ಕ್ರೈಸ್ತ ಯುವತಿಯರನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸಲು ಮೌಲ್ವಿಯಿಂದ ಮಾಟದ ಬಳಕೆ !

ಕೇರಳದ ಚರ್ಚನಿಂದ ಲವ್ ಜಿಹಾದ್ ನ ವಿಷಯದಲ್ಲಿ ಜಾಗೃತಿ ಮೂಡಿಸಲು ಪ್ರಕಾಶಿಸಲಾದ ಪುಸ್ತಕದಲ್ಲಿನ ಮಾಹಿತಿ

ಮತಾಂಧರು ಮುಸಲ್ಮಾನೇತರರನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಲು ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದುದರಿಂದ ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದ್ದು ಇದರ ವಿರುದ್ಧ ಹಿಂದೂಗಳ ಸಹಿತ ಸಿಕ್ಖ್ ಕ್ರೈಸ್ತ, ಜೈನ ಹೀಗೆ ಎಲ್ಲಾ ಪಂಥಗಳಲ್ಲಿನ ಜನರು ಸಂಘಟಿತರಾಗಿ ‘ಲವ್ ಜಿಹಾದ್’ನ ವಿರುದ್ಧ ರಾಷ್ಟ್ರೀಯ ಕಾನೂನು ಆಗಬೇಕೆಂದು ಕೇಂದ್ರ ಸರಕಾರದ ಬಳಿ ಮನವಿ ಮಾಡಬೇಕಿದೆ ! – ಸಂಪಾದಕರು 

ತಿರುವನಂತಪುರಂ (ಕೇರಳ) – ಇಲ್ಲಿನ ಕಲ್ಲಿಕೋಟೆ(ಕೋಝಿಕೊಡ್) ಜಿಲ್ಲೆಯಲ್ಲಿರುವ ಥಮಾರಸೆರಿ ನಗರದಲ್ಲಿನ ಚರ್ಚ್ ನ ಕಟೆಸಿಸ್ ವಿಭಾಗವು ‘ಲವ್ ಜಿಹಾದ್’ನ ವಿಷಯದಲ್ಲಿ ಜಾಗೃತಿ ಮೂಡಿಸಲು ಒಂದು ಪುಸ್ತಕವನ್ನು ಪ್ರಕಾಶಿಸಿದೆ. ಇದರಲ್ಲಿ ಮೌಲ್ವಿಗಳು ಕ್ರೈಸ್ತ ಯುವತಿಯರನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸಲು ಮಾಟವನ್ನೂ ಉಪಯೋಗಿಸುತ್ತಾರೆ ಎಂದು ಹೇಳಲಾಗಿದೆ.

ಈ ಪುಸ್ತಕದಲ್ಲಿ ಲವ್ ಜಿಹಾದ್ ನ ಎಲ್ಲಾ 9 ಹಂತಗಳ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ ಮತಾಂಧರು ತರುಣಿಯರನ್ನು ಸಿಲುಕಿಸಲು ಅವರ ಲೇಖನಿ,(ಪೆನ್) ರುಮಾಲು, ಕೂದಲು ಇತ್ಯಾದಿ ವಸ್ತುಗಳನ್ನು ಬಳಸುತ್ತಾರೆ ಎಂದು ಹೇಳಲಾಗಿದೆ.

ಲವ್ ಜಿಹಾದ್ ನ ವಿಷಯದಲ್ಲಿ ಚರ್ಚ್  ನಿಂದಾಗುತ್ತಿರುವ ಜಾಗೃತಿಗೆ ಮತಾಂಧರಿಂದ ತೀವ್ರ ವಿರೋಧ!

ವಿವಿಧ ರೀತಿಯ ಜಿಹಾದ್ ಗಳ ಬಗ್ಗೆ ಚರ್ಚ್ ನಿಂದ ಸತತವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಆದುದರಿಂದ ಚರ್ಚಗಳು ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತಿದೆ. ಈ ಪುಸ್ತಕಕ್ಕೆ ಮತಾಂಧರಿಂದ ವಿರೋಧ ವ್ಯಕ್ತವಾದ ನಂತರ ಥಮಾರಸೆರಿ ಭಾಗದಲ್ಲಿರುವ ಚರ್ಚನ ಧಾರ್ಮಿಕ ಶಿಕ್ಷಣ ನೀಡುವ ವಿಭಾಗದ ಸಂಚಾಲಕ ಫಾದರ್ ಜಾನ್ ಪಲ್ಲಿಕ್ಕವಯಾಲ ಇವರು ಸ್ಪಷ್ಟೀಕರಣ ನೀಡುತ್ತಾ ‘ಈ ಪುಸ್ತಕವನ್ನು ಕ್ರೈಸ್ತ ತರುಣರು ಕ್ರೈಸ್ತಧರ್ಮದಲ್ಲಿಯೇ ಇರಬೇಕು, ಹಾಗೆಯೇ ಕ್ರೈಸ್ತ ತರುಣಿಯರ ರಕ್ಷಣೆಯಾಗಬೇಕು ಎಂಬ ಉದ್ದೇಶದಿಂದ ಪ್ರಕಾಶಿಸಲ್ಪಟ್ಟಿದೆ. ಈ ಪುಸ್ತಕದಿಂದ ಯಾರಿಗಾದರೂ ತಪ್ಪು ತಿಳುವಳಿಕೆಯಾಗಿದ್ದಲ್ಲಿ ಅಥವಾ ಅವರ ಭಾವನೆಗಳಿಗೆ ನೋವಾಗಿದ್ದಲ್ಲಿ ನಾವು ಈ ಬಗ್ಗೆ ವಿಷಾದಿಸುತ್ತೇವೆ’ ಎಂದು ಹೇಳಿದರು. ಈ ಪುಸ್ತಕವನ್ನು ತಕ್ಷಣ ಜಪ್ತು ಮಾಡಬೇಕು ಎಂದು ಮತಾಂಧರ ‘ಸಮಸ್ತ ಅಧಿಕಾರ ಸಂರಕ್ಷಕ ಸಮಿತಿ’ ಯ ಅಧ್ಯಕ್ಷರಾದ ಅಬ್ದುಲ್ ಕಾಸರ್ ಇವರು ಮನವಿ ಮಾಡಿದ್ದಾರೆ.  ಅವರು ಲವ್ ಜಿಹಾದ್ ಅನ್ನು ಸಮರ್ಥಿಸುತ್ತ ‘ಇಸ್ಲಾಂನಲ್ಲಿ ಇತರ ಸಮುದಾಯಗಳ ಮಹಿಳೆಯರ ಲೈಂಗಿಕ ಶೋಷಣೆಗೆ ಮಾನ್ಯತೆ ನೀಡಲಾಗಿದೆ. ಹೀಗೆ ಮಾಡುವುದರಿಂದ ಅವರಿಗೆ ‘ ಜನ್ನತ’ (ಸ್ವರ್ಗ) ಸಿಗುತ್ತದೆ’ ಎಂದು ಹೇಳಿದ್ದಾರೆ. (ಇಂತಹ ಹೇಳಿಕೆಗಳಿಂದ ಲವ್ ಜಿಹಾದ್ ಅಸ್ತಿತ್ವದಲ್ಲಿದೆ ಎಂಬುದನ್ನು ಸ್ವತಹ ಮತಾಂಧರೇ ಒಪ್ಪಿಕೊಂಡಿದ್ದಾರೆ. ಆದುದರಿಂದ ಯಾವಾಗಲೂ ಕ್ರೈಸ್ತರ ಬೆನ್ನುತಟ್ಟುವ ಜಾತ್ಯಾತೀತವಾದಿಗಳು ಈಗ ಮತಾಂಧರ ಇಂತಹ ಬಹಿರಂಗ ಷಡ್ಯಂತ್ರಗಳ ವಿರುದ್ಧ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)

ಲವ್ ಜಿಹಾದ್ ನ ವಿರುದ್ಧ ಕ್ರೈಸ್ತಧರ್ಮ ಗುರುಗಳಲ್ಲಿ ತೀವ್ರ ಅಸಂತೋಷ!

1. ಫಾದರ್ ಜಾನ್ ಪಲ್ಲಿಕ್ಕವಯಾಲ ಇವರು ಮುಂದಿನಂತೆ ಹೇಳಿದ್ದಾರೆ ‘ತಮ್ಮ ವಿಭಾಗದಲ್ಲಿನ 160 ಮಹಿಳೆಯರನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸಲಾಗಿತ್ತು. ಲವ್ ಜಿಹಾದ್ ನ ದೂರು ನೀಡಿದ ನಂತರ ಆದಂತಹ ವಿಚಾರಣೆಯಲ್ಲಿ ನೂರಕ್ಕಿಂತ ಹೆಚ್ಚು ಮಹಿಳೆಯರನ್ನು ‘ಲೈಂಗಿಕ ಭಯೋತ್ಪಾದನೆ’ಯ ಮಾಧ್ಯಮದಿಂದ ಮೋಸಗೊಳಿಸಿದ್ದು ಬಹಿರಂಗವಾಗಿದೆ.’

2. ಸಾಯರೊ ಮಲಬಾರ ಚರ್ಚ್ ನ ಬಿಷಪ್ ಮಾರ ಜೋಸೆಫ್ ಕಲ್ಲಾರನಗಟ್ಟ ರವರು ಇತ್ತೀಚೆಗೆ ಕೇರಳದ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಕೇವಲ ‘ಲವ್ ಜಿಹಾದ್’ ಮಾತ್ರವಲ್ಲ, ‘ನಾರ್ಕೋಟಿಕ್ ಜಿಹಾದ್’ ಗಾಗಿಯೂ ಗುರಿಯಾಗಿಸಲಾಗುತ್ತಿದೆ, ಎಂದು ಹೇಳಿದ್ದರು. ‘ನಾರ್ಕೋಟಿಕ್ ಜಿಹಾದ್’ ಅಂದರೆ ಅಮಲು ಪದಾರ್ಥಗಳ ವ್ಯಸನವನ್ನು ತಗುಲಿಸಿ ತರುಣಿಯರ ಜೀವನವನ್ನು ಧ್ವಂಸಗೊಳಿಸುವುದಾಗಿದೆ.

3. ಲವ್ ಜಿಹಾದ್ ನ ಬಗ್ಗೆ ದುರ್ಲಕ್ಷ್ಯ ಮಾಡಿದ್ದರಿಂದ, ಹಾಗೆಯೇ ಕಾಣೆಯಾದ ಮಹಿಳೆಯರು ಮತ್ತು ಯುವತಿಯರ ಪ್ರಕರಣಗಳ ಬಗ್ಗೆ ಯೋಗ್ಯ ತಪಾಸಣೆ ಮಾಡದಿರುವುದರಿಂದ ಕೇರಳದ ‘ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್’ ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಟೀಕಿಸಿತ್ತು.

4. ಸಾಯರೊ ಮಲಬಾರ್ ಚರ್ಚ್ ನ ಮಾಧ್ಯಮ ಆಯೋಗವು ಕಳೆದ ವರ್ಷ ಒಂದು ಕರಪತ್ರವನ್ನು ಪ್ರಕಾಶಿಸಿತ್ತು. ಅದರಲ್ಲಿ ಕೇರಳದ ಇಸ್ಲಾಮಿಕ್ ಸ್ಟೇಟನಲ್ಲಿ ಸಹಭಾಗಿಯಾದ 21 ಮಹಿಳೆಯರಲ್ಲಿ ಹತ್ತಕ್ಕೂ ಹೆಚ್ಚಿನ ಮಹಿಳೆಯರು ಕ್ರೈಸ್ತ ಸಮಾಜದವರಾಗಿದ್ದಾರೆ ಎಂದು ಹೇಳಲಾಗಿದೆ.