ಸಂವಿಧಾನದ ೨೬ ನೇ ಕಲಮ್‌ಗನುಸಾರ, ದೇವಾಲಯಕ್ಕೆ ಯಾರಿಗೆ ಪ್ರವೇಶ ನೀಡಬೇಕು ಎಂದು ನಿರ್ಧರಿಸುವ ಹಕ್ಕು ದೇವಾಲಯ ಆಡಳಿತಕ್ಕೆ ಇದೆ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಜೈನ್

‘ಹಿಂದೂಯೇತರರು ಮತ್ತು ಶ್ರದ್ಧೆ ಇಲ್ಲದವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಿ’ ಈ ಕುರಿತು ಆನ್‌ಲೈನ್ ‘ವಿಶೇಷ ಪರಿಸಂವಾದ’ ಸಂಪನ್ನ !

ನ್ಯಾಯವಾದಿ ವಿಷ್ಣು ಶಂಕರ್ ಜೈನ್

ಉತ್ತರ ಪ್ರದೇಶದ ಗಾಝೀಯಾಬಾದ್‌ನ ಡಾಸ್ನಾ ದೇವಿ ದೇವಸ್ಥಾನದ ಹೊರಗೆ ‘ಮುಸಲ್ಮಾನರಿಗೆ ದೇವಾಲಯಕ್ಕೆ ಪ್ರವೇಶ ನಿಷಿದ್ಧ’ ಎಂಬ ಫಲಕವನ್ನು ಹಾಕಿರುವುದನ್ನು ದೇಶಾದ್ಯಂತದ ಮುಸಲ್ಮಾನರು, ತಥಾಕಥಿತ ಪ್ರಗತಿಪರರು ಮತ್ತು ಕೆಲವು ಮಾಧ್ಯಮಗಳು ವಿರೋಧಿಸಿದವು. ಆದರೆ ಭಾರತೀಯ ಸಂವಿಧಾನದ ‘ಕಲಮ್ ೨೬ (ಬಿ) ಮತ್ತು (ಡಿ)’ ಅಡಿಯಲ್ಲಿ ‘ದೇವಾಲಯದೊಳಗೆ ಯಾರಿಗೆ ಪ್ರವೇಶ ನೀಡಬೇಕು ಅಥವಾ ‘ಯಾರಿಗೆ ಪ್ರವೇಶಿಸಲು ಅನುಮತಿಸಬಾರದು’ ಎಂದು ನಿರ್ಧರಿಸುವ ಹಕ್ಕು ದೇವಾಲಯದ ಆಡಳಿತಕ್ಕೆ ಇದೆ. ಆದ್ದರಿಂದ, ಹಿಂದೂಯೇತರ ಅಥವಾ ಶ್ರದ್ಧೆಯಿಲ್ಲದ ವ್ಯಕ್ತಿಯು ದೇವಸ್ಥಾನಕ್ಕೆ ಪ್ರವೇಶಿಸಿ ದೇವಾಲಯದ ನಿಯಮಗಳನ್ನು ಉಲ್ಲಂಘಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ, ಭಾ.ದಂ.ಸಂ.ಯ ಕಲಮ್ ೨೯೫ (ಎ) ಪ್ರಕಾರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರ ವಿಷ್ಣು ಶಂಕರ್ ಜೈನ್ ಪ್ರಸ್ತುತಪಡಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಹಿಂದೂಯೇತರರು ಮತ್ತು ಶ್ರದ್ಧೆ ಇಲ್ಲದವರು ದೇವಾಲಯಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿ’ ಎಂಬ ಆನ್‌ಲೈನ್ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ ಮೂಲಕ ೧೬,೭೬೧ ಜನರು ವೀಕ್ಷಿಸಿದ್ದಾರೆ. ಈ ಬಾರಿ ಟ್ವಿಟರ್‌ನಲ್ಲಿ, #TemplesOnlyForHindus ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾವಿರಾರು ಹಿಂದೂಗಳು ಇದನ್ನು ಬೆಂಬಲಿಸಿದ್ದಾರೆ. ಈ ಹ್ಯಾಶ್‌ಟ್ಯಾಗ್ ಮೊದಲ ಕ್ರಮಾಂಕದಲ್ಲಿತ್ತು.

ಈ ವೇಳೆ ಡಾಸನಾ ದೇವಿ ದೇವಸ್ಥಾನದ ಮಹಂತರಾದ ಯತಿ ಮಾಂ ಚೇತನಾನಂದ ಸರಸ್ವತಿಯವರು ಮಾತನಾಡುತ್ತಾ, ಡಾಸನಾ ಶಿವಶಕ್ತಿಧಾಮದಲ್ಲಿರುವ ದೇವಾಲಯದಿಂದ ನೀರು ಕುಡಿದಿದ್ದಕ್ಕಾಗಿ ಸಾಮ್ಯವಾದಿಗಳು ಆಸಿಫ್ ಎಂಬ ಯುವಕನನ್ನು ಹಿಂದೂಗಳು ಹೊಡೆದಿದ್ದಾರೆ ಎಂಬ ಸುಳ್ಳು ಚಿತ್ರಣವನ್ನು ಚಿತ್ರಿಸಿದ್ದಾರೆ. ವಾಸ್ತವದಲ್ಲಿ ಮತಾಂಧ ಆಸಿಫ್‌ನು ದೇವಾಲಯದ ಆವರಣಕ್ಕೆ ಪ್ರವೇಶಿಸಿ ಶಿವಲಿಂಗದ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬಂದಿತ್ತು. ಈ ದೇವಾಲಯವು ಮುಸ್ಲಿಂ ಬಹುಸಂಖ್ಯಾತ ಪ್ರಾಂತ್ಯದಲ್ಲಿದೆ ಮತ್ತು ಕಳ್ಳತನ, ದೇವತೆಗಳ ವಿಗ್ರಹಗಳ ವಿಧ್ವಂಸ, ದೇವಸ್ಥಾನಕ್ಕೆ ಬರುವ ಹಿಂದೂಯುವತಿಯರಿಗೆ ಕಿರುಕುಳ ನೀಡುವಂತಹ ಘಟನೆಗಳು ಸಾಮಾನ್ಯವಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಹಿಂದೂಗಳ ರಕ್ಷಣೆಗಾಗಿ, ಹಿಂದೂಯೇತರರು ದೇವಾಲಯಕ್ಕೆ ಪ್ರವೇಶವನ್ನು ನಿಷೇಧಿಸುವ ಫಲಕವನ್ನು ಹಾಕಬೇಕಾಯಿತು. ಈ ಸಮಯದಲ್ಲಿ, ‘ಸುದರ್ಶನ ಟಿವಿ’ಯ ವ್ಯವಸ್ಥಾಪಕ ಸಂಚಾಲಕರಾದ ಶ್ರೀ. ಸುರೇಶ ಚವ್ಹಾಣಕೆ ಇವರು ಮಾತನಾಡುತ್ತಾ, ಹಿಂದೂಯೇತರರಿಗೆ ಪ್ರವೇಶವಿಲ್ಲ ಎಂದು ಹೇಳುವ ಫಲಕಗಳನ್ನು ಡಾಸನಾ ದೇವಿ ದೇವಸ್ಥಾನದಲ್ಲಿ ಮಾತ್ರವಲ್ಲ, ಭಾರತದ ೧೨ ಜ್ಯೋತಿರ್ಲಿಂಗಗಳ ಪ್ರವೇಶದ್ವಾರಗಳಲ್ಲಿಯೂ, ನೇಪಾಳದಲ್ಲಿಯೂ ಹಾಕಲಾಗಿದೆ. ಅಂತಹ ಫಲಕಗಳನ್ನು ನಿರ್ಮಿಸಲು ಆರ್ಥಿಕವಾಗಿ ಅಸಮರ್ಥವಾಗಿರುವ ಭಾರತದ ದೇವಾಲಯಗಳಿಗೆ ಸುದರ್ಶನ ಟಿವಿಯಿಂದ ಆರ್ಥಿಕ ಮತ್ತು ಕಾನೂನು ನೆರವು ನೀಡಲಾಗುವುದು ಎಂದು ಹೇಳಿದರು. ಈ ಸಮಯದಲ್ಲಿ ಶ್ರೀರಾಮ ಸೇನೆಯ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ. ಗಂಗಾಧರ ಕುಲಕರ್ಣಿ ಇವರು ಮಾತನಾಡುತ್ತಾ, ಕರ್ನಾಟಕದಲ್ಲಿ ಮತಾಂಧರು ಶ್ರೀ ಕೊರಗಜ್ಜ ದೇವಸ್ಥಾನದ ಅರ್ಪಣೆ ಪೆಟ್ಟಿಗೆಯಲ್ಲಿ ಆಕ್ಷೇಪಾರ್ಹ ವಸ್ತುಗಳನ್ನು ಎಸೆದು ಅಪವಿತ್ರಗೊಳಿಸಿದ ದುರಂತ ಘಟನೆಯೊಂದು ಬೆಳಕಿಗೆ ಬಂದಿದ್ದರೂ, ಇದು ಕೇವಲ ಒಂದೇ ಘಟನೆಯಲ್ಲ ರಾಜ್ಯದಲ್ಲಿ ಕಳೆದ ೧೦ ವರ್ಷಗಳಲ್ಲಿ ೬೦ ರಿಂದ ೭೦ ದೇವಸ್ಥಾನಗಳಲ್ಲಿ ಮೂರ್ತಿ ಕಳ್ಳ ಸಾಗಾಣಿಕೆ ಮತ್ತು ಅರ್ಪಣೆ ಪೆಟ್ಟಿಗೆಯ ಕಳ್ಳತನದ ಎಲ್ಲ ಘಟನೆಗಳ ಅಪರಾಧಗಳಲ್ಲಿ ಮತಾಂಧರೇ ಸಿಕ್ಕಿಬಿದಿದ್ದಾರೆ, ಎಂದು ಹೇಳಿದರು. ಈ ಸಮಯದಲ್ಲಿ, ಸನಾತನ ಸಂಸ್ಥೆಯ ವಕ್ತಾರ ವಕೀಲ (ಕು.) ಕೃತಿಕಾ ಖತ್ರಿ ಇವರು ಮಾತನಾಡುತ್ತಾ, ಸಾಕ್ಷಾತ್ ಭಗವಂತನಿದ್ದಾನೆಂದು ಶ್ರದ್ಧೆಯಿಟ್ಟು ದೇವಸ್ಥಾನಕ್ಕೆ ಪ್ರವೇಶಿಸುವವರಿಗೆ ಮಾತ್ರ ದೇವರ ಆಶೀರ್ವಾದ ದೊರೆಯುತ್ತದೆ. ದೇವಾಲಯದ ಪಾವಿತ್ರ್ಯವನ್ನು ಉಲ್ಲಂಘಿಸುವವರ ಪ್ರವೇಶವನ್ನು ನಿಷೇಧಿಸುವ ದೇವಾಲಯಗಳ ನಿರ್ಧಾರ ಸರಿಯಾಗಿದೆ, ಎಂದರು.