ಜೌನಪೂರ (ಉತ್ತರಪ್ರದೇಶ)ದಲ್ಲಿ ಮೊಹರಂ ಮೆರವಣಿಗೆಯಲ್ಲಿ ‘ಸರ್ ತನ ಸೇ ಜುದಾ’ ದ ಘೋಷಣೆ : ನಾಲ್ವರ ಬಂಧನ

(‘ಸರ್ ತನ ಸೇ ಜುದಾ’ ಎಂದರೆ ರುಂಡ ದೇಹದಿಂದ ಬೇರೆ ಮಾಡುವುದು’)

ಜೌನಪುರ (ಉತ್ತರಪ್ರದೇಶ) – ಇಲ್ಲಿಯ ಕರಿಯಾಂವಾ ಮಾರುಕಟ್ಟೆಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ‘ಸರ್ ತನ ಸೇ ಜುದಾ’(ರುಂಡ ದೇಹದಿಂದ ಬೇರೆ ಮಾಡುವುದು) ಎಂಬ ಘೋಷಣೆ ನೀಡುವ ವಿಡಿಯೋ ಪ್ರಸಾರವಾಗಿದೆ. ಅದರ ನಂತರ ಪೊಲೀಸರು ದೂರನ್ನು ದಾಖಲಿಸಿ ಮಹಮ್ಮದ್ ಶಕೀಲ್, ಮಹಮ್ಮದ್ ಅಬ್ದುಲ್, ಮಹಮ್ಮದ್ ಜಿಶಾನ ಮತ್ತು ಮಹಮ್ಮದ್ ಹರೀಸ ಈ ನಾಲ್ಕು ಜನರನ್ನು ಬಂಧಿಸಿದ್ದಾರೆ.