ಸೋನಿಯಾ ಗಾಂಧಿ ಚುನಾಯಿತರಾದ ನಂತರ ಜನರನ್ನು ಭೇಟಿಯಾಗುವುದಿಲ್ಲ! – ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಟೀಕೆ

ಇದು ಕಾಂಗ್ರೆಸ್ ಅಧ್ಯಕ್ಷೆಯ ಕೃತಘ್ನತೆ ! ಕಾಂಗ್ರೆಸ್ಸಿನ ಗಾಂಧಿ ಕುಟುಂಬವು ದೇಶವನ್ನು ಆಳಿದಷ್ಟು ವರ್ಷಗಳು ಜನರಿಗಾಗಿ ಮತ್ತು ದೇಶಕ್ಕಾಗಿ ಏನನ್ನೂ ಮಾಡಿಲ್ಲ ಎಂಬುವುದೇ ಸತ್ಯ!

ರಾಯಬರೇಲಿ (ಉತ್ತರಪ್ರದೇಶ) – ಜನರು ನಿಮಗೆ ಮತ ಹಾಕಿ ಚುನಾಯಿಸಿರುವಾಗ ನೀವು ಆ ಜನರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಬೇಕು. ಸಾರ್ವಜನಿಕರನ್ನು ಭೇಟಿ ಮಾಡಬೇಕು; ಆದರೆ, ಇಲ್ಲಿಂದ ಚುನಾಯಿತರಾದ ಸೋನಿಯಾ ಗಾಂಧಿ ಕಳೆದ ೫ ವರ್ಷಗಳಲ್ಲಿ ಎರಡು ಬಾರಿ ಮಾತ್ರ ಇಲ್ಲಿಗೆ ಬಂದಿದ್ದಾರೆ. ಅದರಲ್ಲಿಯೂ ಒಂದು ಸಲ ಚುನಾವಣಾ ಅರ್ಜಿ ಭರ್ತಿ ಮಾಡಲು ಬಂದಿದ್ದರು ಎಂದು ಕಾಂಗ್ರೆಸ್ಸಿನ ಶಾಸಕಿಯಾದ ಅದಿತಿ ಸಿಂಗ್ ತಮ್ಮದೇ ಪಕ್ಷದವರಾದ ಸೋನಿಯಾ ಗಾಂಧಿಯನ್ನು ಟೀಕಿಸಿದ್ದಾರೆ.