ಮುಂಬೈಯಲ್ಲಿನ ‘ರೇವ್ ಪಾರ್ಟಿ’ಯ ಪ್ರಕರಣದಲ್ಲಿ ನಟ ಶಾರುಖ ಖಾನರ ಮಗನ ಬಂಧನ !

ಮಾದಕ ದ್ರವ್ಯಗಳ ವ್ಯವಸ್ಥೆಯ ಸಂಪೂರ್ಣ ಜಾಲವನ್ನು ಬೇರುಸಹಿತ ಕಿತ್ತೊಗೆಯುವ ತನಕ ಇಂತಹ ಘಟನೆಗಳು ನಿಲ್ಲುವುದಿಲ್ಲ !

ಹಡಗಿನಿಂದ ದೊಡ್ಡ ಪ್ರಮಾಣದಲ್ಲಿನ ಮಾದಕದ್ರವ್ಯ ವಶಕ್ಕೆ !

ಮುಂಬೈ – ಮಾದಕದ್ರವ್ಯ ನಿಯಂತ್ರಣ ದಳವು ಅಕ್ಟೋಬರ್ 2 ರ ರಾತ್ರಿ ಮುಂಬೈ ಹತ್ತಿರದ ಸಮುದ್ರದಲ್ಲಿರುವ ‘ಕಾರ್ಡಿಲಿಯಾ ಕ್ರೂಜ್’ ಹಡಗಿನಲ್ಲಿ ನಡೆಯುತ್ತಿದ್ದ ಒಂದು ರೇವ್ ಪಾರ್ಟಿಯ ಮೇಲೆ (ಮಾದಕದ್ರವ್ಯ ಮತ್ತು ಮದ್ಯದ ನಶೆಗಾಗಿ ಆಯೋಜಿಸಲಾದ ಪಾರ್ಟಿ) ದಾಳಿ ನಡೆಸಿತು. ಕಾರ್ಯಾಚರಣೆಯಲ್ಲಿ 10 ಜನರನ್ನು ಬಂಧಿಸಲಾಗಿದೆ, ಇವರಲ್ಲಿ ನಟ ಶಾರುಖ ಖಾನರ ಮಗ ಆರ್ಯನ ಖಾನ ಕೂಡ ಇದ್ದಾರೆ. ಇವರಲ್ಲಿ ಕೆಲವು ಹೆಸರಾಂತ ಉದ್ಯೋಗಪತಿಗಳ ಪುತ್ರಿಯರೂ ಇದ್ದಾರೆ. ಇವರೆಲ್ಲರ ವಿಚಾರಣೆ ನಡೆದಿದೆ ಎಂದು ಮಾದಕದ್ರವ್ಯ ನಿಯಂತ್ರಣ ದಳದ ಸಂಚಾಲಕರಾದ ಸಮೀರ ವಾನಖೇಡೆ ಇವರು ಹೇಳಿದ್ದಾರೆ. ಹಡಗಿನಿಂದ ದೊಡ್ಡಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಬಂಧಿಸಲಾದವರನ್ನು ಅಕ್ಟೋಬರ್ 3 ರಂದು ತಡ ರಾತ್ರಿಯಲ್ಲಿ ಮುಂಬೈಯಲ್ಲಿನ ಕಿಲ್ಲಾ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ತಿಳಿದುಬಂದಿದೆ. ಈ ಹಡಗು ಮುಂಬೈನಿಂದ ಗೋವಾಗೆ ಹೊರಟ ನಂತರ ಸಮುದ್ರದ ಮಧ್ಯಭಾಗಕ್ಕೆ ತಲುಪುತ್ತಲೆ ರೇವ್ ಪಾರ್ಟಿ ಆರಂಭವಾಯಿತು. ಇದರ ಮಾಹಿತಿ ದೊರೆಯುತ್ತಲೆ ಮಾದಕದ್ರವ್ಯ ನಿಯಂತ್ರಣ ದಳವು ಕಾರ್ಯಾಚರಣೆಯನ್ನು ಆರಂಭಿಸಿತು.

ಇದರಲ್ಲಿ ಮಾದಕದ್ರವ್ಯಗಳನ್ನು ಸಾಗಾಟ ಮಾಡುವ ಹರಿಯಾಣ ಮತ್ತು ದೆಹಲಿಯಲ್ಲಿನ ಇಬ್ಬರ ಸಹಿತ ಪಾರ್ಟಿಗಾಗಿ ದೆಹಲಿಯಿಂದ ಬಂದಿರುವ ಮೂವರು ಹುಡುಗಿಯರನ್ನೂ ಬಂಧಿಸಲಾಗಿದೆ. ಈ ಪಾರ್ಟಿಯಲ್ಲಿ ಪ್ರವೇಶ ಪಡೆಯಲು ಪ್ರತಿಯೊಬ್ಬರು 80000 ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ನೀಡಿದ್ದರು.

ಪಾರ್ಟಿಯನ್ನು ಆಯೋಜಿಸಿದ 6 ಜನರ ವಿಚಾರಣೆ ನಡೆಯಲಿದೆ. ಆರ್ಯನ ಖಾನರೊಂದಿಗೆ ಇತರ ಎಲ್ಲರ ಮೊಬೈಲಗಳನ್ನು ಜಪ್ತು ಮಾಡಲಾಗಿದ್ದು ಅವುಗಳ ತಪಾಸಣೆ ಮಾಡಲಾಗುತ್ತಿದೆ.

ಮಾದಕದ್ರವ್ಯ ನಿಯಂತ್ರಣ ದಳದಿಂದ 8 ಜನರ ವಿಚಾರಣೆ !

ಮೇಲಿನ ಪ್ರಕರಣದಲ್ಲಿ ಸಮೀರ ವಾನಖೇಡೆಯವರು ನೀಡಿದ ಮಾಹಿತಿಗನುಸಾರ ನಟ ಶಾರುಖ ಖಾನರ ಮಗ ಆರ್ಯನ ಖಾನ, ಅರಬಾಜ ಮರ್ಚಂಟ, ಮುನಮೂನ ಧಮೇಚ, ನೂಪುರ ಸಾರಿಕಾ, ಇಸ್ಮಿತ ಸಿಂಹ, ಮೋಹಕ ಜಸ್ವಾಲ, ವಿಕ್ರಂ ಚೋಕೆರ, ಗೋಮಿತ ಚೋಪ್ರಾ ಇವರ ವಿಚಾರಣೆ ನಡೆಯುತ್ತಿದೆ. ಅರಬಾಜ ಮರ್ಚಂಟ ಇವನು ಆರ್ಯನ ಖಾನನ ಆಪ್ತಮಿತ್ರನಾಗಿದ್ದಾನೆ.

ಅಧಿಕಾರಿಗಳು ಆರ್ಯನ ಖಾನನ ಕ್ರೂಜನಲ್ಲಿನ ವಿಡಿಯೋಗಳನ್ನು ಪಡೆದಿದ್ದಾರೆ. ಎಫಟಿವಿ ಇಂಡಿಯಾದ ವ್ಯವಸ್ಥಾಪಕೀಯ ಸಂಚಾಲಕ ಕಶೀಫ ಖಾನದರನ್ನೂ ಸಂಪರ್ಕಿಸಲಾಗಿದೆ. ಈ ಪಾರ್ಟಿಯನ್ನು ಆಯೋಜಿಸುವಲ್ಲಿ ಅವರ ಸಹಭಾಗವಿರುವುದರ ಮಾಹಿತಿಯು ದೊರೆತಿದೆ.