ಭಾರತದಲ್ಲಿ ಜನಿಸಿದವರೆಲ್ಲರೂ ಹಿಂದೂಗಳೆ !

ಕೇರಳದ ರಾಜ್ಯಪಾಲ ಅರೀಫ್ ಮಹಮ್ಮದ ಖಾನ್ ಇವರು ಸರ್ ಸಯ್ಯದ ಮಹಮ್ಮದ ಖಾನ್ ಇವರ ಹೇಳಿಕೆಯ ಉಲ್ಲೇಖ !

ಕೇರಳದ ರಾಜ್ಯಪಾಲ ಅರೀಫ್ ಮಹಮ್ಮದ ಖಾನ್

ನವದೆಹಲಿ – ಯಾರು ಭಾರತದಲ್ಲಿ ಜನಿಸಿದ್ದಾರೆ, ಯಾರು ಭಾರತದ ಅನ್ನ ತಿಂದಿದ್ದಾರೆ, ಯಾರು ಭಾರತದ ನದಿಗಳ ನೀರು ಕುಡಿದಿದ್ದಾರೆ, ಅವರೆಲ್ಲರಿಗೂ ತಮ್ಮನ್ನು ‘ಹಿಂದೂ’ ಎಂದು ಹೇಳಿಕೊಳ್ಳುವ ಅಧಿಕಾರವಿದೆ, ಆದ್ದರಿಂದ ‘ನೀವು ನನ್ನನ್ನು ಹಿಂದೂ ಎಂದು ಹೇಳಬೇಕು’, ಎಂದು ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕ ಸರ್ ಸಯ್ಯದ ಸಹಮ್ಮದ ಖಾನ್ ಇವರು ಕೆಲವು ದಶಕಗಳ ಹಿಂದೆ ಆರ್ಯ ಸಮಾಜದ ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಇದನ್ನು ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ ಇವರು ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವನ್ನು ನೆನೆಪಿಸಿ ಕೊಟ್ಟರು.

‘ಹಿಂದೂ’ ಇದು ಭೌಗೋಲಿಕ ನಾಮಪದವಾಗಿದೆ !

ರಾಜ್ಯಪಾಲ ಅರೀಫ್ ಮಹಮ್ಮದ ಖಾನ್ ಇವರು, ಸರ್ ಸಯ್ಯದ ಖಾನ್ ಇವರು ವಸಾಹತವಾದಿ ಆಡಳಿತದ ವಿಧಾನಪರಿಷತ್ತಿನ ಕಾರ್ಯಕಾಲವನ್ನು ಪೂರ್ಣಗೊಳಿಸಿದ್ದಾರೆ, ಆಗ ಆರ್ಯ ಸಮಾಜದ ಸದಸ್ಯರು ಅವರನ್ನು ಸ್ವಾಗತಿಸಿದ್ದರು. ಸರ್ ಸಯ್ಯದ ಇವರು ಆರ್ಯ ಸಮಾಜದ ಸದಸ್ಯರಿಗೆ, ‘ನೀವು ನನ್ನನ್ನು ಹಿಂದೂ’ ಎಂದು ಏಕೆ ಹೇಳುವುದಿಲ್ಲ ? ‘ಹಿಂದೂ’ ಈ ಶಬ್ದವನ್ನು ನಾನು ಧಾರ್ಮಿಕ ನಾಮಪದವೆಂದು ಒಪ್ಪುವುದಿಲ್ಲ’, ಹಿಂದೂ’ ಇದು ಭೌಗೋಲಿಕ ನಾಮಪದವಾಗಿದೆ.’ (‘ಯಾರು ಹೀನ ಗುಣಗಳ ನಾಶ ಮಾಡುತ್ತಾನೊ, ಅವನು ಹಿಂದೂ’, ಯಾರು ಹಿಂದೂ ಧರ್ಮಶಾಸ್ತ್ರ, ರೂಢಿ ಪರಂಪರೆ, ಸಂಸ್ಕೃತಿಯನ್ನು ಪಾಲನೆ ಮಾಡುತ್ತಾನೊ, ಅವನು ಹಿಂದೂ’ ಆಗಿದ್ದಾನೆ. ‘ಹಿಂದೂ’ ಎಂಬ ಹೆಸರಿನ ಧರ್ಮವೆ ಇಲ್ಲ’, ಎಂದು ಹಿಂದೂಗಳಲ್ಲಿ ಬಿಂಬಿಸಿ ಅವರಲ್ಲಿ ಕೊರತೆಯನ್ನು ನಿರ್ಮಾಣ ಮಾಡಲು ಇಂತಹ ಹೇಳಿಕೆಗಳನ್ನು ಧೂರ್ತ ಮುಸಲ್ಮಾನರಿಂದ ನೀಡಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)

ಸಂಪಾದಕೀಯ ನಿಲುವು

ಸರ್ ಸಯ್ಯದ ಅಹಮ್ಮದ ಖಾನ್ ಇವರೆ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ ಹಾಗೂ ಈ ವಿಶ್ವವಿದ್ಯಾಲಯದಲ್ಲಿಯೇ ಹಿಂದೂ ವಿರೋಧಿ ಕ್ರತ್ಯಗಳು ನಡೆಯುತ್ತವೆ, ಎಂಬುದನ್ನು ಗಮನದಲ್ಲಿಡಿ !