿ – ಇತ್ತೀಚೆಗೆ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ವಿರೋಧಿಸುವುದು ತಪ್ಪು ಎಂದು ನಟಿ ಶಬಾನಾ ಅಜ್ಮಿ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಅವರು, ‘ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಬೇಡಿಕೆ ಎಷ್ಟು ತಪ್ಪೋ, ಅದೇ ರೀತಿ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ನಿಷೇಧಿಸುವ ಬೇಡಿಕೆಯೂ ತಪ್ಪು ಎಂದು ಹೇಳಿದ್ದಾರೆ. ಚಿತ್ರವೊಂದು ಒಮ್ಮೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಇನ್‌ಸ್ಪೆಕ್ಷನ್‌ನಿಂದ (‘ಸೆನ್ಸಾರ್ ಬೋರ್ಡ್’) ಪ್ರಮಾಣಪತ್ರವನ್ನು ಪಡೆದರೆ, ಅದರಲ್ಲಿ ಬೇರೆ ಯಾವುದೇ ಸಾಂವಿಧಾನಿಕ ಸಂಸ್ಥೆಗಳ ಪಾತ್ರವಿರುವುದಿಲ್ಲ.’ ನಟ ಅಮೀರ್ ಖಾನ್ ಈ ಹಿಂದೆ ಹಿಂದೂ ದೇವತೆಗಳನ್ನು ವಿಡಂಬನೆ ಮಾಡಿದ್ದ ‘ಪಿಕೆ’ ಚಿತ್ರ ಮಾಡಿದ್ದರು. ಆದ್ದರಿಂದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
Those who speak of banning #The Kerala Story are as wrong as those who wanted to ban Aamir Khan’s #Laal Singh Chaadha. Once a film has been passed by the Central Board of Film Certification nobody has the right to become an extra constitutional authority .
— Azmi Shabana (@AzmiShabana) May 8, 2023