ರಾಜಸ್ಥಾನದ ಲಂಚ ಪ್ರಕರಣದಲ್ಲಿ ಬಂಧಿತ ಮಹಿಳಾ ಪೊಲೀಸ್ ಅಧಿಕಾರಿಯ ಸ್ಥಳಗಳ ಮೇಲೆ ದಾಳಿ !

ದುಬಾರಿ ವಿದೇಶಿ ಸರಾಯಿ ಜಪ್ತಿ

ಅಜಮೇರ (ರಾಜಸ್ಥಾನ) – ಒಂದು ಔಷಧ ನಿರ್ಮಾಣದ ಕಂಪನಿಯಿಂದ ೨ ಕೋಟಿ ರೂಪಾಯಿಗಳ ಲಂಚ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ದಿವ್ಯಾ ಮಿತ್ತಲ ಇವರನ್ನು ಭ್ರಷ್ಟಾಚಾರ ನಿಗ್ರಹ ದಳವು ೨ ದಿನಗಳ ಹಿಂದೆ ಬಂಧಿಸಿತ್ತು. ಬಂಧನದ ಬಳಿಕ ಪೊಲೀಸರು ಉಯಪುರದಲ್ಲಿನ ಅವರ ‘ಫಾರ್ಮ್‌ಹೌಸ್’ ಮತ್ತು ‘ರಿಸೋರ್ಟ್’ಗೆ ದಾಳಿ ಮಾಡಿದರು. ಅಲ್ಲಿಂದ ದುಬಾರಿ ವಿದೇಶಿ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ರಿಸೋರ್ಟ್ ದಿವ್ಯಾ ಮಿತ್ತಲರ ಸಹಯಾಕ ಹಾಗೂ ಅಮಾನತುಗೊಳಿಸಿದ ಪೊಲೀಸ್ ಸಿಬ್ಬಂದಿ ಸುಮಿತ ಕುಮಾರ ನಡೆಸುತ್ತಿದ್ದನು. ಈ ರಿಸೋರ್ಟ್‌ಗೆ ಅನೇಕ ರಾಜಕಾರಣಿಗಳು ಹಾಗೂ ಕೆಲವು ವಿಶಿಷ್ಟ ಅಥಿತಿಗಳು ಬರುತ್ತಿದ್ದರು.

ಅಜ್ಮೆರ, ಉದಯಪುರ, ಝುಂಝುನು ಹಾಗೂ ಜೈಪುರದಲ್ಲಿನ ೫ ಸ್ಥಳಗಳಿಗೆ ಪೊಲೀಸರು ದಾಳಿ ಮಾಡಿದ್ದು ಇನ್ನೂ ಆಸ್ತಿಪಾಸ್ತಿಯ ವಿಚಾರಣೆ ನಡೆಯುತ್ತಿದೆ. ಬಂಧಿಸಿದ ನಂತರ ದಿವ್ಯಾ ಮಿತ್ತಲ ಇವರು ‘ಮೇಲಿನ’ವರೆಗೆ ಹಣ ತಲಪಿಸಬೇಕಾಗುತ್ತದೆ’, ಎಂದು ಹೇಳಿದ್ದರು. (ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಸರಕಾರವಿದೆ. ಆದ್ದರಿಂದ ‘ಮೇಲಿನ’ವರೆಗೆ ಅಂದರೆ ಕಾಂಗ್ರೆಸ್ ಸರಕಾರದವರೆಗೆ ಈ ಹಣವನ್ನು ತಲಪಿಸಲಾಗುತ್ತದೆಯೆ ? ಎಂಬುದನ್ನು ಯಾರು ಕಂಡು ಹಿಡಿಯುವವರು ? – ಸಂಪಾದಕರು)

ಸಂಪಾದಕೀಯ ನಿಲುವು

  • ಪುರುಷರೊಂದಿಗಿನ ಸಮಾನತೆ ಮಾಡುವಾಗ ಭ್ರಷ್ಟಾಚಾರದಲ್ಲಿಯೂ ಮಹಿಳೆಯರು ಹಿಂದೆ ಉಳಿದಿಲ್ಲ, ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ, ಎಂದೇ ಹೇಳಬೇಕು !
  • ಭಾರತದಲ್ಲಿ ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತೆಸೆಯಲು ಪ್ರಾಮಾಣಿಕ ಆಡಳಿತಗಾರರು ಬೇಕು !