ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿ !

ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಕೇಂದ್ರ ಸರಕಾರದ ಬಳಿ ಬೇಡಿಕೆ

ಈ ರೀತಿಯ ಬೇಡಿಕೆ ಮಾಡುವಂತಾಗಬಾರದು. ಕೇಂದ್ರದಲ್ಲಿ ಭಾಜಪದ ಸರಕಾರ ಇರುವಾಗ ಮತ್ತು ಕಳೆದ ಕೆಲವು ವರ್ಷಗಳಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರವಿರೋಧಿ ಚಟುವಟಿಕೆಗಳು ಬೆಳಕಿಗೆ ಬಂದಿರುವಾಗಲೂ ಕೇಂದ್ರ ಸರಕಾರವು ತಾವಾಗಿಯೇ ನಿಷೇಧ ಹೇರುವ ಅವಶ್ಯಕತೆ ಇದೆ ! – ಸಂಪಾದಕರು 

(ಎಡದಲ್ಲಿ)  ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗುಹಾಟಿ (ಅಸ್ಸಾಂ) – ನಮ್ಮ ಸರಕಾರ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮೇಲೆ ಶೀಘ್ರವಾಗಿ ನಿಷೇಧ ಹೇರುವಂತೆ ಒತ್ತಾಯಿಸಿದೆ. ಈ ಬೇಡಿಕೆ ಹಿಜಾಬ್ ಪ್ರಕರಣದಿಂದಾಗಿ ಮಾಡಲಾಗಿಲ್ಲ. ಇದು ನಮ್ಮ ಪ್ರಜಾಪ್ರಭುತ್ವದಲ್ಲಿನ ಅಧಿಕಾರವಾಗಿದೆ. ಹಿಂಸಾಚಾರ ಮತ್ತು ಕಟ್ಟರವಾದಿ ಇವುಗಳಲ್ಲಿ ಸಹಭಾಗಿತ್ವದಿಂದ ನಿಷೇಧ ಹೇರಬೇಕು, ಎಂದು ಅಸ್ಸಾಂನ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಮಾಹಿತಿ ನೀಡಿದರು.