ಜೌನಪುರ (ಉತ್ತರಪ್ರದೇಶ) ದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಸಾವಿಗೆ ಸಂಬಂಧಿಸಿದಂತೆ ೫ ಪೊಲೀಸರ ವಿರುದ್ಧ ಪ್ರಕರಣ ದಾಖಲು

ಅವರನ್ನು ಕೂಡಲೇ ಅಮಾನತುಗೊಳಿಸಿ ಜೈಲಿಗೆ ಹಾಕಬೇಕು. ಶೀಘ್ರಗತಿ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳ ವಿಚಾರಣೆಯನ್ನು ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಪ್ರಯತ್ನಿಸಬೇಕು !

(ಸಾಂಕೇತಿಕ ಚಿತ್ರ)

ಜೌನಪುರ (ಉತ್ತರಪ್ರದೇಶ) : ಕೃಷ್ಣಕುಮಾರ್ ಯಾದವ್ ಎಂಬವರ ಸಾವಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ಮತ್ತು ಇತರ ನಾಲ್ವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಯಾದವ್‌ನ ಸಹೋದರ ಅಜಯ ಯಾದವನು ಕೊಲೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದರು. ಕೃಷ್ಣ ಯಾದವ್‌ ಕಸ್ಟಡಿಯಲ್ಲಿ ಸಾವನ್ನಪ್ಪಿದ ಮಾಹಿತಿ ದೊರೆತ ನಂತರ ಅಲ್ಲಿ ಉದ್ವಿಗ್ನತೆ ಉದ್ಭವಿಸಿತ್ತು. ಜನರು ಇಲ್ಲಿ ರಸ್ತೆ ತಡೆ ಆಂದೋಲನವನ್ನು ಸಹ ನಡೆಸಿದ್ದರು.