ಯಾವ ದೇಶಗಳಲ್ಲಿ ಹಿಜಾಬ್ ನಿಷೇಧವಿದೆಯೋ ಅಲ್ಲಿ ಪ್ರತಿಭಟನೆ ಮಾಡಿ ತೋರಿಸಿ ? – ಶ್ರೀ. ಟಿ. ರಾಜಾ ಸಿಂಗ್, ಭಾಜಪ ಶಾಸಕ, ತೆಲಂಗಾಣ

‘ಪಹಿಲೆ ಹಿಜಾಬ, ಫಿರ್ ಪೂರೀ ಕಿತಾಬ್ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದ !

ಭಾರತದ ಒಂದು ರಾಜ್ಯದಲ್ಲಿ ‘ಹಿಜಾಬ್’ಅನ್ನು ನಿಷೇಧಿಸುವ ನಿರ್ಧಾರದ ನಂತರ ಮುಸಲ್ಮಾನರು ಕೋಲಾಹಲವೆಬ್ಬಿಸುತ್ತಿದ್ದಾರೆ. ಹಿಜಾಬ್ ನೆಪದಲ್ಲಿ ಹಿಂದುತ್ವವನ್ನು ಅವಮಾನಿಸುತ್ತಿದ್ದಾರೆ. ಮುಂದೆ ಇಡೀ ಭಾರತದಲ್ಲೇ ಹಿಜಾಬ್ ನಿಷೇಧಿಸಲಾಗುವುದು. ಆಗ ಅವರು ಏನು ಮಾಡುವರು ? ಹಿಜಾಬ್ ನಿಷೇಧವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಚೀನಾ, ಶ್ರೀಲಂಕಾಗಳಂತಹ ಅನೇಕ ದೇಶಗಳಲ್ಲಿ ಹಿಜಾಬ್-ಬುರ್ಖಾವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲಿ ಪ್ರತಿಭಟನೆ ನಡೆಸಿದರೆ ತಲೆಕೆಳಗಾಗಿಸಿ ಹೊಡೆಯುತ್ತಾರೆ, ಅಂತಹ ಸ್ಥಳಕ್ಕೆ ತೆರಳಿ ಪ್ರತಿಭಟನೆ ಮಾಡಿತೋರಿಸಲಿ, ಎಂದು ತೆಲಂಗಾಣದ ಭಾಜಪದ ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾ ಸಿಂಗ್ ಪ್ರತಿಸವಾಲು ಹಾಕಿದಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಪಹಲೆ ಹಿಜಾಬ್, ಫಿರ್ ಪೂರಿ ಕಿತಾಬ್?’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವದಿ ಅಶ್ವಿನಿ ಉಪಾಧ್ಯಾಯ ಇವರು ಮಾತನಾಡುತ್ತಾ, ಸಂವಿಧಾನದ 30 ನೇ ಕಲಮ್ ಪ್ರಕಾರ ವಿದ್ಯಾರ್ಥಿಗಳು ತಮ್ಮ ಧರ್ಮದ ಬೋಧನೆ ಪ್ರಕಾರ ಶಾಲೆಗಳಲ್ಲಿ, ಗುರುಕುಲಗಳಲ್ಲಿ ಆ ಧರ್ಮದ ಬೋಧನೆಗಳಲ್ಲಿ ಹೇಳಿರುವಂತೆ ಶಿಕ್ಷಣ ಪಡೆಯಬಹುದು; ಆದರೆ ಸಂವಿಧಾನದ ೨೧ ನೇ ಕಲಮ್ ಪ್ರಕಾರ, ಶಾಲೆಗಳ ವ್ಯವಹಾರ, ನಿಯಮ ಜಾತ್ಯತೀತತೆಯ ತತ್ತ್ವದಿಂದ ನಡೆಯುತ್ತಿರುವುದರಿಂದ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳು ಅದನ್ನು ಪಾಲಿಸಲೇಬೇಕು. ಅಂತಹ ಸ್ಥಳಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್.ಅನ್ನು ಏಕೆ ಒತ್ತಾಯಿಸುತ್ತಾರೆ ? ಇಂದು ಹಿಜಾಬ್, ಮುಂದೆ ಶಾಲೆಗಳಲ್ಲಿ ನಮಾಜ್ ಸೇರಿದಂತೆ ಹಲವು ಬೇಡಿಕೆಗಳನ್ನು ಮಾಡುವರು. ಸಂವಿಧಾನದ 25 ನೇ ಕಲಮ್ ನಾಗರಿಕರಿಗೆ ಅವರ ಧರ್ಮವನ್ನು ಪಾಲಿಸುವ ಹಕ್ಕನ್ನು ನೀಡುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಧರ್ಮ, ಕುನೀತಿ ಮತ್ತು ಅನಿಷ್ಟ ಪದ್ಧತಿಗಳನ್ನು ಅನುಕರಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹಕ್ಕನ್ನು ನೀಡುತ್ತದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

ಈ ವೇಳೆ ಹರಿಯಾಣದ ವಿವೇಕಾನಂದ ಕಾರ್ಯ ಸಮಿತಿಯ ಅಧ್ಯಕ್ಷರಾದ ಶ್ರೀ. ನಿರಜ ಅತ್ರಿಯವರು ಮಾತನಾಡುತ್ತಾ, ಯಾವ ಮುಸಲ್ಮಾನ ಹುಡುಗಿಯರಿಗೆ ಈ ಹಿಂದೆ ಹಿಜಾಬ್ ಅನಿವಾರ್ಯವೆಂದು ಅನಿಸುತ್ತಿರಲಿಲ್ಲ ಅವರಿಗಿಂದು ಪುಸ್ತಕಗಳಿಗಿಂತ ಹಿಜಾಬ್ ಮುಖ್ಯವೆನಿಸುತ್ತಿದೆ. ಹಿಜಾಬ್ ಒಂದು ವಿಷಯವೇ ಆಗಿರಲಿಲ್ಲ, ಅದನ್ನು ಹುಟ್ಟಿಸಲಾಗಿದೆ. ಹಿಂದೆ ಮತಾಂಧರು ಬೀದಿಯಲ್ಲಿ ಗೂಂಡಾಗಿರಿ ಮಾಡುತ್ತಿದ್ದರು. ಈಗ ಅದನ್ನು ಮಾಡುವುದರ ಜೊತೆಗೆ, ಕೆಲವು ಮಾಧ್ಯಮಗಳನ್ನು ಹಿಡಿದಿಟ್ಟುಕೊಂಡು ತಮ್ಮ ’ಹಿಜಾಬ್’ ವಿಷಯವನ್ನು ಹೇರಲು ಪ್ರಯತ್ನಿಸುತ್ತಿವೆ. ಹಿಜಾಬ್‌ನ ಬೇಡಿಕೆಯನ್ನು ದೇಶದಲ್ಲಿ ಹೇರಿದರೆ, ಮುಂದೆ ಮುಸಲ್ಮಾನರು ‘ಕುರಾನ್’ನಲ್ಲಿ ಹೇಳಿದಂತೆ ಇತರ ಬೇಡಿಕೆಗಳನ್ನು ಹೇರಲು ಪ್ರಯತ್ನಿಸುವರು. ನ್ಯಾಯಾಲಯ ಕೂಡ ವಿಚಾರ ಮಾಡಿ ತೀರ್ಮಾನ ನೀಡಬೇಕು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಮಾತನಾಡುತ್ತಾ, ಕರ್ನಾಟಕ ರಾಜ್ಯದಲ್ಲಿ ಹಿಂದೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಾಲಾ ನಿಯಮಗಳು ಮತ್ತು ನ್ಯಾಯಾಲಯದ ಆದೇಶದಂತೆ ಸಮವಸ್ತ್ರದಲ್ಲಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ; ಆದರೆ ಮುಸಲ್ಮಾನ ವಿದ್ಯಾರ್ಥಿನಿಯರು ಇನ್ನೂ ಕೂಡ ಹಿಜಾಬ್ ಧರಿಸಿ ಅಲ್ಲಿನ ಶಾಲೆಗಳಿಗೆ ಬರುತ್ತಿದ್ದಾರೆ. ಹಿಜಾಬ್.ಅನ್ನು ವಿರೋಧಿಸುವವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಹಿಜಾಬ್ ವಿಚಾರವನ್ನು ಮುಂದಿಟ್ಟು ಭಾರತವನ್ನು ‘ಇಸ್ಲಾಮಿಕ್ ರಾಷ್ಟ್ರ’ ಮಾಡುವ ಅಂತಾರಾಷ್ಟ್ರೀಯ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಹೇಳಿದರು.