ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ! – ಶ್ವೇತಾ ತಿವಾರಿ ಅವರ ಹೇಳಿಕೆ

ಭೋಪಾಲ (ಮಧ್ಯಪ್ರದೇಶ) – ‘ನನ್ನ ಒಳಉಡುಪಿನ ಅಳತೆಯನ್ನು ದೇವರೇ ತೆಗೆದುಕೊಳ್ಳುತ್ತಾನೆ’, ಎಂದು ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ವಿರುದ್ಧ ಅಪರಾಧವು ದಾಖಲಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.
#ShwetaTiwari issues apology for her ‘bra size’ remark: My statement has been misconstruedhttps://t.co/bZY2fVmbWs
— India TV (@indiatvnews) January 29, 2022
ಶ್ವೇತಾ ತಿವಾರಿ ಇವರು, ಸಹೋದ್ಯೋಗಿಯೊಂದಿಗಿನ ಪಾತ್ರದ ಬಗ್ಗೆ ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಪ್ಪಾಗಿ ನಿರೂಪಿಸಲಾಗಿದೆ, ಎಂದು ನನಗೆ ಗಮನಕ್ಕೆ ಬಂದಿದೆ. ಈ ಹೇಳಿಕೆಯ ಸಂದರ್ಭವನ್ನು ಅರ್ಥಮಾಡಿಕೊಂಡರೆ, ಈ ಹೇಳಿಕೆಯಲ್ಲಿ ದೇವರ ಪಾತ್ರವನ್ನು ನಿರ್ವಹಿಸುವ ಸೌರಭ್ ರಾಜ್ ಜೈನ್‌ಗೆ ‘ದೇವರು’ ಎಂಬ ಪದವನ್ನು ಬಳಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸರಣಿಯಲ್ಲಿ ಅವನ ಹೆಸರು ’ದೇವ’ ಆಗಿದ್ದರಿಂದ ನಾನು ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದೆ. ಜನರು ನಟರ ಪಾತ್ರಗಳ ಹೆಸರುಗಳೊಂದಿಗೆ ಜೋಡಿಸಲ್ಪಡುತ್ತಾರೆ; ಹಾಗಾಗಿ ನಾನು ಮಾಧ್ಯಮದೊಂದಿಗಿನ ಸಂವಾದದಲ್ಲಿ ಆ ಉದಾಹರಣೆಯನ್ನು ನೀಡಿದ್ದೇನೆ; ಆದರೆ ಅವರು ತಪ್ಪಾಗಿ ಅರ್ಥೈಸಿಕೊಂಡರು. ಅದರ ಬಗ್ಗೆ ನನಗೆ ಬೇಸರವಿದೆ. ನನಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಆದ್ದರಿಂದ ನಾನು ಯಾರನ್ನೂ ತಿಳಿದೋ ಅಥವಾ ತಿಳಿಯದೆಯೋ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿರಲಿಲ್ಲ; ಆದರೆ ಅರಿವಿಲ್ಲದೆ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನನಗೆ ತಿಳಿದಿದೆ. ನನ್ನ ಮಾತುಗಳು ಅಥವಾ ಕೃತಿಗಳಿಂದ ಯಾರನ್ನೂ ನೋಯಿಸುವುದು ನನ್ನ ಉದ್ದೇಶವಿರಲಿಲ್ಲ, ಆದ್ದರಿಂದ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ