ಪೇಟಲಿಂಗ ಜಯ (ಮಲೇಷ್ಯಾ) – ಚರ್ಚ್, ದೇವಸ್ಥಾನಗಳಂತಹ ಮುಸಲ್ಮಾನೆತರ ಧಾರ್ಮಿಕ ಸ್ಥಳದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಮುಸಲ್ಮಾನರು ಉಪಸ್ಥಿತರಿರಲು ನಿಷೇಧ ಹೇರಲಾಗಿದೆ. ಸೆಲಾಂಗಾರಚೆ ಧಾರ್ಮಿಕ ವ್ಯವಹಾರ ಇಲಾಖೆಯ ಕಾರ್ಯಕಾರಿ ಅಧಿಕಾರಿ ಝಾವಾವಿ ಅಹಮದ್ ಮುಘನಿ ಇವರು ಈ ಮಾಹಿತಿ ನೀಡಿದರು. ಸಹಿಷ್ಣುತೆ ಹೆಚ್ಚಿಸುವುದಕ್ಕಾಗಿ ಸ್ವಯಂಸೇವೆ ಸಂಸ್ಥೆಗಳಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಝವಾವಿ ಇವರು ಸ್ವಾಗತ ಕೋರಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೆಲಾಂಗಾರ್
ಇಸ್ಲಾಮಿಕ್ ಧಾರ್ಮಿಕ ಇಲಾಖೆಯಿಂದ ಜಾರಿಗೊಳಿಸುವ ಮಾರ್ಗದರ್ಶಕ ತತ್ವಗಳ ಪಾಲನೆಯಾಗಬೇಕು, ಎಂದು ಝವಾವಿ ಇವರು ಒಂದು ಮನವಿಯಲ್ಲಿ ಹೇಳಿದ್ದಾರೆ. ಧಾರ್ಮಿಕ ಉಪಕ್ರಮವನ್ನು ಆಯೋಜಿಸಲು ಇಚ್ಚಿಸುವ ಸಂಸ್ಥೆಗಳು ಯಾವುದೇ ವದಂತಿಯನ್ನು ಹಬ್ಬಿಸಬಾರದು, ಇದಕ್ಕಾಗಿ ಹೆಚ್ಚು ಸೂಕ್ಷ್ಮವಾಗಿರಲು ನೆನಪು ಮಾಡಿಕೊಟ್ಟರು. ಇದರ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಮುಸಲ್ಮಾನೆತರ ಸಂಸ್ಥೆಗಳು ಇಸ್ಲಾಮಿಕ್ ಧಾರ್ಮಿಕ ವ್ಯವಹಾರ ಇಲಾಖೆ ಅಥವಾ ರಾಜ್ಯ ಮುಫ್ತಿ ಇವರ ಜೊತೆ ಸಂಪರ್ಕಿಸಲು ಕರೆ ನೀಡಿದ್ದಾರೆ.
(ಸೌಜನ್ಯ : Free Malaysia Today)
‘ಇಂಪ್ಯಾಕ್ಟ್ ಮಲೇಷ್ಯಾ’, ಈ ಸ್ವಯಂ ಸೇವಿ ಸಂಸ್ಥೆಯ ಸದಸ್ಯರು ಕ್ಲಾಂಗ್ ಇಲ್ಲಿಯ ಚರ್ಚಗೆ ನೀಡಿರುವ ಭೇಟಿಯ ಬಗ್ಗೆ ಫಲಕದಿಂದ ಅಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ರೈಸ್ತ ಧರ್ಮದ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಕೊಳ್ಳುವುದಕ್ಕಾಗಿ ಕ್ರೈಸ್ತರಲ್ಲದೆ ಇರುವ ಜನರಿಗೆ ಚರ್ಚ್ ಗೆ ಭೇಟಿ ನೀಡಲು ಫಲಕಗಳ ಮೂಲಕ ಕರೆ ನೀಡಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಝವಾವಿ ಇವರು ಒಂದು ಮನವಿ ಪ್ರಸಾರಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮುಸಲ್ಮಾನ ಯುವಕರು ಸಹಭಾಗಿಯಾಗಿರಲಿಲ್ಲ ಎಂದು ಮಲೇಷ್ಯಾದ ಸಚಿವ ಹನ್ನಾ ಯೋಹ ಇವರು ಹೇಳಿದರು.