ಬಿಲಾಸಪುರ (ಛತ್ತೀಸಗಡ) ದಲ್ಲಿ ನಾಗಾ ಸಾಧುಗಳನ್ನು ಹೊಡೆದು ಲೂಟಿ ಮಾಡಿದ ಕಳ್ಳರು!

ದೂರನ್ನು ನೊಂದಾಯಿಸಿಕೊಳ್ಳಲು ಪೊಲೀಸರಿಂದ ನಕಾರ ಹಲ್ಲೆಗೊಳಗಾದ ಸಾಧುವಿನ ಆರೋಪ !

ಕಾಂಗ್ರೆಸ್ ರಾಜ್ಯದಲ್ಲಿ ಅಸುರಕ್ಷಿತ ಸಾಧುಗಳು ! ಇಂತಹ ಘಟನೆಗಳು ಮೌಲಾನಾ ಅಥವಾ ಪಾದ್ರಿಯ ವಿಷಯದಲ್ಲಿ ಯಾವತ್ತೂ ಸಂಭವಿಸುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಅಂತಹ ಸಂದರ್ಭಗಳಲ್ಲಿ, ಕಳ್ಳರು ಮತಾಂಧರೇ ಆಗಿರಬೇಕು ಎಂಬ ಸಂದೇಹವೇ ಮೂಡುತ್ತದೆ !

ಬಿಲಾಸಪುರ (ಛತ್ತೀಸಗಡ) – ಇಲ್ಲಿ ಓರ್ವ ನಾಗಾ ಸಾಧುವನ್ನು ಹೊಡೆದು ದರೋಡೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಅಪರಾಧವನ್ನು ದಾಖಲಿಸಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ವಾಸಿಸುತ್ತಿರುವ ನಾಗಾಸಾಧು ಗಂಗಾಪುರಿ ಮಹಾರಾಜ ಅವರನ್ನು ಇಲ್ಲಿನ ತೋರವಾ ಪೊಲೀಸ್ ಠಾಣೆಯ ಗಡಿಭಾಗದಲ್ಲಿ ಥಳಿಸಿ ದರೋಡೆ ಮಾಡಲಾಗಿದೆ. ಹರಿದ್ವಾರಕ್ಕೆ ಹೋಗಲು ಅವರು ಇಲ್ಲಿನ ರೈಲು ನಿಲ್ದಾಣವನ್ನು ತಲುಪಿದ್ದರು. ಆ ಸಮಯದಲ್ಲಿ, ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಯುವಕರು ಅವರನ್ನು ಥಳಿಸಿ ಅವರ ಚೀಲವನ್ನು ಕಸಿದು ಪಲಾಯನಗೈದಿದ್ದಾರೆ. ಚೀಲದಲ್ಲಿ ಒಂದುವರೆ ಲಕ್ಷ ರೂಪಾಯಿ ಇತ್ತು.

ನಾಗಾ ಸಾಧುವಿನಿಂದ ಪೊಲೀಸರ ಮೇಲೆ ಆರೋಪ

ಅಂತಹ ಪೊಲೀಸರ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ದೂರು ನೀಡಲು ತೋರವಾ ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ಅವರ ದೂರು ಕೇಳಿಸಿಕೊಳ್ಳಲಿಲ್ಲ ಮತ್ತು ಥಳಿಸಿ ಓಡಿಸಿದರು ಎಂದು ನಾಗಾ ಸಾಧು ಗಂಗಾಪುರಿ ಮಹಾರಾಜರು ಆರೋಪಿಸಿದ್ದಾರೆ. ನಂತರ ಪೊಲೀಸ್ ಇನ್ಸ್‌ಪೆಕ್ಟರ್(ಮುಖ್ಯ ನಿರೀಕ್ಷಕರು) ಗೆ ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಹಲ್ಲೆಯಾಗಿರುವ ಬಗೆಗಿನ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ‘ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳಿಂದ ಸಾಧುವನ್ನು ಹೊಡೆಯಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಪೊಲೀಸ್ ಮುಖ್ಯಸ್ಥ ಪರಿವೇಶ ತಿವಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷತ್ತು ಒತ್ತಾಯಿಸಿದೆ.