ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ರಾಜೀನಾಮೆಗೆ ಬೇಡಿಕೆ
|
ನವ ದೆಹಲಿ : ದೆಹಲಿಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಇದನ್ನು ನಿರ್ವಹಿಸುವಲ್ಲಿ ಕೇಂದ್ರ ಗೃಹ ಸಚಿವಾಲಯ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಅನೇಕ ಘಟನೆಗಳಿಂದ ಎದುರು ಬಂದಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಕೊಲೆ ಘಟನೆಗಳು ಈಗ ಸಾಮಾನ್ಯವಾಗಿದೆ. ಈ ಹತ್ಯೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣರಾಗಿದ್ದಾರೆ. ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ ಭಾರದ್ವಾಜ್ ಹೇಳಿದ್ದಾರೆ.
आप प्रवक्ता सौरभ भारद्वाज ने कहा कि भाजपा राज में हिंदू सुरक्षित नहीं हैं. | @PankajJainClick#RinkuSharmaMurder #AAP https://t.co/Z1fgI2R9BD
— AajTak (@aajtak) February 13, 2021
ದೆಹಲಿಯ ಮಂಗೋಲಪುರಿ ಪ್ರದೇಶದಲ್ಲಿ ಭಜರಂಗದಳದ ಕಾರ್ಯಕರ್ತ ರಿಂಕು ಶರ್ಮಾ ಅವರನ್ನು ಮತಾಂಧರು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಭಾರದ್ವಾಜ್ ಈ ಹೇಳಿಕೆ ನೀಡಿದ್ದಾರೆ.