ಸರಸಂಘಚಾಲಕ ಮೋಹನ ಭಾಗವತ ಇವರ ಹಸ್ತದಿಂದಾಗಲಿದೆ, ಉದಯ ಮಹೂರಕರ ಲಿಖಿತ ‘ವೀರ ಸಾವರಕರ – ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ’ ಪುಸ್ತಕ ಪ್ರಕಾಶನ !

ಕೇಂದ್ರ ಮಾಹಿತಿ ಆಯೋಗದ ಆಯುಕ್ತರಾಗಿರುವ ಪುಸ್ತಕದ ಲೇಖಕ ಉದಯ ಮಹೂರಕರರು ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕರಾಗಿದ್ದಾರೆ !

ಮುಂಬಯಿ : ಸ್ವಾತಂತ್ರ್ಯವೀರ ಸಾವರಕರರು ಭವಿಷ್ಯದ ಘಟನೆಗಳನ್ನು ನಿಖರವಾಗಿ ಊಹಿಸುವ ದೂರದೃಷ್ಟಿಯ ನಾಯಕರಾಗಿದ್ದರು. ಇದರ ಬಗ್ಗೆ ಆಗಿನ ಕಾಗದಪತ್ರಗಳ ಸಾಕ್ಷಿ ಸಹಿತ ಸವಿಸ್ತಾರವಾದ ಮಾಹಿತಿಯನ್ನು ನೀಡುವ ಪುಸ್ತಕವನ್ನು ಕೇಂದ್ರ ಸರಕಾರದ ಮಾಹಿತಿ ಆಯುಕ್ತ, ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಉದಯ ಮಹೂರಕರ ಇವರು ಚಿರಾಯು ಪಂಡಿತ ಇವರ ಸಹಕಾರದೊಂದಿಗೆ ಬರೆದಿದ್ದಾರೆ. ‘ರೂಪಾ ಪಬ್ಲಿಕೇಶನ್’ ಮೂಲಕ ಪ್ರಕಾಶಿಸಲಾದ ‘ವೀರ ಸಾವರಕರ – ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ'(ಸ್ವಾತಂತ್ರ್ಯ ವೀರ ಸಾವರಕರ – ಭಾರತದ ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿತ್ವ) ಎಂಬುದು ಈ ಪುಸ್ತಕದ ಹೆಸರಾಗಿದೆ. ಇದನ್ನು ಅಕ್ಟೋಬರ್ 12 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೊಹನ ಭಾಗವತ ಇವರ ಹಸ್ತದಿಂದ ದೆಹಲಿಯಲ್ಲಿ ಪ್ರಕಾಶನವಾಗಲಿದೆ. ಸ್ವಾತಂತ್ರ್ಯ ವೀರ ಸಾವರಕರ ಇವರು ಭಾರತದ ವಿಭಜನೆಯನ್ನು ತಡೆಯಲು ಕೊನೆಯವರೆಗೂ ಮಾಡಿದ ಪ್ರಯತ್ನಗಳನ್ನು ಆಗಿನ ಕಾಗದಪತ್ರಗಳ ಸಹಿತ ಸಾಕ್ಷಿಗಳನ್ನು ನೀಡಿ ಈ ಪುಸ್ತಕವು ವಿಶ್ಲೇಷಿಸುತ್ತದೆ. ಸ್ವಾತಂತ್ರ್ಯವೀರ ಸಾವರಕರರು 8 ವರ್ಷಗಳ ಮೊದಲೇ ಚೀನಾದೊಂದಿಗಿನ ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದರು. ವಿಭಜನೆಯ ನಂತರ ಭಾರತವನ್ನು ಪರಮಾಣು ಬಾಂಬುಗಳಿಂದ ಸಜ್ಜುಗೊಳಿಸುವಂತೆ ನೆಹರುರವರಿಗೆ ಸಾವರಕರರು ಇವರು ಸಲಹೆ ನೀಡಿದ್ದರು; ಆದರೆ ಅಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಭಾರತವು ಪ್ರಗತಿ ಸಾಧಿಸಲು 25 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಅಲ್ಲಿಯವರೆಗೆ, ಚೀನಾ ಭಾರತವನ್ನು ಹಿಂದೆ ತಳ್ಳುತ್ತಾ ಕೊನೆಗೆ ಹಿಂದಿಕ್ಕಿತು ಎಂಬಂತಹ ಅನೇಕ ಸಂದರ್ಭಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.