ಸರಕಾರಿ ಶಾಲೆಯ ಪ್ರಾಂಶುಪಾಲ ನಾಸಿರ ಅಹಮದನಿಂದ ಹಿಂದೂ ಮಹಿಳೆಗೆ ಥಳಿತ !

ಸೀತಾಪುರ (ಉತ್ತರಪ್ರದೇಶ) – ಇಲ್ಲಿನ ಸರಕಾರಿ ಶಾಲೆಯೊಂದರ ಪ್ರಾಂಶುಪಾಲ ನಾಸಿರ ಅಹಮದ ವಿರುದ್ಧ ಹಿಂದೂ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಅತನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಾಳೆ. ಮಹಿಳೆಯು ದೂರಿನಲ್ಲಿ, ‘ಪ್ರಾಂಶುಪಾಲರು ನನ್ನನ್ನು ಕೆಟ್ಟದಾಗಿ ನೋಡುತ್ತಾರೆ, ಅಸಭ್ಯವಾಗಿ ಮಾತನಾಡುತ್ತಾರೆ. ಎಂದು ದೂರಿದ್ದಾರೆ. ನಾನು ವಿರೋಧಿಸಿದರೆ ‘ನನ್ನನ್ನು ಕೆಲಸದಿಂದ ತೆಗೆದು ಹಾಕುವದಾಗಿ’ ಬೆದರಿಕೆ ಹಾಕುತ್ತಾನೆ ಎಂದು ಮಹಿಳೆ ದೂರಿದ್ದಾರೆ. ಪೊಲೀಸರು ಅಹಮದನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ನಡತೆ ಇರುವ ಪ್ರಾಂಶುಪಾಲರು ಮಕ್ಕಳಿಗೆ ಎಂತಹ ಶಿಕ್ಷಣ ನೀಡುತ್ತಿದ್ದಾರೆ ಎಂದು ಯೋಚಿಸದಿರುವುದು ಓಳಿತು !