‘ಲವ್‌ ಜಿಹಾದ್‌’ ವಿರುದ್ಧ ಕಾನೂನು ಜಾರಿಗೆ ತರಲಿರುವ ಗುಜರಾತ ಸರ್ಕಾರ

ಪ್ರತಿಯೊಂದು ರಾಜ್ಯಗಳು ‘ಲವ್ ಜಿಹಾದ್’ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸುವ ಬದಲು ಕೇಂದ್ರ ಸರ್ಕಾರವೇ ರಾಷ್ಟ್ರೀಯ ಮಟ್ಟದಲ್ಲಿ ನೇರವಾಗಿ ಕಾನೂನು ರಚಿಸಬೇಕು ಎಂದು ಹಿಂದೂಗಳಿಗೆ ಅನ್ನಿಸುತ್ತದೆ !

ಕರ್ಣಾವತಿ (ಗುಜರಾತ) – ಹಿಂದೂ ಹುಡುಗಿಯರನ್ನು ಅಪಹರಿಸಿ ಮತಾಂತರಗೊಳಿಸುವ ‘ಲವ್ ಜಿಹಾದ್’ ವಿರುದ್ಧ ಕಾನೂನುನನ್ನು ರಾಜ್ಯ ಸರ್ಕಾರ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ವಿಜಯ ರೂಪಾಣಿ ಒಂದು ಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಆಡಳಿತದ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಇಂತಹ ಕಾನೂನು ಈಗಾಗಲೇ ಜಾರಿಗೆ ಬಂದಿದೆ.

‘ಮಾರ್ಚ್ ೧ ರಿಂದ ವಿಧಾನಸಭೆಯ ಅಧಿವೇಶನ ನಡೆಯಲಿದ್ದು ನನ್ನ ಸರ್ಕಾರ ‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಬಯಸಿದೆ. ಹಿಂದೂ ಹುಡುಗಿಯರ ಅಪಹರಣವನ್ನು ನಾವು ಸಹಿಸುವುದಿಲ್ಲ. ಮಹಿಳೆಯರಿಗೆ ಆಮಿಷ ತೋರಿಸಿ ಅವರನ್ನು ಮತಾಂತರಿಸಲಾಗುತ್ತದೆ. ಈ ರೀತಿಯ ಕೃತ್ಯಗಳನ್ನು ತಡೆಯುವುದು ಈ ಹೊಸ ಕಾನೂನಿನ ಉದ್ದೇಶವಾಗಿದೆ’, ಎಂದು ರೂಪಾಣಿಯವರು ತಿಳಿಸಿದ್ದಾರೆ.