ಆಸ್ಸಾಮಿನಲ್ಲಿ ಹಿಂದೂಗಳ ಮತಾಂತರಕ್ಕೆ ಕ್ರೈಸ್ತ ಮತಪ್ರಚಾರಕರಿಂದ ಸಾಂಪ್ರದಾಯಿಕ ಬಿಹು ನೃತ್ಯ ಹಾಗೂ ಸಂಗೀತದ ಬಳಕೆ !

ಗೌಹತ್ತಿ – ರಾಜ್ಯದಲ್ಲಿ ಕ್ರೈಸ್ತ ಮತಪ್ರಚಾರಕರ ಮತಾಂತರದ ಚಟುವಟಿಕೆಗಳು ಹೆಚ್ಚಾಗಿದ್ದು ಅವರು ಚಹಾದ ತೋಟದಲ್ಲಿ ಕೆಲಸ ಮಾಡುವ ಆರ್ಥಿಕದೃಷ್ಟಿಯಲ್ಲಿ ಹಿಂದುಳಿದ ನೇಪಾಳಿ ಹಾಗೂ ಆದಿವಾಸಿ ಹಿಂದೂಗಳನ್ನು ಗುರಿಯಾಗಿಸುತ್ತಿದ್ದಾರೆ. ಇದಕ್ಕಾಗಿ ಕ್ರೈಸ್ತ ಮತಪ್ರಚಾರಕರು ಸಾಂಪ್ರದಾಯಿಕ ಬಿಹು ನೃತ್ಯದ ಆಧಾರ ಪಡೆದು ಸ್ಥಳೀಯರನ್ನು ಮೋಸಗೊಳಿಸುತ್ತಿದ್ದಾರೆ. ತರುಣ ಯುವಕರು ಹಾಗೂ ಯುವತಿಯರು ಒಟ್ಟಿಗೆ ಬಂದು ಮಾಡುತ್ತಿದ್ದ ‘ಬಿಹು’ ನೃತ್ಯವನ್ನು ಆಸ್ಸಾಮಿನ ಮೂಲ ಸಂಸ್ಕೃತಿಯ ಪ್ರತೀಕವೆಂದು ತಿಳಿಯಲಾಗುತ್ತದೆ. ಕ್ರೈಸ್ತ ಮತಪ್ರಚಾರಕರಿಂದ ಬಿಹು ಸಂಗೀತ ಹಾಗೂ ಹಾಡಿನ ತಾಳದ ಮೇಲೆ ಏಸುವಿನ ಗುಣಗಾನ ಮಾಡುವ ಹಾಡುಗಳನ್ನು ರಚಿಸಲಾಗಿದೆ. ಬಿಹು ಪದ್ಧತಿಯ ಹಾಡುಗಳಲ್ಲಿ ಏಸುವಿನ ಹೆಸರನ್ನು ಸೇರಿಸಿ ಸ್ಥಳೀಯರನ್ನು ಆಕರ್ಷಿಸುವ ಕೆಲಸವನ್ನು ಕ್ರೈಸ್ತ ಮತಪ್ರಚಾರಕರು ಮಾಡುತ್ತಿದ್ದಾರೆ.

ಏಸುವಿನ ಮಹಾನತೆಯನ್ನು ಒತ್ತಿಹೇಳಿ ಹಿಂದೂಗಳ ಮತಾಂತರ ಮಾಡಲು ಪ್ರಯತ್ನ !

ಉದಲಗುರಿ ಜಿಲ್ಲೆಯಲ್ಲಿ ‘ನೇಪಾಳಿ ಬ್ಯಾಪತಿಸ್ತ ಕ್ರೈಸ್ತ ಅಸೋಸಿಯೇಶನ’ ಬಿಹು ಮಹೋತ್ಸವವನ್ನು ಆಯೋಜಿಸಿತ್ತು. ಇದರಲ್ಲಿ ಸ್ಥಳೀಯ ಆಸಾಮಿ ವಾದ್ಯಗಳನ್ನು ಬಾರಿಸಿ ಅವುಗಳ ತಾಳಕ್ಕೆ ಏಸುವಿನ ಗುಣಗಾನ ಮಾಡಲಾಯಿತು, ಸ್ಥಳೀಯರು ಇದರ ಮೇಲೆ ಆಕ್ಷೇಪವೆತ್ತಿದ್ದರು. ವ್ಯಾವಸಾಯಿಕ ಪದ್ಧತಿಯಿಂದ ಬಿಹುವಿನ ಚಿತ್ರೀಕರಣ ಮಾಡಿ ಆ ಮೂಲಕ ಏಸುವಿನ ಸ್ತುತಿ ಮಾಡುವ ಹಾಡುಗಳು ಈಗ ‘ಯೂ ಟ್ಯೂಬ್‌’ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಸಾರಿತವಾಗುತ್ತಿವೆ.

ಹಿಂದುತ್ವನಿಷ್ಠರಿಂದ ವಿರೋಧವಾದ ನಂತರವೂ ಮತಾಂತರದ ಚಟುವಟಿಕೆಗಳು ನಡೆಯುತ್ತಿವೆ !

ಸೋನಾಪೂರ ಭಾಗದಲ್ಲಿ ಕ್ರೈಸ್ತ ಮತಪ್ರಚಾರಕರು ದೊಡ್ಡ ಪ್ರಮಾಣದಲ್ಲಿ ಹಣ ಹಂಚಿ ಹಿಂದೂಗಳ ಮತಾಂತರ ಮಾಡುತ್ತಿದ್ದಾರೆ. ಹಣ ಪಡೆಯಲು ನಿರಾಕರಿಸಿದವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಆಮೀಷ ತೋರಿಸುತ್ತಿದ್ದಾರೆ. ಕಳೆದ ೩೦ ವರ್ಷಗಳಲ್ಲಿ ಸೋನಾಪೂರ ಭಾಗದಲ್ಲಿ ಚರ್ಚಗಳ ಸಂಖ್ಯೆಯಲ್ಲಿ ಅಪಾರ ಹೆಚ್ಚಳವಾಗಿದೆ. ಆದಿವಾಸಿ ಬಡ ಹಿಂದೂಗಳನ್ನು ಮೋಸಗೊಳಿಸಿ ಮಾಡಲಾಗುವ ಮತಾಂತರದ ವಿರುದ್ಧ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಧ್ವನಿ ಎತ್ತಿದ್ದರೂ ಈ ಭಾಗದಲ್ಲಿ ಕ್ರೈಸ್ತ ಮತಪ್ರಚಾರಕರಿಂದ ದೊಡ್ಡ ಪ್ರಮಾಣದಲ್ಲಿ ಮತಾಂತರದ ಘಟನೆಗಳು ನಡೆಯುತ್ತಲೇ ಇವೆ. ( ಭಾಜಪದ ರಾಜ್ಯದಲ್ಲಿ ಇಂತಹ ಸಂಗತಿಗಳು ಅಪೇಕ್ಷಿತವಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

* ಹಿಂದೂಗಳ ಸಂಸ್ಕೃತಿ ಹಾಗೂ ಪರಂಪರೆಯನ್ನು ತಮ್ಮ ಮತಾಂತರಕ್ಕಾಗಿ ಬಳಸುವ ದೂರ್ತ ಕ್ರೈಸ್ತರು ! ಇಂತಹವರಿಗೆ ಬುದ್ಧಿಕಲಿಸಲು ಭಾರತದಾದ್ಯಂತ ಕಠೋರವಾದ ಮತಾಂತರವಿರೋಧಿ ಕಾನೂನನ್ನು ರಚಿಸಿ ಕ್ರೈಸ್ತ ಮತಪ್ರಚಾರಕರ ಮೇಲೆ ಕಾರ್ಯಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ !

* ಆಸ್ಸಾಮಿನಲ್ಲಿ ಹಿಂದುತ್ವನಿಷ್ಠ ಹಿಮಂತ ಬಿಸ್ವಾ ಸರಮಾರವರ ಸರಕಾರವಿರುವಾಗಲೂ ಕ್ರೈಸ್ತ ಮತಪ್ರಚಾರಕರಿಗೆ ಯಾವುದೇ ಭಯವಿಲ್ಲ, ಎಂಬುದನ್ನು ಗಮನದಲ್ಲಿಡಿ. ಇದರಿಂದ ಅವರ ಹಿಂದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಶಕ್ತಿಗಳು ಕಾರ್ಯನಿರತವಾಗಿವೆ, ಎಂಬುದು ಸ್ಪಷ್ಟವಾಗುತ್ತದೆ. ಇಂತಹವರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಿದಾಗಲೇ ಅವರ ಹಿಂದೂ ವಿರೋಧಿ ಕಾರ್ಯಾಚರಣೆಗಳು ನಿಲ್ಲುವವು !