ಮೊನೂ ಮಾನೇಸರನನ್ನು ಬಂಧಿಸಿದರೆ, ಸಂಪೂರ್ಣ ಗ್ರಾಮವನ್ನೇ ಬಂಧಿಸಬೇಕಾಗಬಹುದು !

  • 2 ಮುಸಲ್ಮಾನನನ್ನು ಜೀವಂತ ಸುಟ್ಟಿರುವ ಪ್ರಕರಣ

  • ಮಾನೆಸರ (ಹರಿಯಾಣಾ) ಇಲ್ಲಿಯ ಹಿಂದೂ ಮಹಾಪಂಚಾಯತಿಯಿಂದ ರಾಜಸ್ಥಾನ ಪೊಲೀಸರಿಗೆ ಎಚ್ಚರಿಕೆ !

ಮಾನೆಸರ (ಹರಿಯಾಣಾ) – ರಾಜಸ್ಥಾನದ ಭಿವಾನಿಯಲ್ಲಿ ಜುನೈದ ಮತ್ತು ನಾಸಿರನನ್ನು ಕಾರಿನಲ್ಲಿ ಜೀವಂತ ಸುಟ್ಟು ಹತ್ಯೆ ಮಾಡಿರುವ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಗೋರಕ್ಷಕ ಮೊನು ಮಾನೆಸರ ಮತ್ತು ಅವನ ಸಹಪಾಠಿಗಳ ಮೇಲೆ ದೂರು ದಾಖಲಿಸಲಾಗಿದೆ; ಆದರೆ ಮೊನು ಮಾತ್ರ ಈ ಹತ್ಯೆಗೂ ಅವನಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಮಾನೆಸರದಲ್ಲಿ ಹಿಂದೂ ಮಹಾಪಂಚಾಯತಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ನೂರಾರು ಜನರು ಭಾಗವಹಿಸಿದ್ದರು. ಈ ಸಮಯದಲ್ಲಿ ಪೊಲೀಸರಿಗೆ, `ಒಂದು ವೇಳೆ ರಾಜಸ್ಥಾನ ಪೊಲೀಸರು ಮೊನೂ ಮಾನೆಸರನನ್ನು ಬಂಧಿಸಲು ಇಲ್ಲಿ ಬಂದರೆ, ಅವರು ತಮ್ಮ ಕಾಲುಗಳಿಂದ ನಡೆದುಕೊಂಡು ಹೋಗಲಾರರು. ಮೊನೂವನ್ನು ಬಂಧಿಸಿದರೆ, ಸಂಪೂರ್ಣ ಗ್ರಾಮಸ್ಥರನ್ನು ಬಂಧಿಸಬೇಕಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಮೊನೂ ಮಾನೆಸರ ಇಲ್ಲದಿದ್ದರೆ, ಈ ಗ್ರಾಮ ಚಿಕ್ಕ ಪಾಕಿಸ್ತಾನವಾಗಿರುತ್ತಿತ್ತು’ ಎಂದು ಹೇಳಿದ್ದಾರೆ.