‘ವಂದೇ ಮಾತರಂ’ ಎನ್ನುವುದು ಎಂದರೆ ಭಾರತಮಾತೆಗೆ ನಮನ ! – ಪ.ಪೂ. ಸ್ವಾಮಿ ಗೋವಿಂದದೇವಗಿರಿ ಮಹಾರಾಜ, `ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿ’ನ ಕೋಶಾಧಿಕಾರಿ

ಪ.ಪೂ.ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ

ಪುಣೆ – ದೇಶ ಎಂದರೆ ಕೇವಲ ಭೂಮಿಯ ತುಂಡಲ್ಲ. ದೇಶಕ್ಕೆ ಮಾತೆಯ ಸ್ಥಾನ ಇದ್ದು `ವಂದೇ ಮಾತರಂ’ ಎಂದರೆ ಆಕೆಗೆ ನಮನ ಎಂದಾಗಿದೆ. `ವಂದೇ ಮಾತರಂ’ ಈ ಕಾವ್ಯದಲ್ಲಿ ಭವಿಷ್ಯ ರೂಪಿಸುವ ತೇಜವಿದೆ. ಕೇಂದ್ರದಲ್ಲಿ ಕಮ್ಯುನಿಸ್ಟರು ಇದ್ದರು; ಅದಕ್ಕಾಗಿ ರಾಮಸೇತುವೆಯನ್ನು ಯಾರು ಕಟ್ಟಲಿಲ್ಲ, ಎಂದು ಬಿಂಬಿಸಲಾಗುತ್ತಿತ್ತು, ಹೀಗೆಂದು `ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿ’ನ ಕೋಶಾಧಿಕಾರಿ ಪ.ಪೂ.ಸ್ವಾಮಿ ಗೋವಿಂದದೇವಗಿರಿ ಮಹಾರಾಜ (ಕಿಶೋರ ವ್ಯಾಸ) ಇವರು ಹೇಳಿದರು. ವಿವೇಕ ಸಮೂಹದ ವತಿಯಿಂದ ಭಾರತೀಯ ಸ್ವಾತಂತ್ರ್ಯದ ಅಮೃತಮಹೋತ್ಸವ ಪ್ರಯುಕ್ತ ಮಿಲಿಂದ ಮತ್ತು ಶಿಲ್ಪಾ ಸಬನಿಸ ಬರೆದಿರುವ ‘ಸಮಗ್ರ ವಂದೇಮಾತರಂ’ ಈ ಹಿಂದಿಯಲ್ಲಿ ಅನುವಾದಗೊಂಡ ಪುಸ್ತಕವನ್ನು ಪ.ಪೂ.ಸ್ವಾಮಿ ಗೋವಿಂದ ದೇವಗಿರಿ ಮಹಾರಾಜ ಇವರ ಹಸ್ತದಿಂದ ಪುಣೆಯಲ್ಲಿ ಪ್ರಕಾಶನಗೊಳಿಸಲಾಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು, `ಕಳೆದ 70 ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ದೇಶ ಈಗ ಜಗತ್ತಿಗೆ ಲಸಿಕೆ ನೀಡುತ್ತಿದೆ. 70 ವರ್ಷಗಳಿಂದ ಚಡಪಡಿಸಿರುವ ಭಾರತಮಾತೆಯ ಮುಖದಲ್ಲಿ 2014 ರಿಂದ ಹಾಸ್ಯ ಚಿಮ್ಮುತ್ತಿದೆ’, ಎಂದು ಅವರು ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ದೇಶದಲ್ಲಿ ಚುನಾವಣೆ ಈರುಳ್ಳಿ, ಆಲೂಗಡ್ಡೆ, ಪೆಟ್ರೋಲ್, ಡಿಸಲ್ ಇದರ ಬೆಲೆ ಹೆಚ್ಚಳದಿಂದ ನಡೆಯುತ್ತವೆ. ಬೆಲೆ ಹೆಚ್ಚಳದ ಬಗ್ಗೆ ಕೂಗಾಡುವ ಜನರಿಗೆ ನಾಚಿಕೆಯಾಗಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಗತಿ ಆಗುತ್ತಿರುವಾಗ ಜನರು `ಬೆಲೆ ಏರಿಕೆ’ ಸಹಿಸಿಕೊಳ್ಳಬೇಕು” ಎಂದು ಹೇಳಿದರು.